ಬೆಂಗಳೂರು : ಇದೇ ಬರುವ ಶನಿವಾರ 8-3-2025 ರ ಬೆಳಗ್ಗೆ 10 ಘಂಟೆಯಿ0ದ ಆನಂದ ರಾವ್ ವೃತ್ತದ ಬಳಿಯಿರುವ ಕ.ವಿ.ಪ್ರ.ನಿ.ನಿ. ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿಭವನದ ಕೌಟಿಲ್ಯ ಹಾಲ್ ನಲ್ಲಿ
ಮಹಿಳಾ ದಿನ-ಮಹಿಳೆಯರ ಸಮ್ಮಾನದ ದಿನ ಆಚರಿಸಲಾಗುವುದು.
ಕಾರ್ಯಕ್ರಮದಲ್ಲಿ ಕೆಳಗಿನ ವಿಷಯಗಳನ್ನು ಆಯೋಜಿಸಲಾಗಿದ್ದು ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.
ಸರೋಜಾ ಪ್ರಕಾಶ ಅವರ
ವಿಜ್ಞಾನದ ಜಾಡು ಬದಲಿಸಿದ ಜಾಣೆಯರು ಪುಸ್ತಕ ಪ್ರಸ್ತುತಿ
ಕೃತಿ ಪ್ರಸ್ತುತಪಡಿಸುವವರು ಡಾ. ದೀಪಾ ಎಂ.ಬಿ.
ಸಾಧಕಿಯರಿಗೆ ಸನ್ಮಾನ
ಪ್ರಪಂಚದ ಅತಿ ಕಠಿಣ ಮ್ಯಾರಥಾನ್ ಗಳಲ್ಲಿ ಒಂದಾದ ಲಡಾಕ್ ನ ಅಂದಾಜು12,000 ಅಡಿ ಎತ್ತರ ಪ್ರದೇಶದಲ್ಲಿ 42 ಕಿಮೀ ಓಟ ಪೂರೈಸಿ ಗೆದ್ದ ಶಿಲ್ಪಾ ಹೆಗಡೆ,
ಇಸ್ರೋ ನಡೆಸಿದ ಇತ್ತೀಚಿನ 99ನೇ ಕಾರ್ಯಕ್ರಮದಲ್ಲಿ ಅಂತರಿಕ್ಷಕ್ಕೆ ಚಿಮ್ಮಿಸಿದ ಮೊದಲ ಮೈಕ್ರೋ ಬಯಾಲಜಿಕಲ್ ಪೇ ಲೋಡ್ RVSAT-1 ಸಿದ್ದತೆ ಮಾಡಿದ ತಂಡದಲ್ಲಿರುವ ವಿಜ್ಞಾನಿ ಪಾರ್ವತಿ,
ಅತೀ ಚಿಕ್ಕ ವಯಸ್ಸಿನಲ್ಲಿಯೇ ದೇಶ – ವಿದೇಶಗಳ ಘನ ವೇದಿಕೆಯಲ್ಲಿ ಯೋಗ ಭರತನಾಟ್ಯ ಪ್ರದರ್ಶಿಸಿದ ಯೋಗ ಪದ್ಮ ಪ್ರಶಸ್ತಿ ವಿಜೇತೆ ನೇಹಾ,
ಬಹುಭಾಷಾ ತಜ್ಞೆ, ಯಕ್ಷ ನೃತ್ಯ ಸಹಿತ ಬಹುವಿಧದ ಶಾಸ್ತ್ರೀಯ ವಾದನದ ಪ್ರವೀಣೆ ಸ್ವಾತಿ ಪಂಡಿತ
JEE B Arch ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ, ರಾಷ್ಟ್ರಮಟ್ಟದಲ್ಲಿ 5 ನೇ ರ್ಯಾಂಕ್ ಗಳಿಸಿರುವ ರಕ್ಷಾ ದಿನೇಶ ಅವರುಗಳಿಗೆ ಸನ್ಮಾನ
ಸನ್ಮಾನಿಸಿ ಮಾತನಾಡಲಿರುವವರು ಖ್ಯಾತ ಸಾಹಿತಿ ಅಂಕಣಕಾರ ಶ್ರೀ ನಾಗೇಶ ಹೆಗಡೆ
ಕಾರ್ಯಕ್ರಮದ ನಂತರ ಶೃಂಗೇರಿ ನಿಲಯೆ ಭಜನಾ ಮಂಡಳಿ ಹುಳಿಮಾವು ಅವರಿಂದ
ಪುರಂದರದಾಸರ ದೇವರನಾಮಗಳ ಕಾರ್ಯಕ್ರಮವಿದೆ.
ಎಲ್ಲರಿಗೂ ಆತ್ಮೀಯ ಅಹ್ವಾನ ಎಂದು ಕಾರ್ಯಕ್ರಮ ಸಂಯೋಜಕ ಶ್ರೀ ವಿಶ್ವೇಶ್ವರ ಗಾಯತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
