ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಪೊಲೀಸ್ ಠಾಣೆ ಆವರಣದಲ್ಲಿ, ಹೋಳಿ ಹಾಗೂ ರಮಜಾನ್ ಹಬ್ಬದ ಪ್ರಯುಕ್ತ ಸಿ.ಪಿ.ಐ ಸಂಜು ಬಳಗಾರ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಶಾಂತಿಪಾಲನಾ ಸಭೆಯನ್ನು ಜರುಗಿತು.
ಈ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದ ಸಿಪಿಐ ಸಂಜು ಬಳಗಾರ್ ಈಗ ಪಿಯುಸಿ ಪರೀಕ್ಷೆಯ ಸಮಯ ಇರುವುದರಿಂದ ಮಕ್ಕಳಿಗೆ ಹಾಗೂ ಅವರ ಪಾಲಕರಿಗೆ ಬಣ್ಣಗಳ ಹಾಕದಂತೆ ನೋಡಿಕೊಳ್ಳಬೇಕು ಹಾಗೂ ಬೇಸಿಗೆ ಕಾಲ ಇರುವುದರಿಂದ ಕುಡಿಯುವ ನೀರು ಹಾಳು ಮಾಡದೆ ಹಿಂದೂ ಸಂಪ್ರದಾಯದ ಪ್ರಕಾರ ಯಾವ ರೀತಿ ಹೋಳಿ ಹಬ್ಬ ಆಚರಣೆ ಇದೆಯೋ ಅದೇ ಪ್ರಕಾರ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಿ ಹಾಗೂ ವಿಷಕಾರಿ ಬಣ್ಣಗಳನ್ನು ಬಳಸದೆ ಹಬ್ಬವನ್ನು ಆಚರಿಸಿ , ಇದೇ ರೀತಿ ಮುಸ್ಲಿಂ ಬಾಂಧವರ ರಂಜಾನ್ ತಿಂಗಳ ಫೆಬ್ರವರಿ 28 ರಿಂದ ಮಾರ್ಚ್ 30 ರವರೆಗೆ ಇರುವುದರಿಂದ ಮುಸ್ಲಿಂ ಬಾಂಧವರು ಕೂಡಾ ಆಚರಣೆ ಮಾಡುತ್ತಿರುತ್ತಾರೆ ಅವರಿಗೆ ಕೂಡಾ ಯಾವುದೇ ರೀತಿ ತೊಂದರೆಯಾಗದಂತೆ ನಾವು ಹಬ್ಬವನ್ನು ಖುಷಿಯಿಂದ ಇಬ್ಬರೂ ಸಮನ್ವಯದಿಂದ ಎರಡೂ ಹಬ್ಬಗಳನ್ನು ಆಚರಣೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರದ ಪೊಲೀಸ್ ಠಾಣಾಧಿಕಾರಿ ಶಾಂತಾ ಹಳ್ಳಿ , ಮಂಗಳವಾರ ಪೇಟೆ ದೈವ ಮಂಡಳಿಯ ಹಿರಿಯರಾದ ಶ್ರೀಶೈಲ್ ದಬಾಡಿ , ಸೋಮವಾರ ಪೇಟೆ ದೈವ ಮಂಡಳಿಯ ಹಿರಿಯರಾದ ಹಾಗೂ ಪತ್ರಕರ್ತ ಮಲ್ಲು ತುಂಗಳ ನಗರದ ಅಂಜುಮನ್ ಇಸ್ಲಾಂ ಸಂಸ್ಥೆಯ ಹಿರಿಯರಾದ ಬುಡನ್ ಜಮಾದಾರ್ ಹೊಸೂರ್ ಅಂಜುಮನ್ ಸಂಸ್ಥೆಯ ಹಿರಿಯರಾದ ಅಯ್ಯುಬ ಖಾನ್ ಹೊರಟ್ಟಿ, ನಗರದ ವೈದ್ಯ ಹಾಗೂ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಡಾಕ್ಟರ್ ಅಕ್ಬರ್ ತಾಂಬೋಳಿ, ರಾಂಪುರ್ ನಗರದ ಹಿರಿಯರಾದ ಸಿಂಗನ್ ಇನ್ನೂ ಅನೇಕ ಹಿಂದೂ ಹಾಗೂ ಮುಸ್ಲಿಂ ಮುಖಂಡರುಗಳು ಭಾಗಿಯಾಗಿದ್ದರು.
ವರದಿ : ಮಹಿಬೂಬ್ ಎಂ. ಬಾರಿಗಡ್ಡಿ