ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿಗನೂರ ದಿ 01-03-2025 ರಂದು ಜಯ ಕರ್ನಾಟಕ ಸಂಘಟನೆ ಸಿಂದಗಿ ತಾಲೂಕಾ ಘಟಕದ ವತಿಯಿಂದ ಸಿಂದಗಿ ತಾಲ್ಲೂಕಿನ ಹಂದಿಗನೂರ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸಮಸ್ಯೆಗಳಾದ ಕುಡಿಯುವ ನೀರು, ಮೂರು ನೂತನ ಕೋಣೆಗಳು ನಿರ್ಮಿಸುವುದು ಮತ್ತು ಶಾಲಾ ಕಾಂಪೌಂಡ್ ನಿರ್ಮಿಸುವುದು ಹಾಗೂ ವಿವಿಧ ಬೇಡಿಕೆಗಳ ಕುರಿತು ಮಾನ್ಯ ತಹಶಿಲ್ದಾರರ ಸಾಹೇಬರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ವಕ್ತಾರರು ಹಾಗೂ ಸಿಂದಗಿ ತಾಲೂಕಾ ಉಸ್ತುವಾರಿಗಳಾದ ಚನ್ನಪ್ಪಗೌಡ ಎಸ್, ಬಿರಾದಾರ, ಹಾಗೂ ಸಿಂದಗಿ ತಾಲೂಕಾಧ್ಯಕ್ಷರಾದ ಸಂತೋಷ ಮನಗೂಳಿ ಮತ್ತು ಜಯ ಕರ್ನಾಟಕ ಸಂಘಟನೆಯ ತಾಲೂಕಾ ಪದಾಧಿಕಾರಿಗಳಾದ,
ನಾಗಣ್ಣ ಪಡೇಕನೂರ, ತಾಲೂಕಾ ಉಪಾಧ್ಯಕ್ಷರು, ರಮೇಶ ರಾಠೋಡ, ಕಾರ್ಯಾಧ್ಯಕ್ಷರು, ಭೀಮನಗೌಡ ಬಿರಾದಾರ, ಪ್ರಧಾನ ಕಾರ್ಯದರ್ಶಿಗಳು, ಸಿದ್ದನಗೌಡ ಅಂಬಳನೂರ, ಸಂಘಟನಾ ಕಾರ್ಯದರ್ಶಿ, ಶಿವಪುತ್ರ ಮಲ್ಲೇದ, ಸಿಂದಗಿ 21 ನೇ ವಾರ್ಡ ಅಧ್ಯಕ್ಷರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವರದಿ : H C K
