ತುಮಕೂರು/ ಪಾವಗಡ : ಬರಪೀಡಿತ ಪ್ರದೇಶ ಮಳೆ ಬೆಳೆಯ ಕೊರತೆ ಪರಿಣಾಮ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಕಾಮಗಾರಿ ಕೆಲಸಗಳಲ್ಲಿ ತೊಡಗಿ ಕೆಲಸ ಮಾಡಿದ್ದೇವೆ ಕಾಮಗಾರಿಗಳ ಕೂಲಿ ನಿರ್ವಹಿಸಿದ ಬಗ್ಗೆ ಅನ್ ಲೈನ್ ಜಿಪಿಎಸ್ ಸಹ ಮಾಡಲಾಗಿದೆ ಹೀಗಿದ್ದರೂ ಕಳೆದ ಎರಡು ತಿಂಗಳಿಂದಲೂ ನರೇಗಾ ಯೋಜನೆಯ ಕೂಲಿ ಹಣ ಕೂಲಿಕಾರರ ಖಾತೆಗೆ ಜಮೆ ಅಗಿಲ್ಲ. ಇದರಿಂದ ಕೂಲಿಕಾರರಿಗೆ ತೀವೃ ಸಮಸ್ಯೆ ಎದುರಾಗಿದೆ ಎಂದು ತಾಲೂಕಿನ ವಿವಿಧ ಗ್ರಾಪಂಗಳ ನೂರಾರು ಮಂದಿ ಕೂಲಿಕಾರರು ಅಳಲು ತೋಡಿಕೊಂಡಿದ್ದಾರೆ.
ಈ ಸಂಬಂಧ ಸೋಮವಾರ ತಾಲೂಕು ಕೂಲಿಕಾರರ ಸಂಘಟನೆಯ ಮುಖ್ಯಸ್ಥರಾದ ಲತಾ ಗಂಗರಾಜ್ ಮಾತನಾಡಿ ಕನ್ನಮೇಡಿ, ಮಂಗಳವಾಡ, ಅರಸೀಕೆರೆ, ಬ್ಯಾಡನೂರು ಇತರೆ ತಾಲೂಕಿನ ಅನೇಕ ಗ್ರಾ.ಪಂ. ಗಳಲ್ಲಿ ಐನ್ನೂರಕ್ಕೂ ಹೆಚ್ಚು ಮಂದಿ ಬಡ ಕೂಲಿಕಾರ್ಮಿಕರು ನರೇಗಾ ಯೋಜನೆ ಅಡಿಯ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಈ ಸಂಬಂಧ ಕೆಲಸ ನಿರ್ವಹಿಸಿದ ಬಗ್ಗೆ ಸರ್ಕಾರದ ನಿಯಮನುಸಾರ ಗ್ರಾ.ಪಂ. ನಿಂದ ಅನ್‌ಲೈನ್ ಜಿಪಿಎಸ್ ಸಹ ಮಾಡಲಾಗಿದೆ. ಆದರೂ ಕಳೆದ ಎರಡು ತಿಂಗಳಿಂದಲೂ ನರೇಗಾ ಯೋಜನೆ ಕಾಮಗಾರಿಯ ನಿರ್ವಹಣೆಯಲ್ಲಿ ತೊಡಗಿದ್ದ ಕೂಲಿಕಾರ್ಮಿಕರಿಗೆ ಕೂಲಿ ಹಣ ಬಿಡುಗಡೆಗೊಳಿಸಿಲ್ಲ. ಪರಿಣಾಮ ಇದನ್ನೆ ನಂಬಿ ಕೆಲಸ ನಿರ್ವಹಿಸಿದ ಗ್ರಾಮೀಣ ಕೂಲಿ ಕಾರ್ಮಿಕರು ತೀವೃ ಸಮಸ್ಯೆಗೆ ಸಿಕ್ಕಿಕೊಂಡಿದ್ದು ಪರದಾಡುತ್ತಿದ್ದಾರೆ. ಕುಟುಂಬ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಕೂಲಿಕಾರರ ಸಂಕಷ್ಟ ಗಂಭೀರವಾಗಿ ಪರಿಗಣಿಸಿ ಯೋಜನೆಯ ಅಡಿ ಕಾಮಗಾರಿಯ ಕೆಲಸ ಮಾಡಿದ ಮಾನವ ದಿನಗಳ ಆಧಾರದ ಮೇಲೆ ತಕ್ಷಣ ಕೂಲಿ ಹಣ ಬಿಡುಗಡೆಗೊಳಿಸಿ ಕೂಲಿಕಾರರ ಜೀವನ ಸುಧಾರಿಸುವಂತೆ ಜಿ.ಪಂ ಹಾಗೂ ಸರ್ಕಾರಕ್ಕೆ ಒತ್ತಾಯಿಸಿದರು.
ತಾಲೂಕಿನಲ್ಲಿ ಬಹುತೇಕ ಮಂದಿ ಗ್ರಾಪಂ ನಿಂದ ಜಾಬ್ ಕಾರ್ಡ್ ಪಡೆದು ನರೇಗಾ ಯೋಜನೆಯ ಕಾಮಗಾರಿಗಳ ಕೂಲಿ ಕೆಲಸದಲ್ಲಿ ನಿರತರಾಗಿದ್ದಾರೆ. ಕಳೆದ ಎರಡು ತಿಂಗಳಿಂದಲೂ ಕೂಲಿ ಹಣ ಫಲಾನುಭವಿಯ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಿಲ್ಲ. ಸರ್ಕಾರ ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿದ ಅವರು ನರೇಗಾ ಯೋಜನೆಯಲ್ಲಿ ಸರ್ಕಾರದ ನಿಯಮನುಸಾರ ಈಗಾಗಲೇ ಕೂಲಿಕಾರರಿಗೆ ದಿನಕ್ಕೆ ನೀಡುತ್ತರುವ ತಲಾ 349.ರೂ ಕೂಲಿ ಹಣದ ಬದಲಿಗೆ 600 ರೂ.ಗಳಿಗೆ ಹೆಚ್ಚಿಸಬೇಕು. ನೂರು ದಿನ ಕೆಲಸದ ಬದಲಿಗೆ 150ದಿನಗಳಿಗೆ ಹೆಚ್ಚಿಸಬೇಕು. ಅಪಘಾತದ ವೇಳೆ ಕೂಲಿಕಾರರಿಗೆ ನೀಡುವ ಎರಡು ಲಕ್ಷ ಪರಿಹಾರ ಬದಲು 5ಲಕ್ಷ ಹೆಚ್ಚಿಸಬೇಕು. ಈ ಬಗ್ಗೆ ತಾಲೂಕಿನ ಸಾವಿರಾರು ಬಡ ಕೂಲಿಕಾರರಿಂದ ಪತ್ರ ಚಳುವಳಿ ನಡೆಸುವ ಮೂಲಕ ಸಹಿ ಮಾಡಿದ ಪ್ರತಿಗಳನ್ನು ಪ್ರದಾನ ಮಂತ್ರಿ ನರೇಂದ್ರಮೋದಿ ಹಾಗೂ ಸಿಎಂ ಸಿದ್ದರಾಮಯ್ಯ ಮತ್ತು ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರಿಗೆ ಕಳುಹಿಸಿ ಮನವಿ ಮಾಡಲಾಗಿದೆ. ಗ್ರಾಮೀಣ ಕೂಲಿಕಾರರ ನೆರವಿಗೆ ಬರುವ ಮೂಲಕ ಶೀಘ್ರ ನರೇಗಾದಲ್ಲಿ ಕೆಲಸ ಮಾಡಿದ ಕೂಲಿಕಾರ್ಮಿಕರ ಎರಡು ತಿಂಗಳ ಕೂಲಿ ಹಣ ಬಿಡುಗಡೆ ಮತ್ತು ಇತರೆ ಬೇಡಿಕೆ ಈಡೇರಿಸವತ್ತ ಸರ್ಕಾರ ಆಸಕ್ತಿ ವಹಿಸುವಂತೆ ಮನವಿ ಮಾಡಿದರು.
ಇದೇ ವೇಳೆ ನರೇಗಾ ಕೂಲಿಕಾರರ ಸಂಘದ ಮುಖ್ಯಸ್ಥರಾದ ಮಂಗಳವಾಡ ಗೀತಮ್ಮ,ಅಂಬಿಕಾ,ಸೌದಯ್ಯ,ಕರಿಯಮ್ಮ,ಬೆಟ್ಟದ ತಿಮ್ಮಪ್ಪ,ಉದ್ಘಾಟೆಯ ವಸಂತಮ್ಮ ಮದ್ದೆ ಗ್ರಾಮದ ಶಿವಮೂರ್ತಿ,ಕರೆಕ್ಯಾತನಹಳ್ಳಿಯ ಸ್ವಾರಣ್ಣ, ಉಲ್ಲೇಗೌಡ ಹಾಗೂ ಇತರೆ ನೂರಾರು ಮಂದಿ ಗ್ರಾಮೀಣ ಕೂಲಿಕಾರರಿದ್ದರು.
ವರದಿ ಕೆ.ಮಾರುತಿ ಮುರಳಿ