ವಿಜಯಪುರ: ಮಹಿಳೆಯರ ಮೇಲೆ ನಡೆಯುತ್ತಿರುವ ಕ್ರೌರ್ಯ ಮತ್ತು ಅನ್ಯಾಯ ಹಾಗೂ ಸಾಮಾಜಿಕ ಅನ್ಯಾಯಕ್ಕೆ ಒಳಗಾಗುತ್ತಿರುವ ಮಹಿಳೆಗೆ ತ್ವರಿತ ನ್ಯಾಯ , ಸುರಕ್ಷತೆಯನ್ನು ಒದಗಿಸುವಲ್ಲಿ ಮಹಿಳಾ ಕಾರ್ಯಕರ್ತೆಯರ ಜವಾಬ್ದಾರಿಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಎ ಐ ಸಿ ಸಿ ಹ್ಯೂಮನ್ ರೈಟ್ಸ್ ಮಹಿಳಾ ಘಟಕ ಪಕ್ಷದ ಮಹಿಳಾ ಘಟಕದ ಸಹೋದರಿಯರಿಗೆ ಮತ್ತು ಎಲ್ಲಾ ಮಹಿಳೆಯರಿಗೆ
ಎಐಸಿಸಿ ಹ್ಯೂಮನ್ ರೈಟ್ಸ್ ವಿಜಯಪುರ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎ ಐ ಸಿ ಸಿ ಹ್ಯೂಮನ್ ರೈಟ್ಸ್ ಮಹಿಳಾ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು . ಇದೇ ಸಂದರ್ಭದಲ್ಲಿ ಶಬ್ಬೀರ್ ಅಹ್ಮದ್ ಡಲಾಯತ ರಾಜ್ಯ ಕಾರ್ಯಕಾರಣಿಯ ಸದಸ್ಯರು ವಿಜಯಪುರ, ಬಾಗಲಕೋಟೆ, ಕಲ್ಬುರ್ಗಿ, ಬೆಳಗಾವಿ ಉಸ್ತುವಾರಿ ಅಧ್ಯಕ್ಷ ಮತ್ತು ಬಾಗಲಕೋಟ ಮಹಿಳಾ ಅಧ್ಯಕ್ಷರಾದ ಶಂಕ್ರಮ್ಮ ಬೆನ್ನೂರ್, ಚಾಂದ್ಬಿ ಆಲಮೇಲ, ಸರಸ್ವತಿ ಬಿರಾದಾರ್, ರೇಣುಕಾ ಕಪಾಡಿ, ನೀಲಮ್ಮ ಹಂಚಿನಾಳ ಮುಂತಾದವರು ಉಪಸ್ಥಿತಿ ಇದ್ದರು.
ವರದಿಗಾರರು:ಉಸ್ಮಾನ ಬಾಗವಾನ (ಬಳಗಾನೂರ)