ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕ ನಮ್ಮ ಕರ್ನಾಟಕ ಸೇನೆಯ ವತಿಯಿಂದ ದೇವರ ಹಿಪ್ಪರಗಿ ತಾಲೂಕ ತಹಶೀಲ್ದಾರ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಬೆಳಗಾವಿ ಗಡಿ ಭಾಗದ ಮಹಾರಾಷ್ಟದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮಾಡುವುದು, ಕಪ್ಪು ಮಸಿ ಹಚ್ಚುವುದು, ಕರ್ನಾಟಕ ಸಾರಿಗೆ ನೌಕರರ ಮೇಲೆ ಹಲ್ಲೆ ದೌರ್ಜನ್ಯ ಎಸಗುತ್ತಿರುವುದನ್ನು ತಡೆಗಟ್ಟಬೇಕು, ಇಂತಹ ಕಿಡೆಗೇಡಿಗಳನ್ನು ಕಾನೂನು ರೀತಿ ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ದೇವರ ಹಿಪ್ಪರಗಿ ತಹಶೀಲ್ದಾರ ಕಚೇರಿಯಲ್ಲಿ ಸರ್ಕಾರಿ ನೌಕರರಿಗಿಂತ ಮಧ್ಯವರ್ತಿಗಳೇ ಜಾಸ್ತಿಯಾಗಿದ್ದಾರೆ. ನಮ್ಮ ಸುತ್ತಮುತ್ತಲಿನ ರೈತ ಬಾಂಧವರು ತಾಲೂಕು ಕಚೇರಿಗೆ ಬಂದರೆ ಅವರದ್ದು ಯಾವುದೇ ತರಹದ ಕಾಗದ ಪತ್ರದ ಕೆಲಸ ಇರಲಿ, ಇಲ್ಲಿ ಮಧ್ಯವರ್ತಿಗಳಿಲ್ಲದೆ ಕೆಲವು ಕೆಲಸಗಳೇ ಆಗೋದಿಲ್ಲ ಕಾರಣ ಏನು?
ಈ ಕಚೇರಿಯಲ್ಲಿ ಹೆಚ್ಚಿಗೆ ಹಣ ಕೊಟ್ಟರೆ ಒಂದು ವಾರದಲ್ಲಿ ಆಗುವ ಕೆಲಸ ಒಂದೇ ದಿನದಲ್ಲಿ ಮಾಡಿ ಕೊಡುತ್ತಾರೆ. ಈ ಕೆಲವು ವಿಷಯಗಳು ತಹಶೀಲ್ದಾರ್ ಅವರಿಗೆ ಕೂಡಾ ಗೊತ್ತಿಲ್ಲದೇ ನಡಿಯುತ್ತಿದೆಯೋ ಇಲ್ಲಾ ಗೊತ್ತಿದ್ದೂ ನಡೀತಾ ಇದೆಯೋ ಅಂತಾ ಗೊತ್ತಿಲ್ಲ ಆದರೆ ಈ ಮಧ್ಯವರ್ತಿಗಳು ಮಾಡುತ್ತಿರುವ ಕೆಲಸ ನಿಲ್ಲಬೇಕು. ಹಳ್ಳಿಗಳಿಂದ ಬಂದ ಸಾರ್ವಜನಿಕರಿಗೆ ಮಧ್ಯವರ್ತಿಗಳಿಲ್ಲದೆ ಕೆಲಸ ಆಗಬೇಕು ಇಲ್ಲವಾದರೆ ನಾವು ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ನಮ್ಮ ಕರ್ನಾಟಕ ಸೇನೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಹಶೀಲ್ದಾರರಿಗೆ ಮನವಿ ಕೊಟ್ಟು ಪ್ರಕಾಶ ಗುಡಿಮನಿ ರವರು ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಹಸನ್ ನದಾಫ್ ತಾಲೂಕ ಅಧ್ಯಕ್ಷರು, ಸುನೀಲ ಕನಮಡಿ, ದಾವಲಸಾಬ್ ಹೆಬ್ಬಾಳ, ರವಿಕುಮಾರ ರಾಠೋಡ, ಅರವಿಂದ, ರಮೇಶ ನಾಯ್ಕೋಡಿ, ಅಶೋಕ ಗೊಲ್ಲರ, ಶಿವನಗೌಡ ಬಿರಾದಾರ, ಇಮಾಮ ಮುಲಾ , ಹುಸೇನಸಾಬ ಕೊಕಟನೂರ, ಉಪಸ್ಥಿತರಿದ್ದರು.
ವರದಿ : ಉಸ್ಮಾನ ಬಾಗವಾನ (ಬಳಗಾನೂರ)
