ರಾಯಚೂರು/ ಲಿಂಗಸುಗೂರು : ವಿಜ್ಞಾನ ದಿನಾಚರಣೆ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡವಿಬಾವಿ (ಕೆ) ಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಮಕ್ಕಳು ವಿವಿಧ ವಿಜ್ಞಾನ ಪ್ರಯೋಗಗಳನ್ನು ಮಾಡಿ ಸಂತಸ ಪಡುವುದರೊಂದಿಗೆ , ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಸವರಾಜ ಇಸಿಓ ನಾಗರಾಳ ವಲಯ,ಅಪ್ಪಣ್ಣ ಬಿ ಆರ್ ಪಿ ನಾಗರಾಳ ವಲಯ,ಸಿ ಆರ್ ಪಿಗಳಾದ ಮುಕ್ತುಂಸಾಬ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಯಚೂರು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಅಡವಿಬಾವಿ (ಕೆ) ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಾದಂತಹ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಅತಿಥಿಗಳಿಂದ ವಿತರಿಸಲಾಯಿತು.
ಅದೇ ರೀತಿ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಸಿದ್ದಮ್ಮ ಪಾಟೀಲ್ ರವರು ಶಾಲೆಯ ಶಿಕ್ಷಕರಾದ ಶ್ರೀಮತಿ ವಿಜಯಲಕ್ಷ್ಮಿ ನಾಡಗೌಡರ್ , ಶ್ರೀಮತಿ ಪ್ರಿಯಾಂಕ ಮಾಂಡ್ರೆ ,ಕು. ಐಶ್ವರ್ಯ , ಶ್ರೀಮತಿ ಜಲಜಾಕ್ಷಿ , ಕು.ಸಂತೋಷ್ ಎಂ ಪಿ ಸೇರಿದಂತೆ ಅತಿಥಿ ಶಿಕ್ಷಕರು ಹಾಜರಿದ್ದರು.
