ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ರಾಮಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಧರ್ಮಸಭೆ

ಬಾಗಲಕೋಟೆ :ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದಲ್ಲಿ 4ರಂದು ಗುಳ್ಳೆಗಳು ಒಪ್ಪತೇಶ್ವರ ಪೀಠಾಧಿಪತಿ ಅಭಿನವ ಒಪ್ಪತ್ತೇಶ್ವರ ಶ್ರೀಗಳ ನೇತೃತ್ವದಲ್ಲಿ ಶ್ರೀರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಮೊಗ್ಗಿ ಮಾಗಿ ದೇವರ 643ನೇ ಜಯಂತೋತ್ಸವ ಎರಡನೇ ವರ್ಷದ ರಥೋತ್ಸವ ಜರುಗಲಿದೆ ದಿ.3-3-2025 ರಂದು ರಾತ್ರಿ ಸ್ಥಳೀಯ ಕಲಾವಿದರಿಂದ ಅಹೋರಾತ್ರಿ ಶಿವ ಭಜನೆ ಜರುಗಿತು.
೪ರಂದು ಬೆಳಿಗ್ಗೆ ರಾಮಲಿಂಗೇಶ್ವರನಿಗೆ ವಿಶೇಷ ಪೂಜೆ ಅಭಿಷೇಕ ಅಲಂಕಾರ ಜರುಗಲಿದೆ ನಂತರ ಧರ್ಮಸಭೆಯ ನಂತರ ಮಹಾಪ್ರಸಾದ ಜರುಗಲಿದೆ
ಸಂಜಯ್ 4:00ಗೆ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘದಿಂದ ಮೊಗ್ಗಿ ಮಾಯದೇವರ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರುಗಲಿದೆ ಸಂಜೆ 6 ಗಂಟೆಗೆ ಕೂಡಲಗಿ ಸಂಸ್ಥಾನಮಠದ, ಜಗದ್ಗುರು ಡಾ. ಪ್ರಶಾಂತ್ ಸಾಗರ ಶಿವಾಚಾರ್ಯರು ಪೂರತಗೇರಿ ಹಿರೇಮಠದ ಅಭಿನವ ಕೈಲಾಸ ಲಿಂಗ ಶಿವಾಚಾರ್ಯರು ಅಮೀನಗಡ ಶಂಕರ್ ರಾಜೇಂದ್ರ ಶ್ರೀಗಳು ಮುರನಾಳದ ಮಳೆ ರಾಜೇಂದ್ರ ಶ್ರೀಗಳು, ರಾಜೇಂದ್ರ ಹಿರೇಮಠ ಚೆನ್ನಬಸವನವರು ಕೆಂಚಪ್ಪ ಅಜ್ಜನವರು ಪ್ರಾಣೇಶ್ ಅಜ್ಜನರು ಕೃಷ್ಣ ಅಜ್ಜನವರು ಸಮ್ಮುಖದಲ್ಲಿ ಶ್ರೀ ರಾಮಲಿಂಗೇಶ್ವರ ರಥೋತ್ಸವ ಜರುಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಮೊಗ್ಗಿಯ ಮಾಯದೇವರ ಕಿರುಪರಿಚಯ

ಈತನು ಕ್ರಿ.ಶ.೧೪೩೦ರ ಸುಮಾರಿಗೆ ಜೀವಿಸಿದ್ದರು ಎಂದು ಹೇಳಲಾಗುತ್ತಿದೆ
ಹುಟ್ಟಿದ ಊರು: ಮಲಪ್ರಭಾ ನದಿ ದಂಡೆಯ ಐಪುರ ಕ್ಷೇತ್ರ [ಹುನಗುಂದ ತಾಲೂಕಿನ ಹಿರೇಮಾಗಿ (ಮಗ್ಗೆ)
ತಂದೆ: ಸಂಗಮೇಶ್ವರ.
ಐಒಳೆ (ಐಪುರಿ) ಯ ಶ್ರೀ ಸಂಗಮೇಶ್ವರ ಗುರುವಿನಲ್ಲಿ ಈತನು ಅಧ್ಯಯನ ಮಾಡಿದ.
ವಿಜಯನಗರ ಈತನ ಕಾರ್ಯ ಭೂಮಿಯಾಯಿತು.
ಅನುಭವ ಸೂತ್ರ, ಶಿವ ಸೂತ್ರ -ಇವು ಈತನ ಸಂಸ್ಕೃತ ಗ್ರಂಥಗಳು.
ಶಿವಾಧವ ಶತಕ, ಶಿವಾವಲ್ಲಭ ಶತಕ, ಐಪುರೀಶ್ವರ ಶತಕ – ಈ ಮೂರು ಶತಕಗಳು ಲಭ್ಯವಾಗಿವೆ.
ಪ್ರಭುನೀತಿ, ಏಕೋತ್ತರ ಶತಸ್ಥಲ ಷಟ್ಪದಿ, ಷಟ್ ಸ್ಥಲ ಗದ್ಯ, ಶತಕತ್ರಯ – ಈ ಕೃತಿಗಳು ಲಭ್ಯವಾಗಿಲ್ಲ.

ಬಸವ ಯುಗದಲ್ಲಿ ಹೆದ್ದೊರೆಯಾಗಿ ಹರಿದಿದ್ದ ತತ್ವಸಿದ್ಧಾಂತದ ವಚನ ವಾಹಿನಿ ಕೆಲಕಾಲ ಗುಪ್ತಗಾಮಿನಿಯಾಗಿ ಪ್ರವಹಿಸಿ ವಿಜಯನಗರದ ಇಮ್ಮಡಿ ಪ್ರೌಢರಾಯನ ಕಾಲದಲ್ಲಿ ಮತ್ತೆ ಬೃಹದ್ರೂಪ ತಾಳಿ ಹೊರ ಹೊಮ್ಮಿತು. ವೀರಶೈವ ಸಾಹಿತ್ಯದ ವಸಂತಕಾಲ ಮತ್ತೆ ಮೂಡಿ ಬಂದಿತು. ನೂರೊಂದು ವಿರಕ್ತರು ಕಾಣಿಸಿಕೊಂಡರು. ಅವರೆಲ್ಲರೂ ಅನುಭಾವಿಗಳು ನಿಜ ಆದರೆ ಎಲ್ಲರೂ ಸಾಹಿತ್ಯ ಸೃಷ್ಟಿಸಿದವರಲ್ಲ. ಸಾಹಿತ್ಯ ಸೃಷ್ಟಿಸಿದ ಪ್ರಮುಖರಲ್ಲಿ ಒಬ್ಬ ಮಗ್ಗೆಯ ಮಾಯಿದೇವ.

ಪರರಾರ್ತನ್ನವರಾರ್ ವಿವೇಕಿಸೆ ? ನಿಜಸ್ತ್ರೀ ಪುತ್ರ ಮಿತ್ರರ್ ಸ್ವಕೀ
ಯರೇ ? ಮಿಕ್ಕಾದವರನ್ಯರೇ ತನಗೆ ? ನಾನೇನೆಂಬೆನಿಂತಪ್ಪ ಮೂರ್ಖರನ್

ತನ್ನ ದೇಹಾದಿ ಕರಣಗಳೇ ತನಗೆ ಅನ್ಯವಾಗಿರುವಾಗ ಉಳಿದವರು ತನಗೆ ಅನ್ಯರೆಂದು ಹೇಳುವುದು ಮೂರ್ಖತನವಲ್ಲವೇ ? ಎಂದು ವಿವೇಕವನ್ನು ಎಚ್ಚರಿಸುವ ಜ್ಞಾನಿ ಈ ಮಗ್ಗೆ ಮಾಯಿದೇವ.

“ನಾನು – ನನ್ನದು, ನಾನು ಮಾಡುವವ ಎನ್ನುವಲ್ಲಿ ದುಃಖದ ಉಗಮ ನೀನು ನಿನ್ನದು, ನಿನ್ನ ಕೃತಿ ಎಂಬಲ್ಲಿ ಸುಖದ ಸೆಲೆ. ಈ ನಿರಹಂಭಾವ ನಿರಹಂಕೃತಿ ಕ್ರಿಯೆ ನೆಲೆಗೊಂಡರೆ ಇನ್ನಾವ ಜಪ ತಪ ಯೋಗ ಯಾಗಗಳೂ ಬೇಕಿಲ್ಲ ಎಂಬ ಮಾಯದೇವನ ಮಾತುಗಳು ಆತನು ಅದೆಂಥಾ ಅನುಭಾವಿ, ದಾರ್ಶನಿಕನಾಗಿದ್ದನೆಂಬುದಕ್ಕೆ ಸಾಕ್ಷಿ.

ಪಾಪ ಪುಣ್ಯ, ಸುಖ ದುಃಖ, ಸ್ವರ್ಗ ನರಕಗಳ ಸ್ವರೂಪ ವಿವೇಚಿಸುತ್ತ ವ್ಯಕ್ತಿಯೊಬ್ಬ ಪುಣ್ಯಾಪೇಕ್ಷೆ ಉಳ್ಳವನಾಗಿದ್ದರೆ ಈ ಎಲ್ಲಾ ದ್ವಂಧ್ವಗಳು ಕ್ರಮವಾಗಿ ಸಂಭವಿಸುವವು. ಆದ್ದರಿಂದ ಫಲಾಪೇಕ್ಷೆಯ ಪುಣ್ಯ ಮಾಡಿರುವುದೇ ಪಾಪದ ಪರಿಹಾರ. ಎಂಥ ತರ್ಕಬದ್ಧ ವಿಚಾರ ! ಮಾಯಿದೇವನ ವೈಚಾರಿಕ ಮಟ್ಟ ಅದೆಷ್ಟು ಎತ್ತರದ್ದು !

ಮಾಯದೇವ ಸಕಲ ಶಾಸ್ತ್ರಪಾರಂಗತ, ಉಭಯ ಭಾಷಾಕೋವಿದ, ರಾಜಪೂಜಿತ, ವೀರಶೈವ ತತ್ವಸಿದ್ಧಾಂತ ಕುರಿತು ಗಂಭೀರ ಚಿಂತನೆ ನಡೆಸಿದ ದಾರ್ಶನಿಕ, ಶಿವಾನುಭವಿ, ಷಟಸ್ಥಲ ನಿರ್ಣಾಯಕ.

2025 ರ ಪ್ರಶಸ್ತಿ ಪುರಸ್ಕೃತ ವಿವರ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿಯ ಶರಣ ಶ್ರೀ ಮಗ್ಗಿ ಮಾಗಿದೇವ ರತ್ನ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಂಟು ಜನರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಆಯ್ಕೆಯಾದವರ ಮಹನೀಯರ ಹೆಸರುಗಳು ಈ ಕೆಳಗಿನಂತಿದೆ

ಸಿದ್ದರಾಮಯ್ಯ ಮಠಪತಿ ಸಂಗೀತ
ನೀಲಪ್ಪ ತೆಗ್ಗಿ ಶಿಕ್ಷಣ
ಗವಿಸಿದ್ದಯ್ಯ ಹಳ್ಳಿಕೇರಿ ಮಠ ಕಲೆ
ಲಿಂಗರಾಜ ಜಾಡರ ಹಾಗೂ ಮಲ್ಲಯ್ಯ ಕೂಮಾರಿ, ರಂಗಭೂಮಿ
ಡಾಕ್ಟರ್ ಅಶೋಕ್ ನರುಂಡೆ ಹಾಗೂ ಡಾಕ್ಟರ್ ತಿಪ್ಪೇಸ್ವಾಮಿ ಸಾಹಿತ್ಯ
ಹುನುಗುಂದದ ಪತ್ರಕರ್ತ ಅಮರೇಶ್ ನಾಗೂರ ಪತ್ರಿಕೋದ್ಯಮ
ರವಿ ಸಜ್ಜನರ ಕೃಷಿ ಕೆ ಎಲ್ ಗೋಪಾಲ್ ಕೃಷ್ಣಪ್ಪ ಜನಪದ
ಆಯ್ಕೆಯಾಗಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ