ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸೂಳೇರಿಪಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಚಳ್ಳಿ ಗ್ರಾಮದ ಕಾಳೇಗೌಡ, ಉಪಾಧ್ಯಕ್ಷರಾಗಿ ರಾಜೇಂದ್ರ ಅವಿರೋಧವಾಗಿ ಆಯ್ಕೆಯಾದರು. ಸೂಳೇರಿಪಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಪರ ಸಂಘದಲ್ಲಿ 12 ಜನ ನಿರ್ದೇಶಕರಿದ್ದು, ಕಾಂಗ್ರೆಸ್ ಬೆಂಬಲಿತ 7 ಬಿಜೆಪಿ ಬೆಂಬಲಿತ 3 ಜೆಡಿಎಸ್ ಬೆಂಬಲಿತ 2 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು.ಇತ್ತೀಚಿಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಚಳ್ಳಿ ಗ್ರಾಮದ ಕಾಳೇಗೌಡ ಅಧ್ಯಕ್ಷ ಸ್ಥಾನಕ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ ರಾಜೇಂದ್ರ ನಾಮಪತ್ರ ಸಲ್ಲಿಸಿದ್ದರು. ಈ ಸ್ಥಾನಗಳಿಗೆ ಬೇರೊಬ್ಬರು ನಾಮಪತ್ರ ಸಲ್ಲಿಸದೆ ಇರುವುದರಿಂದ ಚುನಾವಣಾ ಅಧಿಕಾರಿಯಾಗಿದ್ದ ಮಹಮ್ಮದ್ ನದೀಮ್ ರವರು ಅವಿರೋಧ ಆಯ್ಕೆ ಎಂದು ಘೋಷಣೆ ಮಾಡಿದರು. ಕಾರ್ಯದರ್ಶಿ ಇರ್ಷಾದ್ ಮಹಮ್ಮದ್ ಶರೀಫ್, ಎಂ ಸಿ ಡಿ ಸಿ ಸಿ ಬ್ಯಾಂಕ್ ನ ಮೇಲ್ವಿಚಾರಕ ಬಾಲಾಜಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ನೂತನ ಅಧ್ಯಕ್ಷ ಕಾಳೇಗೌಡ ಮಾತನಾಡಿ ಕಳೆದ ಸಾಲಿನಲ್ಲಿ 280 ಷೇರುದಾರರಿಗೆ ಶೂನ್ಯ ಬಡ್ಡಿ ದರದಲ್ಲಿ ಮೂರು ಕೋಟಿಗೂ ಹೆಚ್ಚು ಸಾಲ ಕೊಡಿಸಲಾಗಿತ್ತು. ಈ ಬಾರಿಯೂ ಹೆಚ್ಚಿನ ಷೇರುದಾರರಿಗೆ ಸಾಲ ಕೊಡಿಸುವ ಮೂಲಕ ರೈತರನ್ನು ಆರ್ಥಿಕವಾಗಿ ಸದೃಢರಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಸಿಹಿ ಹಂಚಿ ಸಂಭ್ರಮ:
ಸೂಳೇರಿ ಪಾಳ್ಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಕಾಳೇಗೌಡ ವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತರು , ನಿರ್ದೇಶಕರಾದ ಕಲಂದರ್, ಮುತ್ತೇಗೌಡ, ಮಲ್ಲೇಗೌಡ, ಹೊನ್ನೇಗೌಡ, ರಫೀಕ್, ಶ್ರೀಕಂಠ ಆರಾಧ್ಯ. ಕಾಳೇಗೌಡ, ರಾಜೇಂದ್ರ, ಬಸವರಾಜು. ಶಿವಲಿಂಗ ಚಾರಿ, ವಸಂತಮ್ಮ. ಕೆಂಪನಂಜಮಣಿ ತಾ.ಪಂ ಮಾಜಿ ಸದಸ್ಯ ನಟರಾಜು, ಮುಖಂಡರಾದ ಫೈರೋಜ್ ಪಾಷಾ, ಮುಷೀರ್ ಅಹಮದ್ ಬೇಗ್, ಸೈಯದ್ ಅಜ್ಜರ್. ಗುರು ಎಂ, ಸೋಮಣ್ಣ, ಚೆನ್ನಯ್ಯ, ಕಾಂಚನಳ್ಳಿ ನಾರಾಯಣ, ಶಿವರುದ್ರ, ಸೈಯದ್ ಉಸ್ಮಾನ್, ಗಾರೆ ಮಹೇಶ್ ಪಾಲ್ಗೊಂಡಿದ್ದರು.
ವರದಿ :ಉಸ್ಮಾನ್ ಖಾನ್
