ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಶೇಷ ಸನ್ಮಾನ ,ವಿದ್ಯಾರ್ಥಿಗಳಿಗೆ ಬ್ಯಾಗ್, ಪೆನ್ನು, ನೋಟ್ ಪುಸ್ತಕ ವಿತರಣೆ

ವನಸಿರಿ ಅಮರೇಗೌಡ ಮಲ್ಲಾಪುರ ಅವರ ತಾಯಿಯ 11ನೇ ವರ್ಷದ ಸವಿನೆನಪಿಗಾಗಿ ಅಡುಗೆ ಸಿಬ್ಬಂದಿಗಳಿಗೆ ವಿಶೇಷ ಸನ್ಮಾನ ,ವಿದ್ಯಾರ್ಥಿಗಳಿಗೆ ಬ್ಯಾಗ್, ಪೆನ್ನು, ನೋಟ್ ಪುಸ್ತಕ ವಿತರಣೆ ಮತ್ತು ಶಾಲೆಯ ಆವರಣದಲ್ಲಿ ಸಸಿ ನೆಟ್ಟು ಪಕ್ಷಿಗಳಿಗೆ ಗುಟುಕು ನೀರು ಉಣಿಸುವ ಕಾರ್ಯ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಳ್ಳೂರು (ಕ್ಯಾಂಪ್)ನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವನಸಿರಿ ಪೌಂಡೇಷನ್ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಅವರ ತಾಯಿಯ 11 ನೇ ವರ್ಷದ ಸವಿನೆನಪಿನ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್, ಪೆನ್ನು, ನೋಟ್ ಪುಸ್ತಕ, ವಿತರಣೆ ಹಾಗೂ ಹೂವಿನ ಸಸಿಗಳನ್ನು ನೆಡುವುದು, ಹಕ್ಕಿ ಪಕ್ಷಿಗಳಿಗೆ ಗುಟುಕು ನೀರು ಹಾಕುವುದು ಮತ್ತು ಅಡುಗೆ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಬಸವರಾಜ NGO ಮಾತನಾಡಿ ಸಿಂಧನೂರು ತಾಲೂಕು ಕಳೆದ 7-8 ವರ್ಷಗಳ ಹಿಂದೆ ಅತ್ಯಂತ ಹೆಚ್ಚು ಬಿಸಿಲಿನ ತಾಪಮಾನ ಹೊಂದಿತ್ತು. ಕುಳಿತುಕೊಳ್ಳಲು ಸ್ಥಳಾವಕಾಶ ಇದ್ದಿಲ್ಲ, ಬಿಸಿಲಿಗೆ ಜನರು ತತ್ತರಿಸಿದ್ದರು. ಆದರೆ ಆ ಕಾಲ ಈಗಿಲ್ಲ, ವನಸಿರಿ ತಂಡ ಸ್ಥಾಪನೆ ಆದಾಗಿನಿಂದ ಸಿಂಧನೂರು ತಾಲೂಕಿನಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮತ್ತು ಎಲ್ಲೆಂದರಲ್ಲಿ ಗಿಡಮರಗಳನ್ನು ನೆಟ್ಟು ಹಸಿರುಮಯ ಮತ್ತು ತಂಪಾದ ವಾತಾವರಣ, ಹಸಿರುಕರಣ ಹೊಂದಲು ವನಸಿರಿ ಅಮರೇಗೌಡ ಮಲ್ಲಾಪುರ ಅವರೇ ಕಾರಣ. ವನಸಿರಿ ತಂಡ ಕೇವಲ ಸಿಂಧನೂರು ಹಸಿರುಕರಣ ಮಾಡುವುದೊಂದೇ ಗುರಿ ಅಲ್ಲ ಅದು ಇಡೀ ಕಲ್ಯಾಣ ಕರ್ನಾಟಕವನ್ನು ಹಸಿರುಗೊಳಿಸಲು ಗುರಿಯನ್ನು ಇಟ್ಟುಕೊಂಡಿದೆ. ಇದಕ್ಕೆ ನಾವುಗಳೆಲ್ಲರೂ ಸಹಾಯ ಸಹಕಾರ ನೀಡುವ ಮೂಲಕ ಹಸಿರುಕರಣಕ್ಕೆ ಕೈಜೋಡಿಸೋಣ ಎಂದು ತಿಳಿಸಿದರು.

ಕ್ಷೇತ್ರ ಸಮನ್ವಯ ಅಧಿಕಾರಿ ಬಸಲಿಂಗಪ್ಪ ಮಾತನಾಡಿ ಸಿಂಧನೂರಿನ ಎಲ್ಲಾ ಸರಕಾರಿ ಶಾಲೆಗಳಲ್ಲಿ ಗಿಡಗಳನ್ನು ನೆಟ್ಟು, ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡುವ ಮೂಲಕ ಪರಿಸರ ಜಾಗೃತಿ ಮೂಡಿಸಿ ಎಲ್ಲಾ ಶಾಲೆಗಳನ್ನು ಹಸಿರುಕರಣಗೊಳಿಸಿದ ಕೀರ್ತಿ ಅಮರೇಗೌಡ ಮಲ್ಲಾಪುರ ಅವರಿಗೆ ಸಲ್ಲುತ್ತದೆ. ತಾಲೂಕಿನಲ್ಲಿ ಶಾಲೆಗಳಲ್ಲಿ ಇನ್ನೂ ಹೆಚ್ಚಿನ ಹಸಿರುಕರಣಗೊಳಿಸಲು ನಮ್ಮ ಶಿಕ್ಷಣ ಇಲಾಖೆ ಸದಾಕಾಲ ಸಹಕಾರ ನೀಡುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಬಸಲಿಂಗಪ್ಪ ಸಮನ್ವಯ ಅಧಿಕಾರಿಗಳು ಕ್ಷೇತ್ರಶಿಕ್ಷಣ ಇಲಾಖೆ, ಹಿರಿಯರಾದ NGO ಬಸವರಾಜ, ಮಲ್ಲಾಪುರ vssn ಅಧ್ಯಕ್ಷ ಶ್ರೀ ಬಸರಾಜ್ ನಿಟ್ಟೂರು,ಬಸವರಾಜ್ ಹುಣಿಸಿಗಿಡ ಮಲ್ಲಾಪುರ, ವೀರೇಶ ಗದ್ರಟಗಿ ವಕೀಲರು, ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಮಾನಮ್ಮ, ರಾಮದಾಸ ನಾಯಕ, ECO ಹನುಮಂತಪ್ಪ ಬಂಡಿ ವಡ್ಡರ, BRP ರವಿ ಪವರ್, CRP ಷಣ್ಮುಖಗೌಡ, ಜವಳಗೆರೆ ಸಿ ಆರ್ ಪಿ ರಾಜೇಶ ಸಾಬ್, ರಾಮದಾಸ್, ಮಾಜಿ ಅಧ್ಯಕ್ಷರು ಅಶೋಕ ಗಾಜಿ, ಸಂಘಟನಾ ಕಾರ್ಯದರ್ಶಿ ಹುಸೇನ್ ಸಾಬ್, NPS ಅಧ್ಯಕ್ಷರು ದುರ್ಗಪ್ಪ ಗುಡದೂರು, ಅಮೀನುದ್ದೀನ್ ಶಿಕ್ಷಕರು, ಸುರೇಶ ವಿರಪಾಪುರ, ರಾಜು ಪತ್ತಾರ ಮಸ್ಕಿ ತಾಲೂಕ ಅಧ್ಯಕ್ಷ, ಮುದಿಯಪ್ಪ ಹೊಸಳ್ಳಿ ಕ್ಯಾಂಪ್, ಅಭಿ ಮೇಟಿ ಮಲ್ಲಾಪುರ, ನರಸನಗೌಡ ನಾಗರಾಳ ಮಲ್ಲಾಪುರ, ಗ್ರಾಮ ಪಂಚಾಯತ ಸದಸ್ಯರು ಅಮರೇಶಗೌಡ, SDMC ಉಪಾಧ್ಯಕ್ಷರು ಸುರೇಶ ಹಾಗೂ ಶಾಲೆಯ ವಿದ್ಯಾರ್ಥಿಗಳು, ವನಸಿರಿ ಸರ್ವ ಸದಸ್ಯರು ಭಾಗಿಯಾಗಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ