ಗರ್ಜಿಸಿದ ಹುಲಿ ಮಂಕಾಗಿದೆ ಇನ್ನು
ತನಗೆ ಆದ ನೋವನ್ನು ಮಿಡಿಯುತ್ತಾ
ವೇದನೆಯಲ್ಲಿ ನರಳುತ್ತಿದೆ ಜೀವವಿಂದು
ಯಾರೋ ಮಾಡಿದ ಗಾಯಕ್ಕೆ ನೊಂದು ಬೆಂದು
ಕಾಡಲ್ಲಿ ಇತ್ತು ಒಂಟಿಯಾಗಿ ಅದು ಒಂದು
ತನ್ನಷ್ಟಕ್ಕೆ ತಾನು ಉಂಡುಕೊಂಡು
ಪರಿಚಯ ಇರದೇ ಅದು ಸರಿದುಕೊಂಡು
ಸ್ವತಂತ್ರವಾಗಿ ತನಗೆ ಇಷ್ಟ ಬಂದಂತೆ ಅಲೆದಾಡಿಕೊಂಡು
ಸಂಬಂಧಗಳ ಬಲಗೆ ಬಿದ್ದಿತ್ತು ಹುಲಿಯೂ
ಎಂದು ನೋಡದ ಹೊಸ ಪರಿಚಯವು
ಆನಂದ ತೇಲುತ್ತಿರುವುದು ಒಂದೆರಡು ದಿನವು
ಮುಂದೆ ಕಷ್ಟ ಇಲ್ಲದ ಪರಿಸ್ಥಿತಿ ಎಂದುಕೊಂಡು
- ಎಂ. ಚಂದ್ರಶೇಖರ ಚಾರಿ ,ಶಿಕ್ಷಕರು
ವಿಶ್ವಮಾನವ ವಸತಿ ಪ್ರೌಢಶಾಲೆ
ಚಿತ್ರದುರ್ಗ.