ಬಳ್ಳಾರಿ/ ಕಂಪ್ಲಿ : ಸಿ.ಎಂ ಸಿದ್ದರಾಮಯ್ಯನವರು 16ನೇ ಬಾರಿಗೆ ದಾಖಲೆಯ ಬಜೆಟ್ ಮಂಡಿಸಿದ್ದಾರೆ. ಸರ್ವ ಸಮುದಾಯದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಮುನ್ನೋಟವನ್ನು ತೆರೆದಿಟ್ಟಿದ್ದಾರೆ. ರಾಜ್ಯದ ಎಲ್ಲಾ ವರ್ಗದ ಜನರ ಕಲ್ಯಾಣಕ್ಕಾಗಿ, ಏಳು ಕೋಟಿ ಕನ್ನಡಿಗರ ಭವಿಷ್ಯಕ್ಕಾಗಿ ಸಿದ್ದರಾಮಯ್ಯ ಅವರು ಉತ್ತಮ ಬಜೆಟ್ ಮಂಡಿಸಿದ್ದಾರೆ. ಹಲವಾರು ಜನಪ್ರಿಯ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ್ದಾರೆ. ಶಿಕ್ಷಣ, ಆರೋಗ್ಯ, ಸಾರಿಗೆ ಹಾಗೂ ಅನೇಕ ಕಲ್ಯಾಣಗಳಿಗೆ ಹೆಚ್ಚು ಒತ್ತು ಕೊಡುವ ಮೂಲಕ ಉತ್ತಮ ಬಜೆಟ್ ಕೊಟ್ಟಿದ್ದಾರೆ. ಎಲ್ಲಾ ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನ ಬಜೆಟ್ ಇದಾಗಿದ್ದು, ರಾಜ್ಯದ ಆರ್ಥಿಕ ಪರಿಸ್ಥಿತಿಯ ಉತ್ತಮ ಆಲೋಚನೆ ಸಹ ಇದಾಗಿದೆ. ಸರ್ವ ಜನಾಂಗದ ಬಜೆಟ್ ಆಗಿದೆ. ಹಲವು ಸಂಘಟನೆಗಳ ಹೋರಾಟಕ್ಕೂ ಬೆಲೆ ಕೊಟ್ಟು ಅನುದಾನ ನೀಡುವ ಮೂಲಕ ಎಲ್ಲರಿಗೂ ನೆರವು ಸಿಕ್ಕಿದಂತಾಗಿದೆ. ನಮ್ಮ ತಾಲೂಕಿಗೂ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಕಂಪ್ಲಿ ವಿಧಾನಸಭಾ ಕ್ಷೇತ್ರದ ಸಮಸ್ತ ನಾಗರಿಕರ ಪರವಾಗಿ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ, ಹಾಗೂ
ನಮ್ಮ ಕ್ಷೇತ್ರದ ಜನಪ್ರಿಯ ಶಾಸಕರಾದಂತ J. N. ಗಣೇಶ ರವರು 2025-26 ಸಾಲಿನ ಬಜೆಟ್ ನಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರಕ್ಕೆ ಕೌಶಲ್ಯ ಅಭಿವೃದ್ಧಿ ಇಲಾಖೆಯ “Government Tools Tring Center ” ಮಂಜೂರು ಮಾಡಿಸುವುದರ ಮುಖಾಂತರ ಜಿಲ್ಲೆಯಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಇರುವ ಪ್ರಯುಕ್ತ ಕ್ಷೇತ್ರದ ನಿರುದ್ಯೋಗಿ ಯುವಕರು ಸೂಕ್ತ ತರಬೇತಿಯನ್ನು ನೀಡಿ ಡಿಪ್ಲೊಮಾ ಪದವಿಯೊಂದಿಗೆ ಕೈಗಾರಿಕೆಗಳಲ್ಲಿ ಉದ್ಯೋಗವನ್ನು ಕೊಡಿಸುವಂತ ಮಹತ್ವದ ಯೋಜನೆಯನ್ನು ಹಾಗೂ 2025-26 ಸಾಲಿನ ಬಜೆಟ್ ನಲ್ಲಿ ಕಂಪ್ಲಿ 100 ಹಾಸಿಗೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಕುರುಗೋಡು 100 ಹಾಸಿಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳ ಕಾಮಗಾರಿಗೆ ರೂ. 44.00 ಕೋಟಿ ಅನುದಾನವನ್ನು ತರಲು ಶ್ರಮಿಸಿದ ಜನ ಮೆಚ್ಚಿದ ಶಾಸಕ J. N. ಗಣೇಶ
ರವರಿಗೂ ಕ್ಷೇತ್ರದ ಸಮಸ್ತ ನಾಗರಿಕರ ಪರವಾಗಿ ಹೃದಯಪೂರ್ವಕ ಕೃತಜ್ಞತೆಗಳು ಎಂದು B. ರಾಕೇಶ್, ಉಪಾಧ್ಯಕ್ಷರು, ಯುವ ಕಾಂಗ್ರೆಸ್ ಕಂಪ್ಲಿ ಬ್ಲಾಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಜಿಲಾನ್ ಸಾಬ್ ಬಡಿಗೇರ