ಬೆಂಗಳೂರು: ಕನಸು ಡಿಜಿಟಲ್ ಸಲ್ಯೂಷನ್ ಬೆಂಗಳೂರು ಹಾಗೂ ಅನ್ನಪೂರ್ಣೇಶ್ವರಿ ಹ್ಯೂಮಾನಿಟಿ ಫೌಂಡೇಶನ್ ಬೆಳಗಾವಿ ಇವರ ಸಹಯೋಗದಲ್ಲಿ ಬೆಂಗಳೂರಿನ ಕನ್ನಡ ಭವನದ ನಯನ ರಂಗಮಂದಿರದಲ್ಲಿ ಭಾನುವಾರ ನಡೆದ ಜೀವನ ಜ್ಯೋತಿ ರಾಷ್ಟ್ರೀಯ ಪ್ರಶಸ್ತಿ 2025 ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಎಮ್ಮೆಗನೂರು ಗ್ರಾಮದ ಸರಕಾರಿ ಶತಮಾನ ಶಾಲೆಯ ಗೌರವ ಶಿಕ್ಷಕ, ನಿರೂಪಕ ಹಾಗೂ ಸಂಪನ್ಮೂಲ ವ್ಯಕ್ತಿ ಶಿಕ್ಷಕ ಎಸ್ ರಾಮಪ್ಪ ಅವರಿಗೆ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದ ಸೇವೆಗಾಗಿ ಜೀವನ ಜ್ಯೋತಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ,
ಈ ವೇಳೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್ ರಾಮಪ್ಪ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಇನ್ನಷ್ಟು ಕಾರ್ಯ ಮಾಡಲು ಸ್ಪೂರ್ತಿ ತುಂಬಿದಂತೆ ಆಗಿದೆ ಎಂದರು.
ಅಲ್ಲದೆ ಗ್ರಾಮದ ಹಿರಿಯರು ಯುವಕರು ಶಾಲೆಯ ಸಿಬ್ಬಂದಿ ವರ್ಗ ಮತ್ತು ಸಂಘ – ಸಂಸ್ಥೆಯ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಲನಚಿತ್ರ ಮೇಕಪ್ ಕಲಾವಿದ ಯೋಗೀಶ್ ಅನ್ನಪೂರ್ಣೇಶ್ವರಿ ಹ್ಯೂಮಾನಿಟಿ ಫೌಂಡೇಶನ್ ಮಹಾಂತೇಶ ಕಡಲಿಗೆ ಪ್ರಗತಿ ಚಾರ್ ಟೇಬಲ್ ನ ಮೌನೇಶ್ ಮಾಂತೇಶ್ ಗೌಡ ಕನಸು ಡಿಜಿಟಲ್ ಸಲ್ಯೂಷನ್ ಲಾವಣ್ಯ ಸೇರಿದಂತೆ ಇತರರು ಇದ್ದರು.
ವರದಿ: ಜಿಲಾನ್ ಸಾಬ್ ಬಡಿಗೇರ