ಮೈಸೂರು :ಧಾನ್ ಫೌಂಡೇಶನ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ “ನಮ್ಮ ಕಳಂಜಿಯಂ, ನಮ್ಮ ಹೆಮ್ಮೆ” ” ಕಳಂಜಿಯಂ ಜೊತೆಗೆ ಕೈಜೋಡಿಸೋಣ ಬಡತನ ನಿರ್ಮೂಲನೆ ಮಾಡೋಣ” ಎಂಬ ಧ್ಯೇಯ ವಾಕ್ಯ ಮತ್ತು ಘೋಷಣೆ ಯೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮಕ್ಕೆ ಅತಿಥಿಗಳಿಂದ ದೀಪ ಬೆಳಗಿಸಿ ಚಾಲನೆ ನೀಡುವುದರ ಮೂಲಕ ಮಾತನಾಡಿದ ಧಾನ್ ಫೌಂಡೇಶನ್ ನ ಪ್ರಾದೇಶಿಕ ಸಂಯೋಜಕರಾದ ಶಂಕರ್ ಪ್ರಸಾದ್ ರವರು ಕಳೆದ ಸತತ 30 ವರ್ಷಗಳಿಂದ ಮೈಸೂರು, ನಂಜನಗೂಡು, ಟಿ. ನರಸೀಪುರ, ಮಳವಳ್ಳಿ, ಕೊಳ್ಳೇಗಾಲ, ಪಿರಿಯಾಪಟ್ಟಣ, ಎಚ್ ಡಿ. ಕೋಟೆ.ಸರಗೂರು, ಹುಣಸೂರು ಸೇರಿದಂತೆ ಮೈಸೂರು ಪ್ರಾದೇಶಿಕ ಕ್ಷೇತ್ರದಲ್ಲಿ ಒಂಭತ್ತು ತಾಲ್ಲೂಕುಗಳ ಏಳು ಕಳಂಜಿಯಂ SHG ಫೆಡರೇಷನ್ ರಚಿಸಿ ಒಕ್ಕೂಟಗಳ ಅಡಿಯಲ್ಲಿ 2200 SHG ಗಳಿದ್ದು ಸುಮಾರು 30,000 ಸದ್ಯಸರು ಗಳೊಂದಿಗೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಈ ದಿನ ದಿನಾಂಕ 8.3.2025 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು “ಎಲ್ಲಾ ಮಹಿಳೆಯರು ಮತ್ತು ಬಾಲಕಿಯರಿಗಾಗಿ : ಹಕ್ಕುಗಳು, ಸಮಾನತೆ, ಸಬಲೀಕರಣ “ಎಂಬ ಶೀರ್ಷಿಕೆಯೊಂದಿಗೆ ಕಾರ್ಯಕ್ರಮ ಆಯೋಜಿಸಿ ಮಹಿಳೆಯರಿಗಾಗಿ
ಅರ್ಪಿಸಲಾಗಿದೆ ಹಾಗೂ ಇತ್ತಿಚಿನ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗುವಂತದಾಗ ಮಾತ್ರ ಮಹಿಳಾ ದಿನಾಚರಣೆಗೆ ಆರ್ಥಪೂರ್ಣ ಕಲ್ಪಿಸಿದಂತೆ ಎಂದು ತಿಳಿಸಿದರು.
ವೇದಿಕೆ ಮೇಲೆ ಅತಿಥಿಗಳಾಗಿ ಬಂದಿದ್ದ ಶ್ರೀ ಮತಿ ಮಿಲನ ಭರತ್ ರವರು ಮಾತಾಡಿ ಹೆಣ್ಣು ಎಂದರೆ ಯಾರು? ತನ್ನ ಆಸ್ತಿತ್ವ ಏನು?, ಶಿಕ್ಷಣದ ಮಹತ್ವ! ಆತ್ಮ ಶಕ್ತಿ!, ನಾವು ಸಬಲೀಕರಣ ಹೊಂದಿದ್ದೇವೆ ಆದರೆ ನಮಗೆ ಅವಕಾಶಗಳು ಸಿಗುತ್ತಿಲ್ಲ. ನಾವು ಹುಟ್ಟುವ ಕುಟುಂಬದಿಂದ ನಾವು ಬೆಳೆಯುವ ಸಮಾಜ ನಾವು ಜೀವನ ಸಾಗಿಸುವಾಗ ನಮ್ಮ ಜೊತೆ ಬರುವ ಸಮುದಾಯ ಎಲ್ಲರಿಂದಲೂ ನಮ್ಮನ್ನು ಬಂಧಿಸಲ್ಪಟ್ಟಿದೆ ಇವುಗಳಿಂದ ಮುಕ್ತಿ ದೊರಕಿದಾಗ ಮಾತ್ರ ಇಂತಹ ಕಾರ್ಯಕ್ರಮ ಹೆಣ್ಣುಮಕ್ಕಳ ಪಾಲಿಗೆ ಸಾರ್ಥಕತೆಯನ್ನು ತಂದುಕೊಡುತ್ತದೆ ಎಂಬುದು ನನ್ನ ಭಾವನೆ ಎಂದು ತಿಳಿಸಿದರು.
ಶ್ರೀ ಮತಿ ಸರಿತಾ ರವರು ಮಾತನಾಡಿ ಹೆಣ್ಣು ಮಕ್ಕಳು ಸ್ವತಂತ್ರವಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳುವಒತಾಗಬೇಕು, ಕೌಶಲ್ಯ ಉದ್ಯೋಗ ಕ್ಷೇತ್ರದಲ್ಲಿ ತರಬೇತಿ ಪಡೆದು ಪರಾವಲಂಭನೆ ಬಿಟ್ಟು ಸಮಾಜದಲ್ಲಿ ಇತರರಿಗೆ ಮಾದರಿಯಾಗಿರಬೇಕು ಆರ್ಥಿಕವಾಗಿ ಸಬಲೀಕರಣಗೊಳ್ಳಲು ಸಾಧ್ಯವಾಗುತದೆ ಎಂದು ತಿಳಿಸಿದರು. ಹಾಗೂ ವೇದಿಕೆ ಮೇಲಿದ್ದ ಎಲ್ಲಾ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃಷಿ, ಉದ್ಯಮಶೀಲತೆ, ನಾಯಕತ್ವ ಹಾಗೂ ಅವರ ಜೀವನದ ಅನುಭವಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಮತಿ ವಸಂತ ಕುಮಾರಿ ಅಧ್ಯಕ್ಷರು WISE ಮೈಸೂರು,
ಶ್ರೀ ಮತಿ ಮಿಲನ ಭರತ್ ಸಹಾಯಕ ನಿರ್ದೇಶಕರು ಮೀನುಗರಿಕೆ ಇಲಾಖೆ ಕೊಡಗು, ಶ್ರೀ ಮತಿ ಪ್ರಮೀಳಾ,
ಶ್ರೀ ಮತಿ ಸರಿತಾ ನಿರ್ದೇಶಕರು RUDSET ಸಂಸ್ಥೆ ಮೈಸೂರು ಹಾಗೂ ಇತರರು ಭಾಗವಹಿಸಿದ್ದರು.
- ಕರುನಾಡ ಕಂದ