ವಿಜಯಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಡಿಸಿ ಟ್ರಸ್ಟ್ ಬಸವನಬಾಗೇವಾಡಿ ಹಾಗೂ ಪಶು ಆಸ್ಪತ್ರೆ ಮನಗೂಳಿ ಇವರಿಂದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನಂದಿಹಾಳ ಪಿಯು ಗ್ರಾಮದಲ್ಲಿ ರೈತ ಕ್ಷೇತ್ರ ಪಾಠಶಾಲೆ ಹಾಗೂ ಜಾನುವಾರು ಆರೋಗ್ಯ ಶಿಬಿರ ಜರುಗಿತು. ಜಾನುವಾರುಗಳನ್ನು ರಕ್ಷಿಸುವ ಸಲುವಾಗಿ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗಡೆ ಅವರು ಹಾಗೂ ಮಾತೋಶ್ರೀ ಹೇಮಾವತಿ ವೀರೇಂದ್ರ ಹೆಗಡೆಯವರು ಕ್ಷೇತ್ರ ಪಾಠಶಾಲೆ ಹಮ್ಮಿಕೊಂಡಿದ್ದು ಜಾನುವಾರುಗಳಿಗೆ ಲಸಿಕೆ ಚರ್ಮದ ಗಂಟು ರೋಗ ನಿಯಂತ್ರಣ ಸಲುವಾಗಿ ಹಾಕಲಾಗುತ್ತದೆ ಎಲ್ಲಾ ರೈತರು ಜಾನುವಾರುಗಳಿಗೆ ಟಾನಿಕ್ ಔಷಧಿಗಳನ್ನು ರೈತರು ಪಡೆದುಕೊಳ್ಳಬೇಕೆಂದು ಮನಗೂಳಿಯ ಪಶು ವೈದ್ಯರಾದ ಎಚ್ಎನ್ ನ್ಯಾಮಗೌಡ ಹೇಳಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟಿನ ಕೃಷಿ ಮೇಲ್ವಿಚಾರಕರಾದ ರಾಜು ಬೆಟಗೇರಿ ಪಶು ವೈದ್ಯ ಪರೀಕ್ಷಕರು ಆರ್ ಎಸ್ ನಾಯಕ್ ಮೈತ್ರಿ ಕಾರ್ಯಕರ್ತರಾದ ಪವನ್ ನರಳೆ ಪಶು ಸಖಿಯರಾದ ಕಸ್ತೂರಿ ಕಂಬಾರ ಹಾಗೂ ರೈತರು ಭಾಗಿಯಾಗಿದ್ದರು.
