
ಚಾಮರಾಜನಗರ/ ಹನೂರು :
ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವಕ್ಕೆ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನಸ್ವಾಮಿಗಳು ಹಾಗೂ ಶಾಸಕ ಎಂ.ಆರ್ ಮಂಜುನಾಥ್ ಚಾಲನೆ ನೀಡಿದರು.
ಮಹಾರಥವನ್ನು ವಿವಿಧ ಪುಷ್ಪಗಳಿಂದ ಸಿಂಗಾರ ಮಾಡಲಾಗಿತ್ತು, ದೇಗುಲವನ್ನು ತಳಿರು ತೋರಣದಿಂದ ಸಿಂಗಾರ ಮಾಡಲಾಗಿತ್ತು. ಬೇಡಗಂಪಣ ಸರದಿ ಅರ್ಚಕರು ಛತ್ರಿ, ಚಾಮರ, ವಾದ್ಯ ಮೇಳದೊಂದಿಗೆ ದೇಗುಲ ಪ್ರದಕ್ಷಿಣೆ ಹಾಕಿ ವಿಶೇಷ ಪೂಜೆಯನ್ನು ಸಲ್ಲಿಸಿ ಮೆರವಣಿಗೆಯ ಮೂಲಕ ಉತ್ಸವ ಮೂರ್ತಿಯನ್ನು ಮಹಾರಥೋತ್ಸವವಕ್ಕೆ ತರಲಾಯಿತು. ಸ್ವಾಮಿಗೆ ಸಂಕಲ್ಪಮಾಡಿ, ಅಷ್ಟೋತ್ತರ, ಬಿಲ್ವಾರ್ಚನೆ, ದೋಪ ದೀಪ ನೈವೇದ್ಯ ಮಹಾಮಂಗಳಾರತಿ ನೆರವೇರಿಸಿದರು. ಈ ವೇಳೆ ಭಕ್ತರು ಉಘೇ ಉಘೇ ಮಹಂತ ಮಲ್ಲಯ್ಯಾ, ಉಘೇ ಮಾದಪ್ಪ ಉಘೇ, ಸಾಲೂರುಮಠದೊಡೆನಿಗೆ ಉಘೇ ಉಘೇ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಭಕ್ತಿ ಭಾವದ ಸಂಗಮದಲ್ಲಿ ಭಕ್ತರು ಮುಳುಗಿದರು.
ನಂತರ ಮಾತನಾಡಿದ ಶಾಸಕರು ಸಾಲೂರು ಶ್ರೀಗಳ ಆಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಹಕಾರದಿಂದ ಶಿವರಾತ್ರಿ ಮಹೋತ್ಸವ ಯಶಸ್ವಿಗೊಂಡಿದೆ ಮಾದಪ್ಪ ನಾಡಿನ ಜನಕ್ಕೆ ಸುಖ ಶಾಂತಿ ನೆಮ್ಮದಿ ನೀಡಲಿ ಎಂದರು.
ಇದೆ ಸಂದರ್ಭದಲ್ಲಿ ಸಾಲೂರು ಮಠದ ಸ್ವಾಮಿಗಳ ಶಾಂತಮಲ್ಲಿಕಾರ್ಜುನ ಸ್ವಾಮಿ, ಪ್ರಾಧಿಕಾರದ ಕಾರ್ಯದರ್ಶಿ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಡಿವೈಎಸ್ಪಿ ಧಮೇಂದ್ರ, ಮುಖಂಡರುಗಳಾದ ಮಂಜೆಶ್ ಗೌಡ, ಡಿ ಆರ್ ಮಾದೇಶ್, ರಾಜೂಗೌಡ, ಚಿನ್ನ ವೆಂಕಟ್, ಡಿ.ಕೆ ರಾಜು, ಸುರೇಶ್, ವಿಜಯ್ ಕುಮಾರ್ ,ಮಧುವನಹಳ್ಳಿ ನಿಂಗರಾಜು, ವೆಂಕಟೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್
