ಬಳ್ಳಾರಿ/ ಕಂಪ್ಲಿ : ಕಂಪ್ಲಿ ಸೇರಿದಂತೆ ರಾಜ್ಯಾದ್ಯಂತ ಗೃಹ ರಕ್ಷಕದಳವು ಸ್ವಯಂ ಸೇವಾ ಕಾರ್ಯದೊಂದಿಗೆ ಜನರ ಸೇವೆ ಮಾಡಿಕೊಂಡು ಬರಲಾಗಿದೆ. ಗೃಹ ರಕ್ಷಕದಳದವರು ನಿಷ್ಠೆ, ಪ್ರಾಮಾಣಿಕತೆಯಿಂದ ಸಕ್ರಿಯವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದು ಕರ್ನಾಟಕ ಗೃಹ ರಕ್ಷಕದಳದ ಬಳ್ಳಾರಿ ಜಿಲ್ಲಾ ಸಮಾದೀಷ್ಟರಾದ ವೈ.ಶೇಖ್ ಸಾಬ್ ಹೇಳಿದರು.
ಸ್ಥಳೀಯ ಸರ್ಕಾರಿ ಷಾಮಿಯಾಚಂದ್ ಕಾಲೇಜು ಆವರಣದ ಹಿಂಬದಿಯಲ್ಲಿರುವ ಗೃಹ ರಕ್ಷಕದಳದ ಕಛೇರಿಯಲ್ಲಿ ಇತ್ತೀಚೆಗೆ ಗೃಹ ರಕ್ಷಕದಳದ ಕೆ.ಉತ್ತಣ್ಣ ನಿಧನ ಹೊಂದಿದ ಹಿನ್ನಲೆ ಕರ್ನಾಟಕ ಗೃಹ ರಕ್ಷಕದಳದಿಂದ 74,800 ರೂ.ನಗದು ಸಹಾಯಧನವನ್ನು ಅವರ ಪತ್ನಿ ಪಾರ್ವತಿ ಇವರಿಗೆ ವಿತರಿಸಿದ ನಂತರ ಮಾತನಾಡಿ, ಕೆ.ಉತ್ತಣ್ಣ ಇವರು 30 ವರ್ಷ ಗೃಹ ರಕ್ಷಕದಳದಲ್ಲಿ ಕರ್ತವ್ಯದೊಂದಿಗೆ ಸೇವೆ ಸಲ್ಲಿಸಿದ್ದು ಅವಿಸ್ಮರಣೀಯವಾಗಿದೆ. ಈ ಸಹಾಯಧನವನ್ನು ಜೀವನಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು. ಕರ್ತವ್ಯದಲ್ಲಿ ನಿಧನ ಹೊಂದಿದರೆ, ಅಂತವರ ಕುಟುಂಬಗಳಿಗೆ ಸರ್ಕಾರ 10 ಸಾವಿರ ಸಹಾಯಧನ ನೀಡಲು ಮುಂದಾಗಿದೆ ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ಘಟಕಾಧಿಕಾರಿ ಬಿ.ಬಸಲಿಂಗಪ್ಪ, ಸಂಡೂರು ಘಟಕಾಧಿಕಾರಿ ಮಲ್ಲಿಕಾರ್ಜುನ, ಕಂಪ್ಲಿ ಘಟಕಾಧಿಕಾರಿ ಹೆಚ್.ಗಿರಿಧರ್, ಸಿಕೆಎಂಎಸ್ ಹೊನ್ನೂರವಲಿಸಾಬ್, ಸೆಕ್ಷನ್ ಲೀಡರ್‌ಗಳಾದ ಕೆ.ಜಗದೀಶ, ಕೆ.ಸುರೇಶ, ಸಹಾಯಕ ಸೆಕ್ಷನ್ ಲೀಡರ್‌ಗಳಾದ ಎ.ನಾರಾಯಣ ಹಾಗೂ ಗೃಹ ರಕ್ಷಕದಳದವರು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.