ಬೆಂಗಳೂರು: ಗಾಯನ ಸಮಾಜದಲ್ಲಿ ಮಾತಿನ ಮನೆ ಹಾಗೂ ನೊಬಲ್ ಹಾರ್ಟ್ಸ್ ಹಮ್ಮಿಕೊಂಡಿದ್ದ ಕವಿ ಕಾವ್ಯ ಗಾಯನ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಹಾಗೂ ಡಾ ಸಿ ಅಶ್ವತ್ಥ್ ಅವರುಗಳನ್ನು ಹಾಡುಗಳ ಮೂಲಕ ಸ್ಮರಿಸಲಾಯಿತು.
ವಿದ್ವಾನ್ ಮ್ಯಾಂಡೋಲಿನ್ ಕಾರ್ತಿಕ್ ತಂಡದವರಿಂದ ಗಾಯನ ಹಾಗೂ ವಿದ್ವಾನ್ ವಿಜಯ ಕುಮಾರ್ ತಂಡದವರಿಂದ ನೃತ್ಯಗಾಯನ ಮನೋಜ್ಞವಾಗಿ ನಡೆಯಿತು.
ಇದೇ ಸಂದರ್ಭದಲ್ಲಿ ಸಂಗ್ರಹಿಸಿದ್ದ ನಾಲ್ಕು ಲಕ್ಷ ರೂಪಾಯಿಗಳ ನೆರವಿನ ಚೆಕ್ ನ್ನು ಉದಯಭಾನು ಕಲಾಸಂಘಕ್ಕೆ ರಾ ಸು ವೆಂಕಟೇಶ ಹಾಗೂ ಸತ್ಯಪ್ರಸಾದ್ ಅವರು ಹಸ್ತಾಂತರಿಸಿದರು.
ನಿರೂಪಣೆಯನ್ನು ಶ್ರೀಮತಿ ರಾಧಾ ಕೇಶವ್ ನಿರ್ವಹಿಸಿದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ