ವಿಜಯಪುರ: 25/2/2025 ರಂದು ಆಲಮೇಲ ನಗರದ ನಿವಾಸಿ ಶ್ರೀಮತಿ ಸರೂಬಾಯಿ ಶಿವಯ್ಯ ಹಿರೇಮಠ ಇವರು ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಿಂದ ಸಂಗ್ರಹಿಸಿದ ಹಣದಲ್ಲಿ ಹೂರಣ ರುಬ್ಬುವ ಯಂತ್ರವನ್ನು ಖರೀದಿಸಿದರು. ಅದನ್ನು ವೀಕ್ಷಿಸಲು ಆಗಮಿಸಿದ ಸಿಂದಗಿಯ ಸಿಡಿಪಿಓ ಶ್ರೀ ಶಂಭುಲಿಂಗ ಹಿರೇಮಠ ಹಾಗೂ ಮೇಲ್ವಿಚಾರಕರಾದ ಶ್ರೀಮತಿ ಜಯಶ್ರೀ ದೊಡ್ಡಮನಿ ಪ್ರಶಂಸೆ ವ್ಯಕ್ತಪಡಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ಆಲಮೇಲ ತಾಲೂಕ ಅಧ್ಯಕ್ಷರಾದ ಶ್ರೀ ಅಶೋಕ ಗೌಡ ಕೊಳಾರಿ ಮಾತನಾಡಿ ಕರ್ನಾಟಕ ಸರಕಾರದ ಈ 5 ಯೋಜನೆಗಳು ಜನಸಾಮಾನ್ಯರಿಗೆ ಬಹಳಷ್ಟು ಅನುಕೂಲವಾಗಿವೆ, ಅಷ್ಟೇ ಅಲ್ಲದೆ ಸಾಮಾನ್ಯ ಮಹಿಳೆಯರು ಕೂಡಾ ಆರ್ಥಿಕ ಪ್ರಗತಿಯಾಗಲು ಸಹಾಯಕವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿಯ ಸದಸ್ಯರಾದ ಅಬ್ದುಲ್ ವಾಬ ಸುಂಬಡ್, ಸೋಮನಾಥ ಮೇಲಿನಮನಿ, ಪ್ರಶಾಂತ ನಾಸಿ ಹಾಗೂ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಶೈಲಾ ಹೊಸಮನಿ ಬೋರಮ್ಮ ಬಜಾರ್ ಹಾಗೂ ರಾಜು ಗುಂಡದ ಮಠ ಅವರು ಉಪಸ್ಥಿತರಿದ್ದು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಶುಭ ಹಾರೈಸಿದರು.
ವರದಿ : H. C. K
