ಬಳ್ಳಾರಿ/ ಕಂಪ್ಲಿ : ಇಲ್ಲಿಯ ಸಂಜೀವಿನಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಆವರಣದಲ್ಲಿ ಬಸವಶ್ರೀ ಸೇವಾ ಸಂಸ್ಥೆ ಗಂಗಾವತಿ ರೋಟರಿ ಕ್ಲಬ್ ಸಹಯೋಗದಲ್ಲಿ ಉಚಿತ ‘ಫುಟ್ ಪಲ್ಸ್ ಥೆರಪಿ ‘ ಆರಂಭಗೊಂಡಿತು. ಬಸವ ಶ್ರೀ ಸೇವಾ ಸಂಸ್ಥೆ ಅಧ್ಯಕ್ಷ ಡಾಕ್ಟರ್ ವೆಂಕಟೇಶ್ ಸಿ ಭರಮಕ್ಕನವರ್ ಶಿಬಿರಕ್ಕೆ ಚಾಲನೆ ನೀಡಿ ಆಧುನಿಕ ಜಗತ್ತಿನ ಜೀವನ ಶೈಲಿಯಿಂದಾಗಿ ಮನುಷ್ಯ ಇಂದು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾನೆ. ಅದಕ್ಕಾಗಿ ‘ ಫುಟ್ ಪಲ್ಸ್ ಥೆರಪಿ ‘ ಸ್ವದೇಶಿ ಸಂಶೋಧಿತ ವೈದ್ಯಕೀಯ ಆವಿಷ್ಕಾರ ಪ್ರಧಾನಿ ಮೋದಿಜೀ ಅವರ ಮಹತ್ವಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾ ಕೊಡುಗೆಯಾಗಿದೆ ಎಂದರು. ಮಧುಮೇಹ, ಅಧಿಕ ರಕ್ತದೊತ್ತಡ, ಸ್ನಾಯು ಸೆಳೆತ, ಥೈರಾಯ್ಡ್, ಬೆನ್ನು ನೋವು, ಸಂಧಿವಾತ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಪ್ರಸ್ತುತ ಥೆರಪಿ ರಾಮಬಾಣವಾಗಿದೆ. ಮಾರ್ಚ್ 19 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಬಳ್ಳಾರಿ ರಸ್ತೆ ವಾಲ್ಮೀಕಿ ವೃತ್ತದಲ್ಲಿರುವ ಕಂಪ್ಲಿಯಲ್ಲಿ ಉಚಿತ ಶಿಬಿರ ನಡೆಯಲಿದ್ದು ಸಾರ್ವಜನಿಕರು ಈ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ವಾಲಿ ಕೊಟ್ರಪ್ಪ, ಪಿ. ನಾಗೇಶ್ವರಾವ್, ಟಿ. ಆಂಜನೇಯ, ವಾಗೀಶ್ ಪಂಡಿತರಾಧ್ಯ , ವಾಸು ಕೊಳಗದ, ಡಿ. ಆರ್. ಮಂಜುನಾಥ , ಆಕಾಶ್, ಬಸವರಾಜ, ನಾಗರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.