ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೆಣಸಗೇರಾ ಗ್ರಾಮದ ಮಾನಸ ಗಂಗೋತ್ರಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ 2024 – 2025 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುತ ಯಮನೂರ ಯ. ತಳವಾರ ಇವರ ಅನುಪಸ್ಥಿತಿಯಲ್ಲಿ, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗ್ರಾಮ ದೇವತೆಯ ಆರ್ಚಕರಾದ ಶ್ರೀ ಶಂಕ್ರಪ್ಪ ಬಡಿಗೇರ ವಹಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಮತಿ ದುರುಗಮ್ಮ ಹು. ಹರಿಜನ ಗ್ರಾಮ ಪಂಚಾಯತಿ ಅಧ್ಯಕ್ಷರು ಕ್ಯಾದಿಗುಪ್ಪ, ಗ್ರಾಮದ ದಳಪತಿಯವರಾದ ಶ್ರೀ ಗೋವಿಂದ ಗೌಡ ಮಾಲಿಪಾಟೀಲ, ಶ್ರೀ ಸಣ್ಣ ದೊಡ್ಡನಗೌಡ ಮಾಲಿಪಾಟೀಲ ಗ್ರಾಮ ಪಂಚಾಯತಿ ಸದಸ್ಯರು,
ಶ್ರೀ ರಮೇಶ ಆಡಿನ್ ಎಸ್.ಡಿ.ಎಮ್.ಸಿ ಅಧ್ಯಕ್ಷರು ಮೆಣಸಗೇರಾ, ಶ್ರೀ ಮರಿಯಪ್ಪ ಹ. ಕಲಾದಗಿ ಎಸ್.ಡಿ.ಎಮ್.ಸಿ ಉಪಾಧ್ಯಕ್ಷರು ಮೆಣಸಗೇರಾ,
ಶಾಲೆಯ ಕಾರ್ಯದರ್ಶಿಗಳಾದ ರಾಮಕೃಷ್ಣ ಮ.ಕಾಲವಾಡ, ಶ್ರೀ ದೊಡ್ಡ ದೊಡ್ಡನಗೌಡ ಮಾಲಿಪಾಟೀಲ, ಎಮ್.ಎಸ್.ಪಾಟೀಲರು ವೇದಿಕೆ ಅಲಂಕರಿಸಿದ್ದರು.
ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮಕ್ಕೆ ಅತಿಥಿಗಳು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮುದ್ದು ವಿದ್ಯಾರ್ಥಿಗಳಿಗೆ ಅತಿಥಿಗಳು ಪ್ರಶಸ್ತಿ ಪತ್ರ, ಪದಕ ವಿತರಿಸಿ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಗ್ರಾಮದ ಸಮಸ್ತ ನಾಗರಿಕರು ,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪಾಲಕರು ಪೋಷಕರು ಭಾಗವಹಿಸುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸನ್ಮಾನಿತರು :
ಶ್ರೀ ಮತಿ ದುರುಗಮ್ಮ ಹು. ಹರಿಜನ ಗ್ರಾಮ ಪಂಚಾಯತಿ ಅಧ್ಯಕ್ಷರು ಕ್ಯಾದಿಗುಪ್ಪ,
ಶ್ರೀ ಮತಿ ಶರಣಮ್ಮ ಮ.ಬೈಲಗುಡ್ಡ ಅಂಗನವಾಡಿ ಶಾಲಾ ಶಿಕ್ಷಕಿ,
ಶ್ರೀ ಮತಿ ಲಲಿತಾಬಾಯಿ ಚವ್ಹಾಣ ಅಂಗನವಾಡಿ ಶಾಲಾ ಶಿಕ್ಷಕಿ,
ಶ್ರೀ ಮತಿ ಭುವನೇಶ್ವರಿ ಬಸವರಾಜ ಬಳಿಗಾರ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಕ್ಯಾದಿಗುಪ್ಪ,
ಶ್ರೀ ಮತಿ ಸುಮಂಗಲಾ ಜೀಗೇರಿ ಅಂಗನವಾಡಿ ಶಾಲಾ ಶಿಕ್ಷಕಿ.
- ಕರುನಾಡ ಕಂದ