ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಪೊಲೀಸ್ ಠಾಣೆ ವತಿಯಿಂದ ಸಂಚರಿಸುವಾಗ ರಸ್ತೆಯಲ್ಲಿ ಹಲವಾರು ಹಿತಕರ ಘಟನೆಗಳು ಸಂಭವಿಸಬಹುದು, ಯಾವುದೇ ಸುರಕ್ಷತಾ ಸಾಧನೆಗಳನ್ನು ಬಳಸದೆ ರಸ್ತೆಯಲ್ಲಿ ದ್ವಿಚಕ್ರ ವಾಹನ ಹಾಗೂ ಕಾರು ಚಲಾಯಿಸುವಾಗ ಬೆಲ್ಟ್ ಧರಿಸದೆ ಇರುವುದು ಯಾವುದೇ ಸುರಕ್ಷತಾ ಕ್ರಮಗಳನ್ನು ಬಳಸದೆ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವ ಸಂದರ್ಭದಲ್ಲಿ ಅಪಘಾತ ಘಟನೆಗಳು ಸಂಭವಿಸಬಹುದು ಹಾಗೂ ಗುಡೆಕೋಟೆ ಪಿ.ಎಸ್.ಐ ಸುಬ್ರಹ್ಮಣ್ಯಂ ಜಿ ಮಾತನಾಡುತ್ತಾ ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಕರೆದೊಯ್ಯುವ ಸಂದರ್ಭದಲ್ಲಿ ಸುಮಾರು 9 ತಿಂಗಳಿಂದ ನಾಲ್ಕು ವರ್ಷದೊಳಗಿನ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಸಂಚಾರಿಸುವಾಗ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು ಯಾಕೆಂದರೆ ಚಿಕ್ಕ ಮಕ್ಕಳಿಂದು ಎಷ್ಟೋ ಪೋಷಕರು ಬೇಜವಾಬ್ದಾರಿತದಿಂದ ಮಕ್ಕಳ ಉನ್ನತ ಭವಿಷ್ಯವನ್ನೇ ಹಾಳು ಮಾಡುಬಾರದು ಕೆಲವೊಂದು ಸಂದರ್ಭದಲ್ಲಿ ಪೋಷಕರೇ ಅದಕ್ಕೆ ಎಡೆ ಮಾಡಿಕೊಡಬೇಕಾಗ ಅಂತ ಸಂದರ್ಭ ಒದಗಿ ಬರಬಹುದು ಅದಕ್ಕಾಗಿ ತನ್ನ ಕುಟುಂಬಕ್ಕಾಗಿ ತನ್ನ ಮಕ್ಕಳ ಭವಿಷ್ಯಕ್ಕಾಗಿ ಸಂಚರಿಸುವಾಗ ಹೆಲ್ಮೆಟ್ ಅನ್ನು ಧರಿಸಿ ಮುಂದೆ ಆಗುವಂತಹ ಅನಾಹುತಗಳಿಗೆ ಅಥವಾ ಅಪಘಾತಗಳಿಗೆ ಮುಂಜಾಗ್ರತೆಯನ್ನು ವಹಿಸಬೇಕಾದಂತ ಕರ್ತವ್ಯ ಪೋಷಕರದಾಗಿರುತ್ತದೆ ಅದನ್ನು ಕಡ್ಡಾಯವಾಗಿ ಪಾಲಿಸಿ ಎಂದರು. ಇನ್ನೂ ಒಂದು ವಿಷಯವೇನೆಂದರೆ 18 ವರ್ಷದೊಳಗಿನ ಮಕ್ಕಳು ಯಾವುದೇ ವಾಹನ ಚಾಲನೆಯನ್ನು ಮಾಡಬಾರದು ಮಕ್ಕಳು ವಾಹನ ಚಲಾಯಿಸಿದರೆ ಪೋಷಕರಿಗೆ ದಂಡ ವಿಧಿಸಲಾಗುವುದು ಹಾಗೂ ವಾಹನದ ಚಾಲನೆ ಪರವಾನಿಗೆ ಹೊಂದಿದವರಿಗೆ ಹಾಗೂ 18 ವರ್ಷ ಮೇಲ್ಪಟ್ಟ ಅವರು ವಾಹನವನ್ನು ಚಲಾಯಿಸಿ ವಾಹನ ಬೇರೆ ಯಾರದೇ ಆದರೂ 18 ವರ್ಷಕ್ಕಿಂತ ಮಕ್ಕಳು ವಾಹನವನ್ನು ಚಾಲನೆ ಮಾಡಿದ್ದಲ್ಲಿ ಅಂತಹ ವಾಹನದ ಮಾಲೀಕನಿಗೆ ದಂಡ ವಿಧಿಸುವಂತಹ ಸಂದರ್ಭ ಬರುತ್ತದೆ ಸಂಚಾರ ಸುರಕ್ಷತೆ ನಿಯಮಗಳನ್ನು ಹಾಗೂ ಕೆಲವೊಂದು ನಿಯಮಗಳ ರಸ್ತೆಯಲ್ಲಿ ಸಂಚರಿಸುವಾಗ ನೋಡಿಕೊಂಡು ಕೆಲವೊಂದು ನಿಯಮಗಳನ್ನು ಪಾಲಿಸುವುದು ತುಂಬಾ ಮುಖ್ಯ ಎಂದರು.
ಎ.ಎಸ್.ಐ ಯೋಗೇಶ್ ಅವರು ಮಾತನಾಡುತ್ತಾ ರಸ್ತೆ ಸಂಚಾರ ಮಾಡುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸಿಕೊಂಡು ಹಾಗೂ ಮುಂದಿನ ನಮ್ಮ ಉಜ್ವಲ ಭವಿಷ್ಯ ಹಾಗೂ ಮಕ್ಕಳ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ನಮ್ಮಿಂದ ಸಾಧ್ಯ ಅದಕ್ಕಾಗಿ ಪೋಷಕರು ಸಾಧ್ಯವಾದಷ್ಟು ಮಕ್ಕಳ ಕೈಗೆ ವಾಹನಗಳನ್ನು ಕೊಡಬೇಡಿ ಸುರಕ್ಷಿತದಿಂದ ವಾಹನವನ್ನು ಸಂಚರಿಸಿ “ಮನೆಯಲ್ಲಿ ಅಮ್ಮ ರಸ್ತೆಯಲ್ಲಿ ಯಮ” ಯಾವಾಗಲೂ ಕಾಯ್ತಾ ಇರುತ್ತಾರೆ ಅದಕ್ಕಾಗಿ ನಾವು ಸುರಕ್ಷತೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ ಮತ್ತು ಸಂಚರಿಸುವಾಗ ನಿಯಮವನ್ನು ಪಾಲಿಸಿಕೊಂಡು ತುಂಬಾ ಜಾಗೃತೆಯಿಂದ ಇರಬೇಕಾಗುತ್ತದೆ ಎಂದರು.
ಪಿಎಸ್ಐ ಸುಬ್ರಹ್ಮಣ್ಯ ಜಿ ಹಾಗೂ ಎಎಸ್ಐ ಯೋಗೇಶ್ ಹಾಗೂ ಸಿಬ್ಬಂದಿಗಳಾದ ನಾಗೇಶ್, ಗುರುಸ್ವಾಮಿ, ಉಜ್ಜಪ್ಪ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಗುರುಗಳಾದ ವೆಂಕಟೇಶ್ ಹಾಗೂ ಶಾಲೆಯ ಶಿಕ್ಷಕರು ಮತ್ತು ಶಾಲೆಯ ವಿದ್ಯಾರ್ಥಿಗಳು ಹಾಗೂ ಊರಿನ ಗ್ರಾಮಸ್ಥರು ಸೇರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
