
ಬಳ್ಳಾರಿ/ಕಂಪ್ಲಿ : ನಗರದಲ್ಲಿ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್‌ನ ಕಂಪ್ಲಿ ತಾಲೂಕು ಘಟಕ ಉದ್ಘಾಟನಾ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕಂಪ್ಲಿ ತಾಲೂಕು ಅಧ್ಯಕ್ಷ ಎ.ಎಸ್. ಯಲ್ಲಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ವಿಜೃಂಭಣೆಯಿಂದ ಜರುಗಿತು.
ನಗರದ ಸಂಗಾತ್ರಯ ಪಾಠಶಾಲೆಯಲ್ಲಿ ನಡೆದ ಈ ಸಮಾರಂಭವನ್ನು ರಾಜ್ಯಾಧ್ಯಕ್ಷ ರಾಜ್ ಗೋಪಾಲ್ ಮತ್ತು ಬಳ್ಳಾರಿ ಜಿಲ್ಲಾ ಅಧ್ಯಕ್ಷ ವೆಂಕಟೇಶ್ ಹಾಗೂ ಅತಿಥಿಗಳು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಿ ಭೀಮ್ ಆರ್ಮಿಯ ಮಹತ್ವ, ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕುರಿತು ಮಾತನಾಡಿದರು. ಭೀಮ್ ಆರ್ಮಿಯ ಈ ಹೊಸ ಘಟಕವು ತಾಲೂಕಿನಲ್ಲಿ ದಲಿತರು, ಹಿಂದುಳಿದ ವರ್ಗದ ಜನರ ಹಾಗೂ ಸಾಮಾಜಿಕ ಹಕ್ಕುಗಳಿಗಾಗಿ ಹೋರಾಟ ನಡೆಸಲಿದೆ ಎಂದರು.
ವಿವೇಕಾನಂದ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ ಎಂ ದಿವ್ಯಾ ಸಂವಿಧಾನದ ಪ್ರಸ್ತಾವನೆಯನ್ನು ಓದಿದ್ದು ಎಲ್ಲರ ಮೆಚ್ಚುಗೆ ಗಳಿಸಿತು.
ಇದೇ ಸಂದರ್ಭದಲ್ಲಿ, ಪ್ರಸ್ತುತ ಸಮಾಜದಲ್ಲಿರುವ ಅಸಮಾನತೆ ಮತ್ತು ದೌರ್ಜನ್ಯಗಳ ವಿರುದ್ಧ ಭೀಮ್ ಆರ್ಮಿಯ ಪ್ರಭಾವವನ್ನು ಹೆಚ್ಚಿಸುವ ಉದ್ದೇಶದೊಂದಿಗೆ, ಸಮಾನತೆಗಾಗಿ ಹೋರಾಟ ಮಾಡಬೇಕೆಂದು ನಾಯಕರು ಕರೆ ನೀಡಿದರು.
ಈ ಸಂದರ್ಭದಲ್ಲಿ ಭೀಮ್ ಆರ್ಮಿಯ ಪದಾಧಿಕಾರಿಗಳು ಹಾಗೂ ಕಂಪ್ಲಿಯ ಯುವ ಮುಖಂಡರಾದ ಅಕ್ಕಿ ಜಿಲಾನ್, ರಿಯಾಜ್, ಬಡಿಗೇರ ಜಿಲಾನ್, ಪಿಸಿ ಅಂಜಿನಪ್ಪ, ಧರ್ಮರಾಜ್, ಶೇಖರ್, ಚಲುವಾದಿ ಲಕ್ಷ್ಮಣ, ಮಲ್ಲಿಕಾರ್ಜುನ್, ರಾಮಸಾಗರದ ವೀರೇಶ, ಬಸವರಾಜ್, ವಕೀಲರಾದ ಮನೋಜ್ ಕುಮಾರ್ ದಾನಪ್ಪ , ಯಾಲ್ಪಿ ರೋಷನ್, ಭಾಗವಹಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಆರ್. ಸುಬಾನ್ ನಿರ್ವಹಿಸಿದರು.
ವರದಿ : ಜಿಲಾನ್ ಸಾಬ್ ಬಡಿಗೇರ್