ಯಾದಗಿರಿ/ ಶಹಾಪುರ: ಏಪ್ರಿಲ್ 30 ರವರೆಗೆ ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣ ಶಹಾಪುರ ತಾಲೂಕು ಅಧ್ಯಕ್ಷರು ದೇವಿಂದ್ರಪ್ಪ ಕೊಳ್ಕರ್ ಶಿರವಾಳ ಅವರು ಶಹಾಪುರ ನಗರದಲ್ಲಿ ಪತ್ರಿಕಾ ಹೇಳಿಕೆ ಮೂಲಕ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳಿಗೆ ಒತ್ತಾಯಿಸಿ ಮಾತನಾಡಿದರು. ಈಗಾಗಲೇ ಹಿಂಗಾರು ಹಂಗಾಮು ಬೆಳೆಗಳ ಫಸಲು ಇವೆ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದ್ದು ಬೆಳೆದಂತ ಬೆಳೆಗಳಾದ ಭತ್ತ ಶೇಂಗಾ ಸಜ್ಜಿ ಇನ್ನಿತರ ಬೆಳೆಗಳ ಫಸಲು ಕಾಲುವೆಗಳಿಗೆ ನೀರು ನೀಡುವ ಅವಧಿ ಮಾರ್ಚ್ 23 ಕ್ಕೆ ಕೊನೆಯದಾಗಿದೆ ಈ ಅವಧಿಯಲ್ಲಿ ಯಾವ ಬೆಳೆಗಳ ಫಸಲು ಸಂಪೂರ್ಣವಾಗಿ ಬರುವುದಿಲ್ಲ ಆದ್ದರಿಂದ ಇನ್ನೂ ನೀರಿನ ಅವಶ್ಯಕತೆ ಹೆಚ್ಚು ಇದೆ ನೀರಿನ ಸಮಸ್ಯೆಯಿಂದ ಕೋಟ್ಯಾಂತರ ರೂಪಾಯಿ ರೈತರ ಬೆಳೆ ಫಸಲಿಗೆ ಹಾನಿ ಉಂಟಾಗುತ್ತದೆ ಇದರಿಂದ ಎಚ್ಚೆತ್ತುಕೊಂಡು ಸರ್ಕಾರವು ಎಲ್ಲಾ ರೈತರ ಸಂಪೂರ್ಣ ಬೆಳೆಗಳ ಫಸಲು ಬರಬೇಕಾದರೆ ಏಪ್ರಿಲ್ 30 ರವರೆಗೆ ನೀರನ್ನು ಕೊಡುವುದರ ಮೂಲಕ ರೈತರ ಹಿತವನ್ನು ಕಾಪಾಡಬೇಕು ಎಂದು ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಧ್ಯಮದ ಮೂಲಕ ಒತ್ತಾಯಿಸಿದರು.
- ಕರುನಾಡ ಕಂದ
