ಕೊಪ್ಪಳ : ದಿ.09/03/2025 ರಂದು ಜಿಲ್ಲಾ ಪೊಲೀಸ್ ಕೊಪ್ಪಳ, ನಮ್ಮ ಪೊಲೀಸ್ ನಮ್ಮ ಹೆಮ್ಮೆ, ಡ್ರಗ್ಸ್ ಫ್ರೀ ಕೊಪ್ಪಳ ಹಾಗೂ ಫಿಟ್ನೆಸ್ ಫಾರ್ ಆಲ್ ಎಂಬ ಬ್ಯಾನರ್ ನಡಿ ನಡೆದ 10 ಕಿ.ಮೀ ಮ್ಯಾರಾಥಾನ್ ಓಟದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿನಿಯರಾದ ಕು.ಸರಿತಾ ಇವರು ಪ್ರಥಮ ಸ್ಥಾನವನ್ನು ಹಾಗೂ ಕು.ಯಶೋಧ ಇವರು ನಾಲ್ಕನೇ ಸ್ಥಾನವನ್ನು ಗಳಿಸಿರುತ್ತಾರೆ ಸದರಿ ವಿಜೇತ ಕ್ರೀಡಾಪಟುಗಳಿಗೆ ಪೊಲೀಸ್ ಇಲಾಖೆಯಿಂದ ಪದಕ ಹಾಗೂ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಸದರಿ ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಕೆ ಲಮಾಣಿ, ಕಾಲೇಜಿನ ದೈಹಿಕ ಶಿಕ್ಷಣ ಬೋಧಕರಾದ ಡಾ. ಪ್ರದೀಪ್ ಕುಮಾರ್ ಯು, ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು, ಅತಿಥಿ ಉಪನ್ಯಾಸಕರುಗಳು ವಿದ್ಯಾರ್ಥಿನಿಯರಿಗೆ ಶುಭಕೋರಿರುತ್ತಾರೆ.
- ಕರುನಾಡ ಕಂದ