ಬಳ್ಳಾರಿ/ ಕಂಪ್ಲಿ : ಸಮಾರಂಭವನ್ನು ಖ್ಯಾತ ಸಾಹಿತಿಗಳು ಮಾಜಿ ಸಚಿವರಾದ ಡಾ. ಬಿ. ಟಿ. ಲಲಿತಾ ನಾಯಕ್ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಬಿ. ಟಿ. ಲಲಿತಾ ನಾಯಕ್ ಕೊಳ್ಳೇಗಾಲದಲ್ಲಿ ಸಾಹಿತ್ಯ ಮಿತ್ರಕೂಟ ಸ್ಥಾಪನೆಯಾಗಿ ಐದಾರು ವರ್ಷ ಕಳೆದಿದ್ದು ಈ ಭಾಗದ ಜನಪದ ಸಾಹಿತ್ಯವನ್ನು ಅಭಿವೃದ್ಧಿಪಡಿಸಬೇಕೆಂಬ ಸದುದ್ದೇಶದಿಂದ ಸಾಹಿತಿಗಳ ಹಾಗೂ ಕಾದಂಬರಿಕಾರರ ಪುಸ್ತಕ ಬಿಡುಗಡೆ ಮಾಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದೆ, ಉದಯೋನ್ಮುಖ ಬರಹಗಾರರನ್ನು ಪರಿಚಯಿಸುವ ನಿಟ್ಟಿನಲ್ಲಿ ಮಿತ್ರಕೂಟ ಶ್ರಮಿಸುತ್ತಿದೆ. ಹಾಗೆಯೇ ಸಾಹಿತ್ಯ ಮಿತ್ರಕೂಟದ ಪ್ರತಿ ಮೂರು ವರ್ಷಗಳ ಒಮ್ಮೆ ರಾಜ್ಯಮಟ್ಟದ ಸ್ಪರ್ಧಾ ಕಾರ್ಯಕ್ರಮಗಳನ್ನು ಹಾಗೂ ಇಂಥಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಕಂಪ್ಲಿ ಪಟ್ಟಣದ ಸಾಹಿತಿ ಬಂಗಿ ದೊಡ್ಡ ಮಂಜುನಾಥ ಅವರ ‘ಅರಳು ಮಲ್ಲಿಗೆ’ ಕಾದಂಬರಿಗೆ ಪ್ರಥಮ ಸ್ಥಾನ 10 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ, ಚಿಕ್ಕಮಂಗಳೂರಿನ ಜಿಲ್ಲೆಯ ಕಾರ್ತಿಕಾದಿತ್ಯ ಅವರ ‘ಪ್ಯಾರಾಸೈಟ್’ ಕಾದಂಬರಿಗೆ ದ್ವಿತೀಯ ಸ್ಥಾನ 7 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ, ಬೆಂಗಳೂರಿನ ಬಿ.ಎಂ. ಗಿರಿರಾಜ್ ಅವರ ‘ಕಥೆಗೆ ಸಾವಿಲ್ಲ’ ಕಾದಂಬರಿಗೆ ತೃತೀಯ ಸ್ಥಾನ 5 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಾಹಿತ್ಯ ಮಿತ್ರಕೂಟದ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಡಿ. ದೊಡ್ಡಲಿಂಗೇಗೌಡ ಕಾರ್ಯದರ್ಶಿ ಸತೀಶ ಎಂ. ಬಂಗಿ ಸಣ್ಣ ಮಂಜುನಾಥ, ಬಂಗಿ ರತ್ನವರ್ಮಹೆಗಡೆ, ಬಂಗಿ ಅಣ್ಣಪ್ಪ ಸೇರಿದಂತೆ ಗಣ್ಯರು ಸಾಹಿತ್ಯ ಅಭಿಮಾನಿಗಳು ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.