ವಿಜಯಪುರ/ ತಾಳಿಕೋಟಿ : ಕುಮಾರೇಶ್ವರ ಪಬ್ಲಿಕ್ ಸ್ಕೂಲ್ ತಾಳಿಕೋಟೆಯಲ್ಲಿ ಅಂತರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಶಾಲೆಯಲ್ಲಿ ಕಲೆ ಮತ್ತು ವಿಜ್ಞಾನ ವಿಷಯಗಳ ಪ್ರದರ್ಶನವನ್ನು ದಿ 28.02.2025 ರಂದು ಹಮ್ಮಿಕೊಳ್ಳಲಾಗಿತ್ತು. ಸತತ ಒಂದು ವಾರದಿಂದ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಇದರ ತಯಾರಿ ನಡೆಸಿ ವಿಜ್ಞಾನ ದಿನದಂದು ಪ್ರಸ್ತುತ ಪಡಿಸಿದರು. ಅಂದು ಬೆಳಗ್ಗೆ 9 ಗಂಟೆ 30 ನಿಮಿಷಕ್ಕೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜು ವಿಜಾಪುರ ಹಾಗೂ ಸಂಜು ಹಜೇರಿ ಶಿಕ್ಷಕರು ಗಡಿಸೋಮನಾಳ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಗಿರೀಶ್ ಪಿ. ಆರ್ ಶಿಕ್ಷಕರು ಬೆಳೆಭಾವಿ ಇವರು ಸಿವಿ ರಾಮನ್ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು. ಶ್ರೀ ಮುತ್ತಪ್ಪ ಸಜ್ಜನ್ ಶಿಕ್ಷಕರು ಮಸ್ಕನಾಳ ಇವರಿಂದ ರಾಕೆಟ್ ಉಡಾವಣೆ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಾಲೆಯ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಸೇರಿ ಸುಮಾರು 90ಕ್ಕೂ ಹೆಚ್ಚು ಮಾದರಿಗಳನ್ನು ತಯಾರಿಸಿ ಅವುಗಳ ಸಮಗ್ರ ಮಾಹಿತಿಯನ್ನು ಮಕ್ಕಳು ಎಲ್ಲರಿಗೂ ವಿವರಿಸಿದರು. ಕನ್ನಡ ,ಇಂಗ್ಲಿಷ್, ವಿಜ್ಞಾನ, ಗಣಿತ ಸಮಾಜಶಾಸ್ತ್ರದ ಕುರಿತಾದ ಮಾದರಿಗಳು ಎಲ್ಲಾ ಜನರ ಗಮನ ಸೆಳೆದವು. ಪ್ರತಿ ವಿಷಯದಲ್ಲೂ ತರಗತಿವಾರು ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ ತಂಡಗಳಿಗೆ ಬಹುಮಾನ ಘೋಷಿಸಲಾಯಿತು.
ಸುಮಾರು 500ಕ್ಕೂ ಹೆಚ್ಚು ಜನರು ಬಂದು ವೀಕ್ಷಣೆ ಮಾಡಿ ಅಭಿಪ್ರಾಯ ಹಂಚಿಕೊಂಡರು. ಶಾಲೆಯಲ್ಲಿ ಇಂತಹ ಕಾರ್ಯಕ್ರಮ ನಡೆಸುವುದರಿಂದ ಮಕ್ಕಳಲ್ಲಿ ಕಲೆ, ವಿಷಯ, ಕೌಶಲ್ಯ, ಸಂಶೋಧನೆಯ ಅರಿವು ಪ್ರಾಥಮಿಕ ಹಂತದಲ್ಲಿ ಹೊರಗೆ ತರುತ್ತಿರುವ ಕುಮಾರೇಶ್ವರ ಶಾಲೆಯ ಆಡಳಿತ ಮಂಡಳಿಗೆ ಅಭಿನಂದನೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯವರಾದ ಶ್ರೀ ಸಂಗಮೇಶ್ವರನ ಶ್ರೀ ಸಿದ್ದನಗೌಡ ಚೌದರಿ ಶ್ರೀ ಮಹಬೂಬ್ ಪಟೇಲ್ ನಡುವಿನಮನಿ ಶ್ರೀ ಕಾಶಿನಾಥ್ ಸಜ್ಜನ್ ಉಪಸ್ಥಿತರಿದ್ದರು. ಮುಖ್ಯ ಗುರುಗಳಾದ ಶ್ರೀ ಕಾಶಿನಾಥ್ ಸಜ್ಜನ್ ನಿರೂಪಣೆ ಮಾಡಿದರು. ಶಿಕ್ಷಕರಾದ ಉಮೇಶ್ ರಂಗಂಡಿ ಸ್ವಾಗತಿಸಿದರು. ಮಂಜುನಾಥ್ ಕೊಪ್ಪಳ ವಂದಿಸಿದರು. ಶಿಕ್ಷಕಿಯರಾದ ಅಶ್ವಿನಿ ತಾರನಾಳ, ನೀಲಾಶ್ರೀ ನಾಲ್ವರ್ ,ಸ್ವಪ್ನ ರಾಜಪುರಿ, ಐಶ್ವರ್ಯ, ಮೇಘ ನಾಯಕ್, ಸೃಷ್ಟಿ ತುಂಬಿಗಿ, ಅರ್ಚನಾ ಸಜ್ಜನ್, ಆಸ್ಮ ಬೇಗಂ, ಗೀತಾ ಪಾಟೀಲ್, ರೂಪ ಬಿರಾದಾರ್, ಶಿವಲೀಲಾ ಸಜ್ಜನ್, ಸುಹಾಸಿನಿ ಪಾಟೀಲ್, ಶರಣಮ್ಮ ಹಿರೇಮಠ ,ದೀಪ ಯಾಳಗಿ, ಮುನಾಫರ್ ಪಟೇಲ್ ರಮೇಶ್ ದೊಡ್ಡಮನಿ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರಾದ ರಮೇಶ್ ಮಾಲಿ ಪಾಟೀಲ್, ಶ್ರೀಕಾಂತ್ ತಳವಾರ್, ಮಡಿವಾಳಪ್ಪ ,ನಾಗರತ್ನ ಕೊಡೆಕಲ್, ಲಕ್ಷ್ಮಿ ಹಡಪದ್, ಲಕ್ಷ್ಮಿ, ರೇಣುಕಾ ಕಲಾಲ್ ಉಪಸ್ಥಿತರಿದ್ದರು.
