ಬೀದರ: ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಬಲಗೈ ಪಂಗಡಗಳ ಒಕ್ಕೂಟ ಬೀದರ ಜಿಲ್ಲೆ ವತಿಯಿಂದ ಇಂದು ಪೂರ್ವಬಾವಿ ಸಭೆ ಮಾಡಲಾಯಿತು. ಈ ಸಭೆಯ ಅಧ್ಯಕ್ಷ ಸ್ಥಾನವನ್ನು ದಲಿತ ಸಮುದಾಯದ ಹಿರಿಯ ಮುಖಂಡರಾದ ಶಂಕರರಾವ ದೊಡ್ಡಿಯವರ ಅಧ್ಯಕ್ಷತೆಯಲ್ಲಿ ಒಳಮೀಸಲಾತಿ ಗೊಂದಲ ಕುರಿತು ಸುದೀರ್ಘವಾಗಿ ಚರ್ಚೆ ಮಾಡಲಾಯಿತು. ಈ ಕುರಿತು ಈಗಾಗಲೆ ನಮ್ಮ ರಾಜ್ಯ ಮುಖಂಡರುಗಳು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ರವರಿಗೆ ಭೇಟಿ ಮಾಡಿ ಚರ್ಚಿಸಿ ಬೆಂಗಳೂರಿನಲ್ಲಿ ದಿ: 23.03.2025 ರಂದು ವಸಂತ ನಗರ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅಯೋಗದ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ರವರನ್ನು ಭೇಟಿ ಮಾಡಿ ಆಕ್ಷೇಪಣೆ ಸಲ್ಲಿಸಲು ಬೀದರ ಜಿಲ್ಲೆಯಿಂದ 200 ಕ್ಕೂ ಹೆಚ್ಚು ಜನ ಹೋಗುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಬಲಗೈ ಪಂಗಡಗಳ ಒಕ್ಕೂಟ ಬೀದರ ಜಿಲ್ಲೆ ಅಧ್ಯಕ್ಷರಾದ ಅನೀಲಕುಮಾರ ಬೇಲ್ದಾರ ರವರು ತಿಳಿಸಿದರು.
ಈ ಸಭೆಯಲ್ಲಿ ರಮೇಶ ಡಾಕುಳಗಿ ರವರು ಪ್ರಾಸ್ತವಿಕ ಮಾತನಾಡಿ ಒಳಮೀಸಲಾತಿ ಇದೊಂದು ರಾಜ್ಯದಲ್ಲಿ ಬಲಗೈ ಸಮುದಾಯದವರಿಗೆ 1% ಎಂದು ಗೊಂದಲ ಸೃಷ್ಟಿಯಾಗಿದೆ, ಇದನ್ನು ಇನ್ನೊಮ್ಮೆ ವೈಜ್ಞಾನಿಕವಾಗಿ ಜಾತಿ ಜನಗಣತಿ ಯಾಗಬೇಕು ಹಾಗೂ ಬಲಗೈ ಸಮುದಾಯದ ಜಾತಿಯವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಅವರಿಗೆ ನ್ಯಾಯಯುತವಾದ ಮೀಸಲಾತಿ ಸಿಗಬೇಕು ಹಾಗೂ ಸರ್ವ ಸಮುದಾದವರಿಗೆ ಅವರ ಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿ ಮಾಡಬೇಕೆಂದು ತಿಳಿಸಿದರು.
ಈ ಸಭೆಯಲ್ಲಿ ಸಮಿತಿ ರಚನೆ ಮಾಡಲಾಯಿತು. ಸಮಿತಿಯ ಗೌರವ ಅಧ್ಯಕ್ಷರಾಗಿ ಶಂಕರರಾವ ದೊಡ್ಡಿ ಅದ್ಯಕ್ಷರಾಗಿ ಅನೀಲಕುಮಾರ ಬೇಲ್ದಾರ, ಮಹಾ ಪ್ರಧಾನ ಕಾರ್ಯದರ್ಶಿಯಾಗಿ, ರಮೇಶ ಡಾಕುಳಗಿ ಕಾರ್ಯಾಧ್ಯಕ್ಷರಾಗಿ ರವಿ ಗಾಯಕವಾಡ , ವಿನೋದ ಅಪ್ಪೆ ಬಾಬುರಾವ ಪಾಸ್ವಾನ, ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ ನಾಟೇಕರ್, ಜಿಲ್ಲಾ ಸಂಯೋಜಕರಾಗಿ ಅಂಬಾದಾಸ ಗಾಯಕವಾಡ, ಖಜಾಂಚಿಯಾಗಿ ಸಂದೀಪ ಕಾಂಟೆ, ಹಾಗೂ ಹಿರಿಯ ಸಲಹೆಗಾರರಾಗಿ ಕೆ. ಪುಂಡಲಿಕರಾವ ಶಿವರಾಜ ಹಾಸನಕರ್, ಲಕ್ಷ್ಮಣರಾವ್ ಬುಳ್ಳಾ, ಲಕ್ಷ್ಮಣರಾವ್ ಗುಪ್ತ, ವಿದ್ಯಾಸಾಗರ ಶೀಂಧೆ, ಲಕ್ಷ್ಮಣ್ ಪುತ್ರ ಮಾಳಗೆ ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ಎಲ್ಲಾ ದಲಿತ ಸಂಘಟನೆಯ ಅಧ್ಯಕ್ಷರುಗಳನ್ನು ನೇಮಕ ಮಾಡಲಾಯಿತು.
ವರದಿ : ರೋಹನ್ ವಾಘಮಾರೆ