ಚಾಮರಾಜನಗರ: RBI ಪ್ರಾಯೋಜಿತ ಕಾರ್ಯಕ್ರಮವಾದ 2025 ರ ಆರ್ಥಿಕ ಸಾಕ್ಷರತಾ ಸಪ್ತಾಹ ಕಾರ್ಯಕ್ರಮದ ಮೂಲಕ ಫೆಬ್ರವರಿ 24 ರಿಂದ ಫೆಬ್ರವರಿ 28 ರವರೆಗೆ ಹಣಕಾಸು ಸಾಕ್ಷರತೆ ಮತ್ತು ಮಹಿಳಾ ಸಮೃದ್ಧಿ ಧ್ಯೇಯ ವಾಕ್ಯದೊಂದಿಗೆ ಗುಂಡ್ಲುಪೇಟೆ ತಾಲ್ಲೂಕಿನ ಬನ್ನಿತಾಳಪುರ, ರಾಘವಪುರ, ಹಿರಿಕಾಟಿ ಗ್ರಾಮಗಳಲ್ಲಿ NRLM SHG ಘಟಕ ಗುಂಡ್ಲುಪೇಟೆ ಸಹಯೋಗದೊಂದಿಗೆ ಆರ್ಥಿಕ ಸಾಕ್ಷರತಾ ಕೇಂದ್ರ ಯಳಂದೂರು ಧಾನ್ ಫೌಂಡೇಶನ್ ಮತ್ತು ಲೀಡ್ ಬ್ಯಾಂಕ್ ಚಾಮರಾಜನಗರ ಹಾಗೂ ಆರ್ಥಿಕ ಸಾಕ್ಷರತಾ ಕೇಂದ್ರ ಗುಂಡ್ಲುಪೇಟೆ ಆಯೋಜಕತ್ವದ ಜಂಟಿ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮದ ಮೂಲಕ ಪ್ರತಿಯೊಂದು ಸ್ವ – ಸಹಾಯ ಸಂಘದ ಮಹಿಳಾ ಸದಸ್ಯರಿಗೆ ಸಂಘಗಳ ಪುನಶ್ಚೇತನ ಹಾಗೂ ಹಣಕಾಸು ಸುರಕ್ಷತೆ, ಮಹಿಳಾ ಉಳಿತಾಯದಿಂದ ಕೌಟುಂಬಿಕ ಉಳಿತಾಯಕ್ಕೆ ಉತ್ತೇಜನ, ಸರ್ಕಾರಿ ಸೌಲಭ್ಯಗಳ ಸದುಪಯೋಗ, ಮಹಿಳೆಯರಲ್ಲಿ ಆರ್ಥಿಕ ಸಬಲೀಕರಣ ಮತ್ತು ಸ್ವ ಉದ್ಯೋಗ ಚಟುವಟಿಕೆಗಳು
ಪ್ರತಿಯೊಬ್ಬರಲ್ಲೂ ಉಳಿತಾಯ, ಹೂಡಿಕೆ ಯೋಜನೆ, ಆಯವ್ಯಯ, ಸಾಲ ಮತ್ತು ಮರುಪಾವತಿ ,ಸಾಮಾಜಿಕ ಭದ್ರತಾ ಯೋಜನೆಗಳ ಸದುಪಯೋಗ, ಸಾರ್ವಜನಿಕ ಕುಂದುಕೊರೆತೆಗಳ ನಿವಾರಣಾ ಅಧಿಕಾರಿ (ಲೋಕಪಾಲ್ ) ಒಂಬುಡ್ಸ್ ಮನ್ ಬಗ್ಗೆ ತಿಳುವಳಿಕೆ, ರೂಪೆ ಕಾರ್ಡ್, ಸದುಪಯೋಗ ಆನ್ಲೈನ್ ವಂಚನೆ ಪ್ರಕರಣಗಳು ಮತ್ತು ಪರಿಹಾರ ಬ್ಯಾಂಕ್ ಮತ್ತು ಮೈಕ್ರೋ ಫೈನಾನ್ಸ್ ಬಡ್ಡಿ ದರ ವ್ಯತ್ಯಾಸ, ಮೈಕ್ರೋ ಫೈನಾನ್ಸ್ ಗಳ ಸಾಲ ವಸೂಲಾತಿಯಲ್ಲಿ ಉಂಟಾಗುವ ಕಿರುಕುಳ ಮತ್ತು ಇವುಗಳ ವಿರುದ್ದ ಇರುವ ಪರಿಹಾರ ಗಳು RBI ನಿಯಮಗಳು ಮತ್ತು ಕಾನೂನು ನಿಯಮಗಳು, ಮಹಿಳೆಯರ ಸುರಕ್ಷತೆ, ಸಾಲ ಹೆಚ್ಚಳದಿಂದ ಉಂಟಾಗುವ ದುಷಪರಿಣಾಮಗಳು. ಸೈಬರ್ ವಂಚನೆ ಪ್ರಕರಣಗಳು ಮತ್ತು ಪರಿಹಾರ, ಡಿಜಿಟಲ್ ಬ್ಯಾಂಕಿಂಗ್ ನ ಮಹತ್ವ, ATM ದುರುಪಯೋಗ, ಆನ್ಲೈನ್ ಗೇಮ್, ಆನ್ಲೈನ್ ಫೈನಾನ್ಸ್, OTP passward ದುರುಪಯೋಗ ಮೊದಲಾದ ವಿಚಾರಗಳ ಬಗ್ಗೆ ಅರಿವು ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಸಿದ ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಖಾ ರವರು ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸಿ ಜನರಿಗೆ ಆರ್ಥಿಕ ಶಿಕ್ಷಣ ನೀಡುವಲ್ಲಿ ಧಾನ್ ಫೌಂಡೇಶನ್ ಸಂಸ್ಥೆ ತನ್ನ ಆರ್ಥಿಕ ಸಾಕ್ಷರತ ಕೇಂದ್ರ ಗಳ ಮೂಲಕ ಮಾಡುತಿರುವ ಶ್ರಮ ಶ್ಲಾಘನೀಯ ಎಂದು ಸಿ. ಎಫ್. ಎಲ್ ಕೋ- ಆರ್ಡಿನೇಟರ್ ಗೋವಿಂದರಾಜು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾಹಿತಿ ನೀಡುತಿರುವುದು ತುಂಬಾ ಉಪಯೋಗಿಕರವಾಗಿದೆ ಎಂದು ಬಣ್ಣಿಸಿದರು.
ವಿವಿಧ ಗ್ರಾಮಗಳಲ್ಲಿ ಆಯೋಜಿಸಿದ ಕಾರ್ಯಕ್ರಮ ಗಳ್ಳಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಖಾರವರು SBI ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ರಾಕೇಶ ರವರು ಬ್ಯಾಂಕ್ ಮಾರ್ಗದರ್ಶಕರು ಮಾದೇವಪ್ಪರವರು, FI ಮ್ಯಾನೇಜರ್ ಪವನ್ ತೇಜ ಚಾಮರಾಜನಗರ, NRLM ನ SHG ಸಂಘಗಳ ಸಂಚಾಲಕರು ಗುಂಡ್ಲುಪೇಟೆ ಪುಟ್ಟಮ್ಮರವರು ,
pdo ಮಂಜು ಹೊರೆಯಾಲ ಗ್ರಾಮ ಪಂಚಾಯಿತಿ,
RD ಉಲ್ಲಾಸ್ ರಾಘವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಮುತ್ತುರಾಜ್ ರವರು
ಶೋಷಿತ ಸಮುದಾಯದ ಅಧ್ಯಕ್ಷರು ಮತ್ತು ಮಾನವ ಹಕ್ಕುಗಳ ಜಿಲ್ಲಾ ಕಾರ್ಯದರ್ಶಿ ,BOB ಬ್ಯಾಂಕ್ FLC ಚಂದ್ರಶೇಖರ್, ಆರ್ಥಿಕ ಸಾಕ್ಷರತಾ ಸಹಾಯಕರು ಗುಂಡ್ಲುಪೇಟೆ ವಸಂತ, ಆರ್ಥಿಕ ಸಾಕ್ಷರತಾ ಕೇಂದ್ರ ಯಳಂದೂರು CFL ಸಂಯೋಜಕರು ಗೋವಿಂದರಾಜು, ವಿವಿಧ ಗ್ರಾಮ ಪಂಚಾಯಿತಿಯ MBK ಗಳು, ಪಶು ಸಖಿ ಕೃಷಿ ಸಖಿ, ಆಶಾ – ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸ್ವ – ಸಹಾಯ ಸಂಘದ ಸದಸ್ಯರುಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
- ಕರುನಾಡ ಕಂದ
