ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ದ.ಸಂ.ಸ ಸಂಘಟನೆಯ ವತಿಯಿಂದದಲಿತ ಕಾಲೋನಿಯ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ಚರ್ಚೆ

ವಿಜಯನಗರ : ಇಂದು ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿಜಯನಗರ ಜಿಲ್ಲಾ ಸಂಚಾಲಕರಾದ ಎಸ್ ದುರುಗೇಶ್ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಪ್ರೊ. ಬಿ ಕೃಷ್ಣಪ್ಪ ರವರ ಸಂಘಟನೆ ವತಿಯಿಂದ ತಾಲೂಕಿನ ದಲಿತ ಕಾಲೋನಿಗಳ ವಿದ್ಯುತ್ ಸಮಸ್ಯೆ, ಚರಂಡಿ ವ್ಯವಸ್ಥೆ, ಪಿಟಿಸಿಎಲ್, ಕುಡಿವ ನೀರಿನ ವ್ಯವಸ್ಥೆ, ಅಂಬೇಡ್ಕರ್ ಭವನ ಮಂಜೂರು ಮಾಡುವುದು ಹಾಗೂ ನಿರ್ವಹಣೆಯ ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದ್ದಿರುವ ಭವನಗಳ ವಿಷಯದ ಬಗ್ಗೆ ಕುರಿತು, ಇನ್ನಿತರೆ ದಲಿತ ಕಾಲೋನಿಯ ಮೂಲಸೌಕರ್ಯಗಳ ಬಗ್ಗೆ ಗಂಭೀರವಾಗಿ ಚರ್ಚಿಸಲಾಯಿತು ಹಾಗೂ ನಮ್ಮ ಪದಾಧಿಕಾರಿಗಳು ತಮ್ಮ ತಮ್ಮ ಗ್ರಾಮದಲ್ಲಿ ಹಾಗೂ ಇತರೆ ಪಕ್ಕದ ಗ್ರಾಮಗಳ ದಲಿತ ಕಾಲೋನಿಯಲ್ಲಿ ಏನೇನು ಸಮಸ್ಯೆ ಇವೆ ಎಂದು ಪಟ್ಟಿ ಮಾಡಿಕೊಂಡು ಬರಬೇಕು ಈ ಸಮಸ್ಯೆಗಳನ್ನು ಒಟ್ಟುಗೂಡಿಸಿಕೊಂಡು ತಾಲೂಕು ಮಟ್ಟದ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆಗಳನ್ನು ಹೇಳಿಕೊಂಡು ನಂತರ ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಮತ್ತು, ಬೆಂಗಳೂರಿನ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಯುವ ಒಳ ಮೀಸಲಾತಿ ಹೋರಾಟದಲ್ಲಿ ಭಾಗವಹಿಸುವ ಕುರಿತು ಇನ್ನಿತರ ವಿಷಯ ಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರದ ಎಸ್ ದುರ್ಗೇಶ್ ಕೂಡ್ಲಿಗಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಕಂದಗಲ್ ಪರಶುರಾಮ್, ದುರುಗೇಶ್ ಬಿ ಟಿ ಗುದ್ದಿ, ನಾಗರಾಜು ಗುಡೆಕೋಟೆ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಎಚ್ ದುರ್ಗಪ್ಪ, ಖಾನಾಮಡಗು ಜಿಲ್ಲಾ ಖಜಾಂಚಿ ಕುಮಾರ್ ಮಾಕನಡುಕು, ತಾಲೂಕು ಸಂಘಟನಾ ಸಂಚಾಲಕರಾದ ಎನ್ ಫಕೀರಪ್ಪ ಕಾನಮಡಗು, ಮಹೇಶ ಕೂಡ್ಲಿಗಿ, ಮೂಗಪ್ಪ ಕೂಡ್ಲಿಗಿ, ಚೌಡೇಶ ಬಣವಿಕಲ್, ಜಿತೇಂದ್ರ ಐಗಳ ಮಲ್ಲಾಪುರ, ಮಹೇಶ,ಮಂಜುನಾಥ ಸಿಎಸ್ ಪುರ, ಮಾರೇಶ ತಿಪ್ಪೆಹಳ್ಳಿ, ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗರಾಜು, ಓಬಳೇಶ್ ಕೆ ಮ ಹಳ್ಳಿ, ರುದ್ರಮುನಿ ತಿಪ್ಪಳ್ಳಿ, ಮಂಜುನಾಥ ಮಾಳೆಹಳ್ಳಿ, ಬಸವರಾಜ್ ಅಮ್ಮನ ಕೆರೆ, ಚೌಡಪ್ಪ ಹಾಗೂ ನಿಂಬಳಗೆರೆ ಗ್ರಾಮ ಘಟಕದ ಸಂಚಾಲಕರಾದ ದಡ್ಡಿರಪ್ಪ ಹಾಗೂ ಗ್ರಾಮ ಪದಾಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ