ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಶಿಕ್ಷಣದ ಉನ್ನತಿಗೆ ಸಮುದಾಯದ ಸಹಭಾಗಿತ್ವ ಅವಶ್ಯ

ಬಾಗಲಕೋಟೆ : ಸಮುದಾಯದ ಸಹಭಾಗಿತ್ವದಿಂದ ಮಾತ್ರ ಸರಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದು ನಿವೃತ್ತ ಶಿಕ್ಷಕ ಗೂಳನಗೌಡ ಪಾಟೀಲ ಅಭಿಪ್ರಾಯ ಪಟ್ಟರು. ಅವರು ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25 ನೇ ಸಾಲಿನ 7ನೇ ತರಗತಿ ಮಕ್ಕಳ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಸರಕಾರದ ಅನುದಾನವನ್ನು ನೆಚ್ಚಿಕೊಂಡು ಶಾಲೆಯ ಭೌತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಮಾಡುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಹೊನ್ನರಹಳ್ಳಿಯ ಜನ ಲಕ್ಷಾಂತರ ದೇಣಿಗೆ ನೀಡಿ ಮಕ್ಕಳಿಗೆ ಊಟದ ಹಾಲ್ ನಿರ್ಮಾಣ ಮಾಡಿದ್ದು ಶ್ಲಾಘನೀಯ ಎಂದರೆ, ಎಂದರಲ್ಲದೆ ಶಿಕ್ಷಣದ ಉನ್ನತಿಗೆ ಸಮುದಾಯದ ಸಹಭಾಗಿತ್ವ ಅವಶ್ಯ ಎಂದರು.
ನಾಗೂರ್ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಸಂಗಪ್ಪ ಸಂಗಮ ಮಾತನಾಡಿದ ಶಾಲೆಯ ಕೀರ್ತಿ ಹೆಚ್ಚಿಸುತ್ತದೆ ಮಕ್ಕಳ ಕ್ರಿಯಾಶೀಲ ಶಿಕ್ಷಕರಿಂದ ಶಾಲೆಯ ಕೀರ್ತಿ ಹೆಚ್ಚುತ್ತದೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸೃಜನಶೀಲ ಶಿಕ್ಷಕರು ಸದಾ ಶ್ರಮಿಸುತ್ತಿರುತ್ತಾರೆ ಎಂದು ಹೇಳಿದರಲ್ಲದೆ ಸಮೃದ್ಧ ರಾಷ್ಟ್ರಕಟ್ಟಲು ಶಿಕ್ಷಣ ಅತಿೇ ಅವಶ್ಯವಾಗಿದೆ ರಕ್ಕಸಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶೃತಿ ನೀಲಮ್ಮನವರ ಮಾತನಾಡುತ್ತಾ, ಮನುಷ್ಯನಿಗೆ ಆತ್ಮಸಾಕ್ಷಿ ಬಹಳ ಮುಖ್ಯ ನಾವು ಮಾಡುವ ತಪ್ಪುಗಳನ್ನು ಬೇರೆಯವರು ಎತ್ತಿ ತೋರಿಸುವ ಮುನ್ನ ಅದೇ ಎಚ್ಚರಿಸುತ್ತದೆ. ಯಾರೋ ಮಾಡಿದ ಕೆಲಸವನ್ನು ನಾವು ಮಾಡಿದ್ದೇವೆ ಎಂದು ಹೇಳುವಲ್ಲಿ ಮನಸ್ಸಾಕ್ಷಿ ಚುಚ್ಚುತ್ತದೆ ಎಂದರು.
ಸನ್ಮಾನಿತರ ಪರವಾಗಿ ಆಧ್ಯಾಪಕ ಎನ್ ಸಿ ಘಟ್ಟಿಗನೂರ ಮಾತನಾಡಿ, ಎಷ್ಟೋ ಶಾಲೆಗಳಲ್ಲಿ ಭೌತಿಕ ಸೌಲಭ್ಯವಿದ್ದು ಶಿಕ್ಷಕರ ಕೊರತೆ ಇರುತ್ತದೆ. ಕೆಲವು ಕಡೆ ಕ್ರಿಯಾಶೀಲ ಸಂಪನ್ಮೂಲ ಶಿಕ್ಷಕರಿದ್ದರೂ ಅಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರೇ ಸ್ವಂತ ಹಣ ಖರ್ಚು ಮಾಡಿ, ದಾನಿಗಳಿಂದ ಕಾಣಿಕೆ ಸಂಗ್ರಹಿಸಿ ಮೂಲಭೂತ ಸೌಲಭ್ಯ ಕಲ್ಪಿಸಲು ಮುಂದಾಗಿರುವುದು ಅವರ ವೃತ್ತಿ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎನ್ನುತ್ತಾ ಸ್ಥಳಿಯ ಶಾಲಾ ಶಿಕ್ಷಕರ ಸೇವೆಯನ್ನು ಸ್ಮರಿಸಿದರು. ಶಾಲಾ ಮಕ್ಕಳ ಪರವಾಗಿ ಅಮೃತ ಕೊಣ್ಣೂರ, ಗೋಲಪ್ಪ ಕೊಣ್ಣೂರ, ವಿದ್ಯಾಶ್ರೀ ಅಮಾತಿಗೌಡರ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಗೆ ದೇಣಿಗೆ ನೀಡಿದ ಹಲವಾರು ಮಹನಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಎಸ್ ಡಿ ಎಂ ಸಿ ಅಧ್ಯಕ್ಷ ರಾಮನಗೌಡ ಪವಾಡಿಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯರಾದ ಈರಪ್ಪ ಮಾಗಿ, ಬಸಮ್ಮ ಪವಾಡಿಗೌಡ್ರ, ಉಮಾ ಬಲಕುಂದಿ, ಹಿರಿಯರಾದ ರುದ್ರಗೌಡ ಅಮಾತಿಗೌಡರ, ರಾಮನಗೌಡ ಮಾಗಿ, ಯಲಗುರದಪ್ಪ ಗುಡದನ್ನವರ, ಸಿದ್ದು ಶೀಲವಂತರ, ಸಂಗಪ್ಪ ಈರಣ್ಣವರ, ಅಂದಾನೆಪ್ಪ ಕೊಣ್ಣೂರ, ಸಂಗನಬಸಪ್ಪ ಸೂಳಿಬಾವಿ, ರತ್ನವ್ವ ಕಡಿವಾಲ, ಸಂಗನಬಸಯ್ಯ ಹಿರೇಮಠ, ಮಹಾಂತೇಶ ಅಳ್ಳೊಳ್ಳಿ, ವೀರಭದ್ರಪ್ಪ ಕೊಳ್ಳೊಳ್ಳಿ, ಮಲ್ಲೀಕಸಾಬ ನದಾಫ, ಮಹಾಂತೇಶ ಚಲವಾದಿ, ಲಕ್ಷ್ಮಪ್ಪ ಮಾದರ ಮುಖ್ಯಗುರು ಪಿ ಎಸ್ ಮಾಲಗಿತ್ತಿ ಮೊದಲಾದವರು ಉಪಸ್ಥಿತರಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ