ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಶ್ರೀ ಮುರಿಗೆಪ್ಪ ಖೇಣದ್ ಕಲ್ಯಾಣ ಮಂಟಪದಲ್ಲಿ ಅಕ್ಕರಕಿ ರಂಗಮ್ಮ ರಂಗಪ್ಪ ಎಜುಕೇಶನ್ ಟ್ರಸ್ಟ್ ವತಿಯಿಂದ ಟ್ರಸ್ಟ್ ಉದ್ಘಾಟನೆ ಮತ್ತು ಪರೀಕ್ಷೆ ಎದುರಿಸುವ ಕುರಿತು ಉಪನ್ಯಾಸ, ಪರೀಕ್ಷಾ ಪ್ಯಾಡ್ ಮತ್ತು ಪೆನ್ನು ವಿತರಣಾ ಸಮಾರಂಭದಲ್ಲಿ ಸಿಂಧನೂರಿನ ವನಸಿರಿ ಫೌಂಡೇಷನ್ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಅವರ ಪರಿಸರ ಕ್ಷೇತ್ರದಲ್ಲಿ ಸಾಧನೆಗೈದ ಸೇವೆ ಗುರುತಿಸಿ ರಾಜ್ಯ ಮಟ್ಟದ ಎ.ವೈ ಅಕ್ಕರಕಿ ಪರಿಸರ ರತ್ನ 2025 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಜಹೀರು ಪಾಷಾ ತಾತನವರು, ಉದ್ಘಾಟಕರು ಭಾನುಪ್ರಕಾಶ ಖೇಣದ್, ಅಧ್ಯಕ್ಷತೆಯನ್ನು ಅಕ್ಕರಕಿ ರಂಗಮ್ಮ ರಂಗಪ್ಪ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಶಿವುಕುಮಾರ ಅಕ್ಕರಕಿ, ಗೌರವ ಉಪಸ್ಥಿತಿ ಶ್ರೀಮತಿ ಪೋಲಮ್ಮ ಯಲ್ಲಪ್ಪ ಅಕ್ಕರಕಿ, ಕಾರ್ಯದರ್ಶಿ ಬಸವರಾಜ ಅಕ್ಕರಕಿ, ವನಸಿರಿ ಫೌಂಡೇಷನ್ ದೇವದುರ್ಗ ತಾಲೂಕ ಅಧ್ಯಕ್ಷ ಪ್ರಕಾಶ ಪಾಟೀಲ್ ಶಾವಂತಗೇರಿ, ರಾಜ್ಯ ಜಾಲತಾಣದ ಅಧ್ಯಕ್ಷ ಚನ್ನಪ್ಪ ಕೆ.ಹೊಸಹಳ್ಳಿ, ಸುನಿಲ್ ಜಾಡಲದಿನ್ನಿ ಹಾಗೂ ಪಟ್ಟಣದ ವಿವಿಧ ಶಾಲಾ ಕಾಲೇಜುಗಳ ಎಸ್.ಎಸ್.ಎಲ್.ಸಿ ,ಪಿ.ಯು.ಸಿ ವಿದ್ಯಾರ್ಥಿಗಳು ಇದ್ದರು.
