ಸಾಲಿಗ್ರಾಮ ತಾಲ್ಲೂಕಿನ ಎಲೆ ಮುದ್ದನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಿತು. ಎಲೆ ಮುದ್ದನಹಳ್ಳಿ ಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಿ ವಿರುಪಾಕ್ಷ ಉಪಾಧ್ಯಕ್ಷರಾಗಿ ಸುಂದರಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಾದ ಸಹಾಯಕ ಇಲಾಖೆಯ ರವಿ ಎಂ ಅವರು ಪ್ರಕಟ ಮಾಡಿದರು. ನಿರ್ದೇಶಕರುಗಳಾದ ದೊರೇಶ ಸ್ವಾಮಿ, ಪುಟ್ಟಸ್ವಾಮಿಗೌಡ, ಉದಯಕುಮಾರ್, ರಾಜಮ್ಮ, ಶೋಭಾ, ವೆಂಕಟೇಶ್, ಸಾಲಿಗ್ರಾಮ ತಾಲೂಕು ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ಸ್ವರೂಪ, ಕಾಂಗ್ರೆಸ್ ಮುಖಂಡರಾದ ಸಚಿನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವರದಿ ಗುಂಡ್ಲುಪೇಟೆ ಕುಮಾರ್