ಅಜ್ಜಿಯು ಹೇಳಿದ ಕಥೆಗಳ ಮೌಲ್ಯದಲಿ
ಕಳೆದೆನು ಬಾಲ್ಯವ ಪ್ರೀತಿ ಮಮತೆಯಲಿ
ತಾಯಿ ನೀಡಿದ ಮಮತೆಯ ಮುತ್ತು
ಅದು ನನ್ನ ಬಾಳಿಗೆ ಮರೆಯದ ತುತ್ತು
ದೊಡ್ಡಮ್ಮ ಚಿಕ್ಕಮ್ಮರ ಸೌಜನ್ಯದ ಸಲುಗೆ
ಸ್ಫೂರ್ತಿಯ ಬೆನ್ನೆಲುಬು ನನ್ನ ಬದುಕಿಗೆ
ತಿದ್ದಿ ಬುದ್ಧಿಯ ಹೇಳಿದರು ಗುರು ಮಾತೆಯರು
ನಮ್ಮ ಜೀವನಕ್ಕೆ ದೇವರಾದ ಮಹಾತ್ಮರು
ಅತ್ತೆ ಅಬ್ಬರಿಸಿದರೂ ತಿದ್ದಿದಳು ತನ್ನಂತೆ
ಅವಳ ಕಾಳಜಿಗೆ ತಲೆಬಾಗುವದು ಧನ್ಯತೆ
ಅಕ್ಕ ತಂಗಿಯರ ವಾತ್ಸಲ್ಯದ ನುಡಿಗಳು
ಸಾಧನೆಯ ಹಾದಿಗೆ ಬೆಲೆಕಟ್ಟಲಾಗದ ಜೀವನಾಡಿಗಳು
ಅತ್ತಿಗೆ ಕಲಿಸಿದಳು ಜವಾಬ್ದಾರಿ
ನಿಮಗೆ ನಾನೆಂದು ಆಭಾರಿ
ಸಪ್ತಪದಿಯ ತುಳಿದು ಬಂದೆ ಹೆಂಡತಿಯಾಗಿ
ಸಂಸಾರದ ಭಾರ ಹೊರಲು ಜೊತೆಯಾಗಿ
ದೇವತೆಯಾಗಿ ಹುಟ್ಟಿ ಬಂದಳು ತಾಯಿಯೇ ಮಗಳಾಗಿ
ಉಸಿರಿರೋವರೆಗೂ ರಕ್ಷಿಸುವೆ ಕಣ್ಗಾವಲಾಗಿ
ಅನ್ನ ಅಕ್ಷರ ಆಶ್ರಯ ನೀಡಿದಳು ಕನ್ನಡಾಂಬೆ
ಸರ್ವರನ್ನು ರಕ್ಷಿಸಿ ಕಾಪಾಡುವಳು ಭಾರತಾಂಬೆ
ಸರ್ವ ಹೆಣ್ಣು ಮಕ್ಕಳಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರೀತಿಯ ಶುಭಾಷಯಗಳು
-ಶ್ರೀ ಮುತ್ತು ಯ.ವಡ್ಡರ ,ಶಿಕ್ಷಕರು
ಬಾಗಲಕೋಟೆ