ವಿಜಯಪುರ: ದಿನಾಂಕ 8.3.2025ರಂದು ಅಂಜುಮನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾರದಾಮನಿ ಹುಣಿಸ್ಯಾಳ ರವರು ಈ ಸಭೆಯ ಅಧ್ಯಕ್ಷರಾಗಿದ್ದರು . ಮುಖ್ಯ ಅತಿಥಿಗಳಾಗಿ ಶ್ರೀಮತಿ ಶಿಲ್ಪಾ ಭಸ್ಮೆ ಹಾಗೂ ಶ್ರೀ ಉಸ್ಮಾನ್ ಭಾಷಾ ಅಲ್ಗೂರ್ ಜಂಟಿ ಕಾರ್ಯದರ್ಶಿಗಳು ವಿಜಯಪುರ ವಕೀಲರ ಸಂಘ ಹಾಜರಿದ್ದರು. ಈ ಸಂದರ್ಭದಲ್ಲಿ ಶ್ರೀ ಬಿ ಎಚ್ ಅವಟಿ ಅವರು ಮುಖ್ಯ ಅತಿಥಿಗಳ ಪರಿಚಯ ಭಾಷಣವನ್ನು ಮಾಡಿದರು ನಂತರ ಡಾ ದಿಲಶಾದ ನದಾಫ್ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರೊಫೆಸರ್ ನಾಹಿದಾ ಅಂಜುಮ ಬಗಲಿ, ಆಸ್ಮಾ ಜಂಬಿಗಿ,ಗುಡುದೂರ್ ಮೇಡಂ ಹಾಜರಿದ್ದರು ಶ್ರೀ ಮುತ್ತು ಕಾಳೆ ವಕೀಲರು ಹಾಗೂ ಅಬ್ದುಲ್ ನದಾಫ್ ವಕೀಲರು ಹಾಜರಿದ್ದರು.
