
ವಿಜಯನಗರ/ಕಂಪ್ಲಿ: ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು, ವಿಜ್ಞಾನ ಶಿಕ್ಷಕರಲ್ಲಿನ ಕುತೂಹಲ ಹಾಗೂ ಇತರೆ ವಿದ್ಯಾರ್ಥಿ ಹಾಗೂ ಶಿಕ್ಷಕರಲ್ಲಿ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು
ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳಗೋಡ್ ಹಾಳಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಮಕ್ಕಳಿಂದ ವಿವಿಧ ವಿಜ್ಞಾನದ ಪ್ರಯೋಗಗಳನ್ನು ಮೂಡಿಸುವುದರ ಮೂಲಕ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಗುರುಗಳಾದ ಶ್ರೀಯುತ ಮರಿಸ್ವಾಮಿಯವರು ವಹಿಸಿಕೊಂಡಿದ್ದರು. ಮಕ್ಕಳ ದಿನಾಚರಣೆಯ ಮಹತ್ವವನ್ನು ಅವರು ತಿಳಿಸಿಕೊಟ್ಟರು ಶಾಲೆಯ ಹಿರಿಯ ಶಿಕ್ಷಕರಾದ ಶ್ರೀಮತಿ ಡಿ ಶೀಲಾವತಿ ಅವರು ಮಾತನಾಡಿ ಶಾಲೆಯ ಪುಟಾಣಿ ವಿಜ್ಞಾನಿಗಳಿಗೆ ಪ್ರಯೋಗ ಮಾಡಲು ಧೈರ್ಯ ತುಂಬಿ ಶುಭಾಶಯಗಳನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಿ.ವಿ ರಾಮನ್ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸಿಕೊಡಲಾಯಿತು. ಮಕ್ಕಳಿಂದ 20ಕ್ಕೂ ಹೆಚ್ಚು ಪ್ರಯೋಗಳನ್ನು ಮಾಡಿಸಲಾಯಿತು ಅವುಗಳಲ್ಲಿ ಗಾಳಿಯ ಒತ್ತಡ, ಸಾಂದ್ರತೆ, ವಸ್ತುಗಳ ಉರಿಯುವಿಕೆ, ಆಮ್ಲಜನಕ ಅವಶ್ಯಕತೆ ಆಮ್ಲ ಮತ್ತು ಪ್ರತ್ಯಾಮ್ಲಗಳು ಜೀರ್ಣಕ್ರಿಯೆ ಬೆಳಕಿನ ಪ್ರಯೋಗಗಳು ಆಹಾರದ ಘಟಕಗಳ ಸಂರಕ್ಷಣೆ ಪ್ರಯೋಗ ಇವು ಪ್ರಮುಖವಾದವು.
ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳು, ಮನುಷ್ಯನ ದೇಹದ ಭಾಗಗಳು, ಕಾಡುಪ್ರಾಣಿಗಳು, ಹೂಗಳ ಹೆಸರು, ತರಕಾರಿಗಳ ಹಣ್ಣುಗಳ ಹೆಸರು ಉತ್ತಮ ಆಹಾರ ಪದ್ಧತಿ ಎಲೆಗಳ ವಿಧಗಳು ಚಿಟ್ಟೆಯ ಜೀವನಚಕ್ರ ಪರಿಸರ ಸ್ನೇಹಿ ಮನೆ ದ್ವಿತೀಯ ಸಂಶ್ಲೇಷಣೆ ಮಳೆ ನೀರು ಕೊಯ್ಲು ಪದ್ಧತಿ ಪ್ರಾಕೃತಿಕ ಸಂಪತ್ತು ರಕ್ಷಣೆ, ಬಣ್ಣಗಳ ವರ್ಗೀಕರಣ, ಬೆಳಕಿನ ಶಕ್ತಿ ಬಳಕೆ, ಗಾಳಿ, ನೀರಿನ ಮಿತ ಬಳಕೆ, ಪ್ರಾಣಿ ಪಕ್ಷಿ ಸಂರಕ್ಷಣೆ, ಹಸಿರು ಯೋಜನೆ , ಆಹಾರ ಪದ್ದತಿ, ವಿದ್ಯಾರ್ಥಿಗಳು ವಿಜ್ಞಾನದ ಮಾದರಿ ಅರ್ಥಪೂರ್ಣವಾಗಿತ್ತು.
ಶಾಲೆಯ ಶಿಕ್ಷಕ/ಕಿಯರಾದ ಶ್ರೀಮತಿ ತಿಪ್ಪಮ್ಮ, ಶ್ರೀ ಶಂಕರ್ ಮೂರ್ತಿ, ಶ್ರೀ ವೀರೇಶ್, ಶ್ರೀಮತಿ ಸಾವಿತ್ರಿ, ಶ್ರೀಮತಿ ಮಂಗಳ, ಶ್ರೀಮತಿ ಲೇಪ ಹಾಗೂ ಪಾಲಕ ಪೋಷಕರು ಸೇರಿದಂತೆ ಇತರರು ಇದ್ದರು.
