ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಡಣಿ ಗ್ರಾಮದ ಶ್ರೀ ಭೋಗಲಿಂಗೇಶ್ವರ ಜಾತ್ರಾ ನಿಮಿತ್ಯ ಹಮ್ಮಿಕೊಂಡಿರುವ ಸಾಮೂಹಿಕ ವಿವಾಹದ ವಾಹನ ಚಾಲನೆಯನ್ನು ಶ್ರೀ ಆಲಮೇಲ ಅಳ್ಳೋಳ್ಳಿ ಮಠದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಸಿಂದಗಿಯ ಜನಪ್ರಿಯ ಶಾಸಕರಾದ ಅಶೋಕ ಮನಗೂಳಿ ಅವರು ಚಾಲನೆ ನೀಡಿ ಮಾತನಾಡಿ ದಿವಂಗತ ಎಂ ಸಿ ಮನಗೂಳಿಯವರು ಜನಪರ ಕಾರ್ಯಗಳನ್ನು ಸ್ಮರಣೆ ಮಾಡಿಕೊಂಡು ಅವರ ಹೆಸರಿನ ಮೇಲೆ ಕಡಣಿ ಗ್ರಾಮದ ಶ್ರೀ ಬೋಗಲಿಂಗೇಶ್ವರರ ಜಾತ್ರೆಯಲ್ಲಿ 101 ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದಕ್ಕೆ ನಾನು ಮನಗೂಳಿ ಪರಿವಾರದ ವತಿಯಿಂದ ಸಮಸ್ತ ಕಡಣಿ ಗ್ರಾಮದ ಜನತೆಗೆ ಅಭಿನಂದನೆ ತಿಳಿಸುತ್ತೇನೆ. ಕಡಣಿ ಗ್ರಾಮದ ಹೆಸರು ಇಡೀ ರಾಜ್ಯದಲ್ಲಿ ಪ್ರಚಾರವಾಗಲಿ ಎಂದು ಹೇಳಿದರು. ಕಡಣಿ ಹಾಗೂ ಆಲಮೇಲ ಸುತ್ತಮುತ್ತಲಿನ ಗ್ರಾಮದ ಯುವ ಮುಖಂಡರು ಭಾಗಿಯಾಗಿದ್ದರು.
ವರದಿ ಹಣಮಂತ ಚ ಕಟಬರ್