ರಾಯಚೂರು: ದಿ. 03/03/2025 ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ರಾಯಚೂರು ವತಿಯಿಂದ ಇಂದು ಬೆಳಿಗ್ಗೆ ತುಂಗಭದ್ರಾ ಎಡದಂಡೆ ಮುಖ್ಯ ನಾಲೆಯ 54ನೇ ಡಿಸ್ಟ್ರಿಬ್ಯೂಟರ್ ನ 6 ಎಲ್, 10 ಎಲ್ ಸೇರಿದಂತೆ ಇನ್ನಿತರ ಎಲ್ಲಾ ಕಾಲುವೆಗಳನ್ನು ಬಂದು ಮಾಡಿಕೊಂಡು ಕುಡಿಯುವ ನೀರಿನ ನೆಪ ಮಾಡಿಕೊಂಡು ರೈತರ ಬೆಳೆ ಹಾಳು ಮಾಡುವ ಸರ್ಕಾರ ಮತ್ತು ಅಧಿಕಾರಿಗಳ ನಡೆಯನ್ನು ವಿರೋಧಿಸಿ ಇಂದು 10 ಎಲ್ ಕಾಲುವೆ ಮೇಲೆ ಟ್ರ್ಯಾಕ್ಟರ್ ಗಳ ಸಮೇತ ಧರಣಿ ನಡೆಸಲಾಯಿತು. ಸ್ಥಳಕ್ಕೆ ಸಾಯಂಕಾಲ ತಹಶೀಲ್ದಾರ್ ಅರುಣ ಕುಮಾರ ಎಚ್. ದೇಸಾಯಿ ರವರು ಹಾಗೂ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಸತ್ಯನಾರಾಯಣ ಶೆಟ್ಟಿ ರವರು ಮತ್ತು ಜವಳಗೇರಾ ಕಾರ್ಯನಿರ್ವಾಹಕ ಅಭಿಯಂತರರಾದ ದಾವಲಸಾಬ್ ದೊಡ್ಮನಿಯವರು, ಬಾಬುಗೌಡ ಬಾದರ್ಲಿ ಯವರು, ಬಳಗಾನೂರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಯರಿಯಪ್ಪ ರವರು ಪೊಲೀಸ್ ಸಿಬ್ಬಂದಿಗಳು, ಕಿರಿಯ ಇಂಜಿನಿಯರ್ ಗಳು ಸ್ಥಳಕ್ಕೆ ಧಾವಿಸಿ ಯಾವುದೇ ಕಾರಣಕ್ಕೂ ರೈತರ ಬೆಳೆಯನ್ನು ಹಾಳು ಮಾಡುವುದಿಲ್ಲ ರಕ್ಷಣೆ ಮಾಡುತ್ತೇವೆ ಯಾವುದೇ ಕೆನಾಲ್ ನ್ನು ಸಂಪೂರ್ಣ ಬಂದ್ ಮಾಡುವುದಿಲ್ಲ ಮೇಲಿನಿಂದ ಕಾಲುವೆಗೆ ನೀರನ್ನು ಹೆಚ್ಚಿಗೆ ಮಾಡಿಕೊಂಡು ಬರುತ್ತೇವೆ ಆ ನೀರಿನ ಸ್ವಲ್ಪ ಭಾಗ ಕುಡಿಯುವ ನೀರಿಗೆ ಮುಂದಕ್ಕೆ ಒಯ್ಯುತ್ತೇವೆ ಒಂದು ದಿನ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರು. ಆಗ ರೈತರ ಒಪ್ಪಿಗೆ ಮೇರೆಗೆ ಜಲಸಂಪನ್ಮೂಲ ಸಚಿವರು, ರಾಜ್ಯದ ಉಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರಿಗೆ ಬರೆದ ಹಲವು ಹಕ್ಕೊತ್ತಾಯಗಳ ಮನವಿ ಪತ್ರವನ್ನು ತಹಸೀಲ್ದಾರರ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶರಣಪ್ಪ ಮರಳಿ ಸುಲ್ತಾನಪುರ, ಜಿಲ್ಲಾ ಉಪಾಧ್ಯಕ್ಷರಾದ ರಾಮಯ್ಯ ಜವಳಗೆರ, ಟಿ ರಾಮಕೃಷ್ಣ ಬಾಲಯ್ಯ ಕ್ಯಾಂಪ್, ಲಿಂಗಪ್ಪ ಯರದಿಹಾಳ ಜವಳಗೇರಾ, ಸೋಮಶಂಕ್ರಪ್ಪ ಅಡ್ಡಿ ಜಂಗಮರಹಟ್ಟಿ, ಚಂದ್ರೇಗೌಡ ಸುಲ್ತಾನಪುರ, ಅಮರೇಗೌಡ ಜವಳಗೇರಾ, ವಿರುಪಾಕ್ಷಪ್ಪ ಜವಳಗೆರೆ,ಕಲ್ಲಪ್ಪ ತುರಕಟ್ಟಿ ಕ್ಯಾಂಪ್, ಕೋಟೇಶ್ವರ ರಾವ್ ಅರಗಿನ ಮರ ಕ್ಯಾಂಪ್, ಸಣ್ಣ ಹಿರೇಲಿಂಗಪ್ಪ ಸೂರ್ಯ ರೆಡ್ಡಿ ಕ್ಯಾಂಪ್, ಆರ್ ರಮೇಶ ಸಿಎಸ್ಎಫ್ ಕ್ಯಾಂಪ್, ಯಂಕಪ್ಪ ಬೇರಗಿ ತಾತಪ್ಪ ಕ್ಯಾಂಪ್, ಸೇರಿದಂತೆ ಇನ್ನಿತರ ಗ್ರಾಮಗಳ ರೈತರು ಸ್ವಹ ಇಚ್ಛೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ : ನಜೀರ್ ಚೋರಗಸ್ತಿ