ಗ್ಯಾರಂಟಿ ಹೆಸರಿನಲ್ಲಿ ದಲಿತರಿಗೆ ಮೋಸ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಬಿಜೆಪಿ
ಬಳ್ಳಾರಿ ನಗರದ ಕನಕ ದುರ್ಗಮ್ಮ ದೇವಸ್ಥಾನದಿಂದ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ವರೆಗೂ ಕಾಂಗ್ರೆಸ್ ವಿರುದ್ಧ ಬಿಜೆಪಿಯವರು ಪ್ರತಿಭಟನೆಯನ್ನು ಮಾಡುತ್ತಾ ಹಾಗೂ ಕಾಂಗ್ರೆಸ್ ಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿ ವರೆಗೂ ಪ್ರತಿಭಟನೆಯನ್ನು ಮಾಡಿಕೊಂಡು ಬರುತ್ತಾರೆ ದಲಿತರ ಅನುದಾನವನ್ನು ಹಲವಾರು ಕಾರ್ಯಕ್ರಮಗಳಿಗೆ ಬಳಸಿಕೊಂಡಂತಹ ಸರ್ಕಾರ ಇಂದು ದಲಿತರಿಗೋಸ್ಕರ ತುಂಬಾ ವಿರಳವಾಗಿ ಕಾರ್ಯ ನಿರ್ವಹಿಸುತ್ತಿದೆ ಈ ಕರ್ನಾಟಕದಲ್ಲಿ ಗ್ಯಾರಂಟಿ ಸರ್ಕಾರ ಎಂದು ಕಾಂಗ್ರೆಸ್ ವಿರುದ್ಧವಾಗಿ ಬಿಜೆಪಿಯವರು ಬಳ್ಳಾರಿಯಲ್ಲಿ ಕಾಂಗ್ರೆಸ್ ವಿರುದ್ಧ ಕೂಗುಗಳನ್ನು ಕೂಗುತ್ತಾ ದಲಿತರಿಗೆ ಬರಬೇಕಾದಂತಹ ಅನುದಾನದಲ್ಲಿ ಬೇರೆ ಅನ್ಯ ಕಾರ್ಯಕ್ರಮಗಳಿಗೆ ಬಳಸಿಕೊಂಡು ದಲಿತರಿಗೆ ಅನ್ಯಾಯ ಆಗುತ್ತಿದೆ ಆದರಿಂದ ದಲಿತರ ಏಳಿಗೆಗೋಸ್ಕರ ಮೀಸಲಿಟ್ಟಂತ ಅನುದಾನ ಅದು ದಲಿತರಿಗೆ ಸಿಗಬೇಕು ಸರ್ಕಾರ ಎಲ್ಲಾ ಅನುದಾನಗಳಲ್ಲಿ ಮೀಸಲಿಟ್ಟಂತಹ ದಲಿತರಿಗೆ ಮೀಸಲಿಟ್ಟಂತಹ ಅನುದಾನ ದಲಿತರ ಪಾಲಾಗುತ್ತಿಲ್ಲ ಬೇರೆ ಯಾವುದೋ ಕಾರ್ಯಗಳಿಗೆ ಬಳಸಿಕೊಂಡು, ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಂಡು ಸರಿಯಾದ ರೀತಿಯಲ್ಲಿ ದಲಿತರಿಗೆ ಸವಲತ್ತುಗಳನ್ನು ಒದಗಿಸಿಕೊಡುವುದು ಇಲ್ಲದೆ ಈ ಸರ್ಕಾರಕ್ಕೆ ಧಿಕ್ಕಾರವಿರಲಿ ಎಂಬ ಘೋಷಣೆಯನ್ನು ಸಹ ಕೂಗುತ್ತಾ ಜಿಲ್ಲಾ ಕಚೇರಿಗೆ ಮನವಿಯನ್ನು ತಲುಪಿಸಿದರು.
ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಸುರೇಶ್ ಬಾಬು, ಚಲವಾದಿ ನಾರಾಯಣಸ್ವಾಮಿ, ಶಿವಪ್ಪ ನಾಯಕ ಬಿಜೆಪಿಯ ವಿಜಯನಗರ ಬಳ್ಳಾರಿ ಜಿಲ್ಲಾಧ್ಯಕ್ಷರು ತಾಲೂಕು ಅಧ್ಯಕ್ಷರು ಎಸ್ ಪಿ ಮೋರ್ಚಾ ಜಿಲ್ಲಾ ಅಧ್ಯಕ್ಷರು, ಇನ್ನು ದಲಿತ ಪರ ಯುವ ಸಂಘಟನೆಗಳು ಹಾಗೂ ಬಿಜೆಪಿ ಯುವ ಸಂಘಟನೆಗಳು ಬಿಜೆಪಿಯ ಮುಖಂಡರು ಸೇರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
