ಮದುವೆಯೇನೋ ಆಯಿತು
ಸಹಜ ಅಲ್ಲವೇ ಮಕ್ಕಳ ಬಯಕೆ,
ಹೊತ್ತಳು ಈ ತಾಯಿ
ದೇವರಿಗೆ ಹರಕೆ,
ದೇವರಿಗೆ ಕೇಳಿಯೇ ಇಲ್ಲ,
ಮಕ್ಕಳಿಲ್ಲ ಎಂಬ ಕೊರಗು
ಈಕೆಗಿಲ್ಲ,
ನಾಡಿನ ತುಂಬೆಲ್ಲಾ ನೀ
ಬೆಳೆಸಿದ ಸಸಿಗಳು,
ಇಂದಾಗಿವೆ ಅವೇ ಹೆಮ್ಮರಗಳು,
ಇಲ್ಲವೆಂದರೆ ಈಕೆಗೆ ಮಕ್ಕಳು,
ನಂಬುವುದಿಲ್ಲ ನಾಡಿನ ಮಕ್ಕಳು,
ಒಂದಲ್ಲ, ಎರಡಲ್ಲಾ, ನೂರಾರೂ ಅಲ್ಲ, ಸಹಸ್ರಾರು ಮರಗಳು,
ಮರಗಳೇ ಈ ತಾಯಿಯ ಮಕ್ಕಳು ಇವಳಲ್ಲವೇ
ಮಹಾತಾಯಿ ತಿಮ್ಮಕ್ಕ,
ಪ್ರಸಿಧ್ಧಿ ಪಡೆದಿರುವಳಲ್ಲ,
ಸಾಲುಮರದ ತಿಮ್ಮಕ್ಕಳೆಂದು,
ಸಸ್ಯ ಕೋಟಿಯ ಈ ತಾಯಿಗೆ, ಕೋಟಿ ಕೋಟಿ ನಮನ.!…
- ಶಿವಪ್ರಸಾದ್ ಹಾದಿಮನಿ, ಕನ್ನಡ ಉಪನ್ಯಾಸಕರು.
ಸ.ಪ್ರ.ದ. ಮಹಿಳಾ ಕಾಲೇಜು,
ಕೊಪ್ಪಳ. ೫೮೩೨೩೧.
ಮೊ. ೭೯೯೬೭೯೦೧೮೯.