ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಸಾಹಿತಿ ಬಂಗಿದೊಡ್ದ ಮಂಜುನಾಥ ಅವರಿಗೆ ರಾಜ್ಯಮಟ್ಟದ ಸಾಹಿತ್ಯ ಮಿತ್ರಕೂಟ ಪ್ರಶಸ್ತಿ ಲಭಿಸಿದೆ.
ಕೊಳ್ಳೇಗಾಲದ ಶ್ರೀ ಅರುಣಾಚಲೇಶ್ವರ ಸಭಾಂಗಣದಲ್ಲಿ ಮಾರ್ಚ್ 9 ರಂದು ಸಾಹಿತ್ಯ ಮಿತ್ರಕೂಟ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಂಡಿದೆ ಎಂದು ಸಾಹಿತ್ಯ ಮಿತ್ರಕೂಟ ಅಧ್ಯಕ್ಷ ಮದ್ದೂರು ದೊರೆಸ್ವಾಮಿ ತಿಳಿಸಿದ್ದಾರೆ. ಸಾಹಿತ್ಯ ಮಿತ್ರಕೂಟ ವತಿಯಿಂದ 2024 – 25 ನೇ ಸಾಲಿನ ರಾಜ್ಯಮಟ್ಟದ ಕಾದಂಬರಿ ಸ್ಪರ್ಧೆಯನ್ನು ನಡೆಸಲಾಗಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕೃತಿಗಳನ್ನು ಸಾಹಿತ್ಯ ವಲಯದ ಹಿರಿಯ ಸಾಹಿತಿಗಳಿಂದ ಮೂರು ಹಂತದಲ್ಲಿ ಓದಿಸಿ ಅಂತಿಮವಾಗಿ ಮೂರು ಕೃತಿಗಳನ್ನು ರಾಜ್ಯಮಟ್ಟದ ಸಾಹಿತ್ಯ ಮಿತ್ರಕೂಟ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಕಂಪ್ಲಿ ಪಟ್ಟಣದ ಬಂಗಿ ದೊಡ್ಡ ಮಂಜುನಾಥ ಅವರ ‘ಅರಳು ಮಲ್ಲಿಗೆ’ ಕಾದಂಬರಿಗೆ ಪ್ರಥಮ ಸ್ಥಾನ ಚಿಕ್ಕಮಂಗಳೂರಿನ ಜಿಲ್ಲೆಯ ಕಾರ್ತಿಕಾದಿತ್ಯ ಅವರ ‘ಪ್ಯಾರಾಸೈಟ್’ ಕಾದಂಬರಿಗೆ ದ್ವಿತೀಯ ಸ್ಥಾನ ಬೆಂಗಳೂರಿನ ಬಿ.ಎಂ. ಗಿರಿರಾಜ್ ಅವರ ‘ಕಥೆಗೆ ಸಾವಿಲ್ಲ’ ಕಾದಂಬರಿಗೆ ತೃತೀಯ ಸ್ಥಾನ ದೊರೆತಿದೆ. ವಿಜೇತರಿಗೆ ಕೊಳ್ಳೇಗಾಲದ ಶ್ರೀ ಅರುಣಾಚಲೇಶ್ವರ ಸಭಾಂಗಣದಲ್ಲಿ ಮಾರ್ಚ್ 9 ರಂದು ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ನೆನಪಿನ ಕಾಣಿಕೆ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಬಂಗಿ ದೊಡ್ಡ ಮಂಜುನಾಥ ರವರಿಗೆ ಕಂಪ್ಲಿ ನಗರದ ಸಾಹಿತ್ಯ ಸಿರಿ ಬಳಗ, ಕನ್ನಡ ಸಾಹಿತ್ಯ ಪರಿಷತ, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಟ್ರಸ್ಟ್ , ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಹಾಗೂ ಹಲವಾರು ಸಂಘ ಸಂಸ್ಥೆಗಳು ಹೃತ್ಪೂರ್ವಕ ಅಭಿನಂದಿಸಿದ್ದಾರೆ.
ವರದಿ : ಜಿಲಾನ್ ಸಾಬ್ ಬಡಿಗೇರ