ಕಲಬುರಗಿ/ ಕಾಳಗಿ : ಪ್ರತೀ ವರ್ಷದಂತೆ ಈ ವರ್ಷವೂ ಕೂಡಾ ಶಿವರಾತ್ರಿ ಅಮಾವಾಸ್ಯೆಯ ದಿನದಂದು ಕೋರವಾರ ಗ್ರಾಮದ ಅಣಿ ಪರ್ವತದಲ್ಲಿ ನೆಲೆಸಿದ ಶ್ರೀ ಅಣ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವು ಸಡಗರ ಸಂಭ್ರಮದಿಂದ ಜರುಗಿತು ಈ ನಡುವೆ ಅಸಂಖ್ಯಾತ ಲಕ್ಷ ಲಕ್ಷ ಭಕ್ತರು ಭಾಗವಹಿಸಿದ್ದರು ಕರ್ನಾಟಕ ಮಹಾರಾಷ್ಟ ರಾಜ್ಯದ ಭಕ್ತರು ಕಲ್ಬುರ್ಗಿ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮದ ಜನರು ಈ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು ಆಲಮೇಲ ತಾಲೂಕು ಪಟ್ಟಣ ಮತ್ತು ಕಡಣಿ ಗ್ರಾಮದ ಭಕ್ತರು ಪಾದಯಾತ್ರೆ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಹೋಗಿ ರುದ್ರಾಭಿಷೇಕ ಪೂಜಾ ವಿಧಾನಗಳು ಮಾಡಿ ಸಡಗರ ಸಂಭ್ರಮದಿಂದ ಅಗ್ನಿ ಪ್ರವೇಶ ಮಾಡಿ ಮಾರನೆ ದಿನ ರಥೋತ್ಸವದಲ್ಲಿ ಭಾಗಿಯಾಗಿದ್ದರು. ಈ ಜಾತ್ರಾ ಮಹೋತ್ಸವದ ಸಾನಿಧ್ಯವನ್ನು ದೇವಸ್ಥಾನದ ಅರ್ಚಕರಾದ ಪರಮ ಪೂಜ್ಯ ಧನಂಜಯ ಗುರುಗಳು ಹಾಗು ಶ್ರೀ ಪರಮ ಪೂಜ್ಯ ಅಂಬರೀಶ್ ಗುರುಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಕಾಳಗಿ, ಸಿಪಿಐ ಜಗದೇವಪ್ಪ ಪಾಲ, ಚಿತ್ತಾಪುರ ಸಿಪಿಐ ಚಂದ್ರಶೇಖರ್ ತಿಗಡಿ, ಶಹಾಬಾದ್ ಪಿಎಸ್ ಐ ನಟರಾಜ್ ಲಾಡೆ, ಮಾಡಬಾಳ ಪಿ ಎಸ್ ಐ ಚೇತನ ಪೂಜಾರಿ, ಶೀಲಾದೇವಿ, ಕಾಳಗಿ ಪಿಎಸ್ಐ ತಿಮ್ಮಯ್ಯ ಬಿಕೆ, ಶಹಾಬಾದ್ ಪಿಎಸ್ಐ ಚಂದ್ರಶೇಖರ್ ಮತ್ತು ಸಿಬ್ಬಂದಿಗಳು ಬಂದೋಬಸ್ತ್ ಕಾರ್ಯ ನಿರ್ವಹಿಸಿದರು. ಕೋರವಾರಕ್ಕೆ ಬರಲು ಕಾಳಗಿ ಕಲಬುರ್ಗಿ ಬಸ್ ಘಟಕದಿಂದ ಬಸ್ಸಿನ ಸೌಕರ್ಯ ಒದಗಿಸಲಾಗಿತ್ತು ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಕಾಳಗಿ ತಹಶೀಲ್ದಾರ್ ಘಮಾವತಿ ರಾಠೋಡ್, ಗ್ರೇಡ್ 2 ತಹಶೀಲ್ದಾರ್ ರಾಜೇಶ್ವರಿ, ಕಂದಾಯ ನಿರೀಕ್ಷಕರಾದ ಮಂಜುನಾಥ್, ಮಹಾರುದ್ರ, ಬಸವಣ್ಣಪ್ಪ ಹೂಗಾರ್, ಕಾರ್ಯದರ್ಶಿ ಸಿದ್ದಲಿಂಗ್, ಶೇಮಶೆಟ್ಟಿ, ಸಂತೋಷ್ ಮಾನ್ವಿ ಕರ್, ಶರಣು ಮರ್ತೂರ್, ಅಣವೀರಯ್ಯ ಸಾಲಿ ಅಚ್ಚುಕಟ್ಟಾಗಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ನಡೆಸಿಕೊಟ್ಟರು.
ವರದಿ H.C.K
