ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳಾದ ರೈತಪರ, ಕನ್ನಡ ಪರ ಹಾಗೂ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಮುಖಂಡರು ರೈತರ ವಿವಿಧ ಬೇಡಿಕೆಗಳು ಮತ್ತು ನೆಟೆ ರೋಗ, ಬೆಳೆ ಪರಿಹಾರ ನೀಡುವ ಕುರಿತು ಸರ್ಕಾರ ನಿದ್ದೆಯಿಂದ ಎದ್ದು ಈ ಕೂಡಲೇ ಪರಿಹಾರವನ್ನು ಘೋಷಣೆ ಮಾಡಲೇಬೇಕು ಎಂದು ವಿವಿಧ ರಾಜಕೀಯ ಮುಖಂಡರು, ಸಂಘಟನೆಗಾರರು, ಕನ್ನಡ ಪರ ಹೋರಾಟಗಾರರು, ರೈತ ಮುಖಂಡರು, ರೈತರೆಲ್ಲರೂ ದಿ. 05-03-2025 ರಂದು ವೀರಶೈವ ಕಲ್ಯಾಣ ಮಂಟಪದಿಂದ ಜಿಲ್ಲಾಧಿಕಾರಿ ಕಛೇರಿಯ ವರೆಗೆ ಬೃಹತ್ ಹೋರಾಟ ಮಾಡುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಹಣಮಂತ್ರಾಯ ಹೂಗಾರ , ಅರಳಗುಂಡಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರೇವಣಸಿದ್ದಪ್ಪ ಸಂಕಾಲಿ, ನಮ್ಮ ಕರ್ನಾಟಕ ಸೇನೆ ತಾಲೂಕು ಅಧ್ಯಕ್ಷ ಶಿವಲಿಂಗ ಹಳ್ಳಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಪ್ರಶಾಂತಗೌಡ ಆರ್ ಮಾಲಿ ಪಾಟೀಲ್, ಶರಣಗೌಡ ಐಕೂರ, ಗ್ರಾಮ ಪಂಚಾಯತ್ ಸದಸ್ಯ ಬಸವರಾಜ ಸಂಕಾಲಿ, ಬಸವರಾಜಗೌಡ ಪಾಟೀಲ್ ಕುಕನೂರ, ಪ್ರವೀಣಕುಮಾರ ಕುಂಟೋಜಿ ಮಠ, ನಿಂಗಯ್ಯ ಸ್ವಾಮಿ ಹಿರೇಮಠ, ಶರಣು ಬಿರಾದಾರ, ಸೈಬಣ್ಣ ಪೂಜಾರಿ ಉಪಸ್ಥಿತರಿದ್ದರು.
ವಿಷಯದ ವಿವರಣೆ
2024-25ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಮುಂಗಾರು ಬೇಳೆಗಳಾದ ಹೆಸರು, ಉದ್ದು, ಸೋಯಾ, ತೊಗರಿ ಬೆಳೆಗಳು ಸಂಪೂರ್ಣ ಹಾಳಾಗಿದ್ದು 19,865 ಹೆಕ್ಟೇರ್ ಪ್ರದೇಶವೆಂದು ಗುರುತಿಸಿ ಕೃಷಿ ಇಲಾಖೆ ಸರ್ಕಾರಕ್ಕೆ ವರದಿ ನೀಡಿರುತ್ತದೆ. ಆದರೆ ವಾಸ್ತವವಾಗಿ 50,000 ಹೇಕ್ಟರ್ ಪ್ರದೇಶದಲ್ಲಿ ಮುಂಗಾರು ಬೆಳೆಗಳು ಹಾನಿಯಾಗಿರುತ್ತವೆ.
ಹಿಂಗಾರಿನಲ್ಲಿ 6.6 ಲಕ್ಷ ತೊಗರಿ ಬಿತ್ತನೆಗಳನ್ನು ಇರದಲ್ಲಿ ನೇಟಿರೋಗ, ಕಳಪೆ ಬೀಜದಿಂದ 1,82,963 ಪೇಶ್ವರ ಹಾನಿಯಾಗಿರುತ್ತದೆ ಎಂದು ಕೃಷಿ ಇಲಾಖೆ ವರದಿ ಸರ್ಕರಕ್ಕೆ ನೀಡಿರುತ್ತದೆ. ಆದರೆ ಶೇ.60% ರಷ್ಟು ಬೆಳೆ ಹಾನಿಯಾಗಿದ್ದು, ಸುಮಾರು 4 ಲಕ್ಷ ಹೇಕ್ಷರ ಪ್ರದೇಶದಲ್ಲಿ ವಾಸ್ತವವಾಗಿ ತೊಗರಿ ಹಾಳಾಗಿರುತ್ತದೆ. ಇದರಿಂದ ರೈತರು ಕಂಗಾಲಾಗಿದ್ದು, ತುಂಬಾ ಕಷ್ಟದಲ್ಲಿದ್ದಾರೆ, ಇದರಿಂದಾಗಿ ರೈತರು ನೋವು ತಾಳಲಾರದೆ ಆತ್ಮಹತ್ಯೆಗೆ ಈಡಾಗುತ್ತಿದ್ದಾರೆ.
ಉದಾಹರಣೆಗೆ ದಿನಾಂಕ: 21-02-2024ರಲ್ಲಿ ಕಾಳಗಿ ತಾಲೂಕಿನ ಹುಳಗೇರಾ ಗ್ರಾಮದ ರವೀಂದ್ರ ಎಂಬ ರೈತ ಸಾಲದ ಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಹಿಗಾಗಿ ಸರ್ಕಾರ ರೈತರ ನೆರವಿಗೆ ಧಾವಿಸಿ 500 ಕೋಟಿ ರೂಪಾಯಿ ತೊಗರಿ ಪರಿಹಾರ ಘೋಷಣೆ ಮಾಡಬೇಕಾಗಿ ವಿನಂತಿ.
2024-25ನೇ ಸಾಲಿನ ತೊಗರಿ ಪರಿಹಾರಕ್ಕಾಗಿ ಸುಮಾರು 4 ತಿಂಗಳಿಂದ ರೈತ ಪರ ಸಂಘಟನೆಗಳು ಹೋರಾಟ ಮಾಡುತ್ತಿವೆ ಮತ್ತು ಈ ಹಿಂದೆ ರೈತರ ಪರ ಹೋರಾಟ ಮಾಡಿರುವ ಜನಪ್ರತಿನಿಧಿಗಳಾದ ಇಲ್ಲಿ ಪ್ರಿಯಾಂಕ ಖರ್ಗೆ ರವರು ಮತ್ತು ಶರಣಪ್ರಕಾಶ ಪಾಟೀಲ ಇತರೆ ಜನಪ್ರತಿನಿಧಿಗಳ ಸರ್ಕಾರ ಆಡಳಿತದಲ್ಲಿ ಇದ್ದು ತಮ್ಮ ಬಗ್ಗೆ ರೈತರಿಗೆ ವಿಶ್ವಾಸವಿದ್ದು, ಹಿಂದಿನ ತಮ್ಮ ಬೇಡಿಕೆಯಂತೆ ಇಂದು ಕೂಡಾ ಪ್ರತಿ ಎಕರೆಗೆ 25000/- ರೂ. ದಂತೆ ತೊಗರಿ ಪರಿಹಾರ ಕೊಡಿಸಬೇಕು. ಇಲ್ಲವಾದಲ್ಲಿ ಕನಿಷ್ಠ 800 ಕೋಟಿ ಪರಿಹಾರ ಘೋಷಣೆ ಮಾಡಬೇಕಾಗಿ ರೈತ ಪರವಾಗಿ ವಿನಂತಿಸುತ್ತೇವೆ.
ಒಂದು ವೇಳೆ ತಾವುಗಳು ರಪನಿಗೆ ಪರಿಹಾರ ಘೋಷಣೆ ಮಾಡದಿದ್ದರೆ, ದಿ. 05-03-2025 ರಂದು ಎತ್ತಿನ ಬಂಡಿಗಳೊಂದಿಗೆ, ರೊಟ್ಟಿ ಬುತ್ತಿ, ಪುಂಡಿ ಪಲ್ಯೆ ಕಟ್ಟಿಕೊಂಡು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಎತ್ತುಗಳ ಕೊಳ್ಳ ಹರಿದು ಬುತ್ತಿ ಹೆಚ್ಚಿಕೊಂಡು ಪುಂಡಿ ಪಲ್ಯೆ, ರೊಟ್ಟಿ ಊಟ ಮಾಡುತ್ತಾ ಕೂರುತ್ತೇವೆ. ತಾವು ಪರಿಹಾರ ಘೋಷಣೆ ಮಾಡಿದ ಮೇಲೆ ಮಾತ್ರ ನಾವು ಅಲ್ಲಿಂದ ತೆರಳುತ್ತೇವೆ ಇದು ನಮ್ಮ ದೃಢ ನಿರ್ಧಾರವಾಗಿದೆ. ಕಾರಣ ತಾವುಗಳು ಇದನ್ನು ಗಂಭಿರವಾಗಿ ಕೆಳಗಿನ ಬೇಡಿಕೆಗಳು ಈಡೇರಿಸಬೇಕಾಗಿ ವಿನಂತಿ.
ಆದ್ದರಿಂದ ರೈತ ಪರವಾದ ಈ ಹೋರಾಟಕ್ಕೆ ಬೆಂಬಲಿಸಿ ಪೂಜ್ಯ ಮಠಾಧೀಶರು. ಎ.ಪಿ.ಎಮ್.ಸಿ ವರ್ತಕರು, ಕಾರ್ಮಿಕರು, ಕಲ್ಯಾಣ ಕರ್ನಾಟಕ ವಾಣಿಜ್ಯ ಮಂಡಳಿ, ವಿವಿಧ ಸಮಾಜದ ಸಂಘ ಸಂಸ್ಥೆಗಳು, ಪ್ರಗತಿಪರ ಚಿಂತಕರು, ಜನಪ್ರತಿನಿಧಿಗಳು, ರೈತ ಮುಖಂಡರು ವಿದ್ಯಾರ್ಥಿಗಳು, ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ.
ವರದಿ: ಚಂದ್ರಶೇಖರ ಪಾಟೀಲ್, ಗುಡೂರ
