
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ
ಬಂಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರೌಢ ವಿಭಾಗ) ನಲ್ಲಿ ಸರಸ್ವತಿ ಪೂಜಾ ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಜರುಗಿತು.
ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರೌಢ) ವಿಭಾಗದಲ್ಲಿ, ಸರಸ್ವತಿ ಪೂಜಾ ಸಮಾರಂಭದ ಜೊತೆಗೆ
ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು,
ಕಾರ್ಯಕ್ರಮದ ಉದ್ಘಾಟಕರಾಗಿ ಡಾ. ಮಹಾಂತೇಶ ನೆಲಾಗಣಿ ಯವರು ಸಸಿಗಳಿಗೆ ನೀರುಣಿಸುವ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಉಪ ಪ್ರಾಂಶುಪಾಲರಾದ ಸಂಗನಗೌಡ ಪಾಟೀಲ್ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ, ಶರಣಪ್ಪ ಸೂಡಿ, ರಹೀಮಾ ಬೇಗಂ, ಮಹೇಶ್ ಹಡಪದ, ಮೆಹಬೂಬ್ ಸಾಬ್, ಡಾ.ಮೈಲಾರಪ್ಪ ಬಿಲ್ಕಾರ್, ಶಾಂತಾ ಮೇಡಂ, ಕಮಲಾ ಬಡಿಗೇರ ಮೇಡಂ, ಅನುರಾಧಾ ಮೇಡಂ, ಶರಣಪ್ಪ ಬಡಿಗೇರ, ಕಾಶಿನಾಥ್, ಮಲ್ಲಮ್ಮ ಮೇಡಂ ಮತ್ತು ಇನ್ನುಳಿದ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳ
ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಆರಂಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ನಂತರದಲ್ಲಿ ಶಿಕ್ಷಕರಾದ ರಾಜು ನೆಲ್ಲೂರು ಅವರು ಸರ್ವರನ್ನೂ ಸ್ವಾಗತಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಶಿವಯೋಗಪ್ಪ ರೇವಡ ಕುಂದಿ ಯವರು, ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಕುರಿತು ಮೆಚ್ಚುಗೆ ಸೂಚಿಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಾ. ಮಹಾಂತೇಶ ನೆಲಾಗಣಿಯವರು, ಅಶಿಕ್ಷಿತಳಾದ ಸಾಲುಮರದ ತಿಮ್ಮಕ್ಕ, ಸಾವಿರಾರು ಗಿಡ, ಮರಗಳನ್ನು ನೆಟ್ಟು ಸಮಾಜಕ್ಕೆ ಮಾದರಿಯಾಗಿದ್ದಾರೆ, ಅದರಲ್ಲಿ
380 ಆಲದ ಮರಗಳಿದ್ದವು, ಕಿಲೋಮೀಟರ್ ಗಟ್ಟಲೆ ದೂರದಿಂದ ನೀರು ಹೊತ್ತು, ಗಿಡಗಳಿಗೆ ಹಾಕಿದ್ದಾರೆ. ಆ ಮರಗಳು ಅಸಂಖ್ಯಾತ ಜನರಿಗೆ
ನೆರಳು ನೀಡಿದ್ದರಿಂದ , ಗಿಡ ನೆಟ್ಟವರ ಆನಂದ ದ್ವಿಗುಣ ಗೊಳ್ಳುತ್ತದೆ,ಎಲ್ಲಾ ವಿದ್ಯಾರ್ಥಿಗಳು , ಪಠ್ಯದ ಜೊತೆಗೆ ಸಮಾಜಕ್ಕೆ ಉಪಯೋಗವಾಗುವ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಅಲ್ಲದೆ 40ವರ್ಷಗಳ ಇತಿಹಾಸವಿರುವ, ಈ ಶಾಲೆಯಲ್ಲಿ ಕಲಿತವರು, ಶಿಕ್ಷಕರಾಗಿ, ವೈದ್ಯರಾಗಿ, ಇಂಜಿನಿಯರ್
ರಾಗಿ, ವಕೀಲರಾಗಿ, ಉತ್ತಮ ರಾಜಕಾರಣಿಗಳಾಗಿ, ಉದ್ಯಮಿಗಳಾಗಿ ಹೊರಹೊಮ್ಮಿ, ಶಾಲೆಯ ಕೀರ್ತಿಯನ್ನು ನಾಡಿನುದ್ದಗಲಕ್ಕೂ ಹಬ್ಬಿಸಿದ್ದು ಹೆಮ್ಮೆಯ ವಿಷಯ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಇಳಕಲ್ ನ ಅಕ್ಕಿ ಕಾಲೇಜಿನ ಉಪನ್ಯಾಸಕರು, ಬಂಡಿಯ ಈ ಶಾಲೆಯ ಹಳೆಯ ವಿದ್ಯಾರ್ಥಿಯೂ ಆದ ಶರಣಪ್ಪ ಸೂಡಿ ಯವರು, ವಿದ್ಯಾರ್ಥಿಗಳನ್ನು ಉದ್ದೇಶಿಸಿ , ಪ್ರತಿ ವರ್ಷ ಅತಿ ಹೆಚ್ಚು ಅಂಕ ಗಳಿಸಿ , ಶಾಲೆಗೆ, ಊರಿಗೆ, ಕೀರ್ತಿ ತರುವ ಕೆಲಸ ಮಾಡಬೇಕೆಂದು, ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು, ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 2 ಸಾವಿರ ರೂಪಾಯಿಗಳನ್ನು ಸ್ವತಹ ತಾವೇ ನೀಡುತ್ತಾ ಬಂದಿರುವುದು, ನಿಮಗೆಲ್ಲಾ ಗೊತ್ತಿರುವ ವಿಷಯವಾಗಿದೆ ಎಂದರು.
ಶಾಲೆಯ ಅತಿಥಿ ಶಿಕ್ಷಕ ಮರಿಯಪ್ಪ ಅವರು, ವಿದ್ಯಾರ್ಥಿ ಗಳು ಪರೀಕ್ಷೆ ಯಲ್ಲಿ ಹೆಚ್ಚು ಅಂಕ ಗಳಿಸುವ ಕಡೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಈ ಶಾಲೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಹೀಮಾಬೇಗಂ ಹಕೀಂ ಅವರು 25 ಸಾವಿರ ರೂಪಾಯಿ, ಸ್ಥಿರ ಠೇವಣಿ (fix deposit) ಇಟ್ಟಿದ್ದು ಅದರಿಂದ ಬಂದ ಬಡ್ಡಿ ಹಣವನ್ನು, ಪ್ರತಿ ಪ್ರತಿ ವರ್ಷ ,ಪ್ರಥಮ, ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಯಾದ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದ್ದಾರೆ,
ನಂತರ ಕೆಲವು ವಿದ್ಯಾರ್ಥಿಗಳು ತಮ್ಮ ಗುರುಗಳ ಬಗ್ಗೆ, ಚುಟುಕು,ಕವನ ಹೇಳುವ ಮೂಲಕ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ನಡುವೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ,ಡಾ. ಮಹಾಂತೇಶ ನೆಲಾಗಣಿ, ಶರಣಪ್ಪ ಸೂಡಿ, ರಹೀಮಾ ಬೇಗಂ, ಮಲ್ಲಮ್ಮ ಮತ್ತು ಮರಿಯಪ್ಪ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉಪ ಪ್ರಾಂಶುಪಾಲರಾದ ಸಂಗನಗೌಡ ಪಾಟೀಲರು ,
ಈ ಶಾಲೆಯಲ್ಲಿ ಕಲಿತು ಉತ್ತಮ ನಾಗರಿಕರಾಗಿ, ಜೀವನ ಸಾಗಿಸುತ್ತಿರುವುದಕ್ಕೆ
ಹೆಮ್ಮೆ ಎನಿಸುತ್ತದೆ, ನೀವೆಲ್ಲರೂ ಅವರಂತೆ ಆಗಲೆಂದು ಹಾರೈಸುವೆ ಎಂದರು.
ಶರಣಬಸವ ಕೊಳ್ಳಿ, ಕನ್ನಡ ಪಂಡಿತರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
- ಕರುನಾಡ ಕಂದ