
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕಸಬಾ ಹೋಬಳಿ ಕಡಮಲಕುಂಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ದುರ್ಗಾದೇವಿ ದೇವಾಲಯದ ಪ್ರಾರಂಭೋತ್ಸವ ಹಾಗೂ ಪ್ರತಿಷ್ಠಾಪನೆ ಸಮಾರಂಭ ಗ್ರಾಮದ ಸರ್ವ ಸಮುದಾಯದವರ ಸಹಕಾರದೊಂದಿಗೆ ಭಕ್ತರ ಸಡಗರದ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.
ಕಳೆದ ಮೂರು ದಿನಗಳಿಂದ ವಿಶೇಷ ಪೂಜೆ ನೆರವೇರಿಸಲಾಯಿತು
ಗಂಗಾಪ್ರವೇಶ, ಗಣಪತಿ ಪೂಜೆ, ಪಂಚಾಮೃತ ಅಭಿಷೇಕ, ಕುಂಭಾಭಿಷೇಕ, ನವಗ್ರಹ ಹೋಮಗಳು, ದುರ್ಗಾಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು, ದೇವಾಲಯ ಆರಂಭೋತ್ಸವ ಹಾಗೂ ಪ್ರತಿಷ್ಠಾಪನೆ ಪ್ರಧಾನ ಅರ್ಚಕರ ನೇತೃತ್ವದಲ್ಲಿ ನೆರವೇರಿದವು.
ಉತ್ತಮ ಮಳೆ ಬೆಳೆಯಾಗಲೆಂದು ಊರಿನ ಗ್ರಾಮಸ್ಥರು ಪೂಜೆ ಸಲ್ಲಿಸಿದರು. ಭಕ್ತರಿಗೆ ದುರ್ಗಾದೇವಿ ಕಾರ್ಯಕಾರಿ ಸಮಿತಿ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಶಾಸಕರು ಹಾಗೂ ತುಮುಲ್ ಅಧ್ಯಕ್ಷರಾದ ಹೆಚ್ ವಿ ವೆಂಕಟೇಶ್ ರವರು ಭಾಗವಹಿಸಿ ದುರ್ಗಾ ದೇವಿಯ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಶೇಷಗಿರಿ, ಪುರಸಭಾ ಸದಸ್ಯ ಎನ್ ರವಿ, ಬತ್ತೀನೇನಿ ನಾನಿ, ಕೆ ಎ ನಾಗಭೂಷಣ, ರಾಮಾಂಜಿನಪ್ಪ ವಕೀಲ ಹನುಮಂತರಾಯಪ್ಪ, ನವರು ಸೇರಿದಂತೆ ಸ್ಥಳೀಯ ಮುಖಂಡರುಗಳು ಹಾಜರಿದ್ದರು.
ವರದಿ ಪಾವಗಡ ಕೆ.ಮಾರುತಿ ಮುರಳಿ