ವಿಜಯಪುರ : ತಾಳಿಕೋಟಿ ತಾಲೂಕಿನ ಕುವೆಂಪು ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 2025 – 25 ನೇ ಸಾಲಿನ ವಾರ್ಷಿಕ ಸಮ್ಮೇಳನ ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಬಿ. ಎನ್. ನಾಯ್ಕೋಡಿ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶ್ರೀ ಮಾತೃಶ್ರೀ ಮಂಜುಳಾ ತಾಯಿ, ಶ್ರೀ ಶಿವಾನಂದಗೌಡ ಕಡಕೋಳ ನಿವೃತ್ತ ಶಿಕ್ಷಕರು, ಮುಖ್ಯ ಗುರುಗಳು ಆಂಜನಾಲು, ಗೀತಾ ದೋರನಹಳ್ಳಿ, ಶಾಲಾ ಆಡಳಿತ ಮಂಡಳಿ ಶ್ರೀ ಮಧು .ಬಿ. ನಾಯ್ಕೋಡಿ ಆಗಮಿಸಿದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಾರ್ಷಿಕೋತ್ಸವದ ಪ್ರಧಾನ ಆಕರ್ಷಣೆ ಎಂದರೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜನ ಬರುವುದೇ ಅವುಗಳನ್ನು ನೋಡಲು ಹೆತ್ತವರಿಗೆ ತಮ್ಮ ಮಕ್ಕಳನ್ನು ವೇದಿಕೆಯಲ್ಲಿ ನೋಡುವುದೇ ಒಂದು ಹಬ್ಬ ಅದರ ಜಗತ್ತಿಗೆ ನಾಡಿನ ಸಾಂಸ್ಕೃತಿಕ ಪರಿಷೆಯನ್ನು ಪರಿಚಯ ಮಾಡಲು ಒಂದು ಒಳ್ಳೆಯ ಅವಕಾಶ ಇದು ಆದರೆ ಈಗ ಆಗುತ್ತಿರುವುದು ಏನು
ಪ್ರತಿ ಮಗು ಒಂದಲ್ಲ ಒಂದು ಪ್ರತಿಭೆಯನ್ನು ಪಡೆದುಕೊಂಡು ಈ ಜಗತ್ತಿಗೆ ಬಂದಿರುತ್ತದೆ. ಕೆಲವು ಮಕ್ಕಳಂತೂ ಹಲವು ಪ್ರತಿಭೆಗಳ ಎರಕವೇ ಆಗಿರುತ್ತಾರೆ ಅಂತಹ ಮಕ್ಕಳ ಪ್ರತಿಭೆಗಳನ್ನು ಶಿಕ್ಷಕರು ಗುರುತಿಸಿ ಅವುಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಕ್ಯಾನ್ವಾಸ್ ಮಾಡುವ ಉದ್ದೇಶ ಹೊಂದಿರುವ ಉತ್ಸವವೇ ಶಾಲಾ ವಾರ್ಷಿಕ ಉತ್ಸವ ಅಂದರೆ ಜೊತೆಗೆ ಶಾಲೆಗಳ ಇಮೇಜ್ ಹೆಚ್ಚು ಮಾಡುವ
ಉದ್ದೇಶ ಖಂಡಿತವಾಗಿ ಇದೆ. ಕನ್ನಡ ಸಾಂಸ್ಕೃತಿಕ ಪರಿಚಯ ಮತ್ತು ಪ್ರಸಾರ ಕೂಡ ಆಗಬೇಕು ಆದರೆ ಇಂದಿನ ಶಾಲಾ ವಾರ್ಷಿಕೋತ್ಸವಗಳು ಆ ಉದ್ದೇಶಗಳನ್ನು ಈಡೇರಿಸುತ್ತೇವೆ ಎಂದು ಶಾಲೆಯ ಅಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿನೋದ್ ವಾಲಿ, ಸುನಿಲ್ , ಪ್ರಕಾಶ್ ಆಲೂರ,ಸಂತೋಷ ಹುಂಗ್ಗಿ , ವಿಶ್ವನಾಥ ಚಲವಾದಿ, ಉಸ್ಮಾನ ಬಾಗವಾನ (ಪತ್ರಕರ್ತ ) ವೇದಿಕೆ ಮೇಲೆ ಉಪಸ್ಥಿತರಿದ್ದರು.
ವರದಿಗಾರರು : ಉಸ್ಮಾನ ಬಾಗವಾನ (ಬಳಗಾನೂರ)