ಬೆಳಗಾವಿ/ ಬೈಲಹೊಗಲ: ಪಿ.ಎಂ ಪೋಷಣ್ ಸಹಾಯಕ ನಿರ್ದೇಶಕರಾದ ಪ್ರಕಾಶ ಮೆಳವಂಕಿ ಸರ್ಕಾರದ ಸೇವಾ ಅವಧಿ ನಿಯಮ ಉಲ್ಲಂಘಿಸಿ ಒಂದಷ್ಟು ರಾಜಕಾರಣಿಗಳು ಹಾಗೂ ಮೇಲಾಧಿಕಾರಿಗಳ ಪ್ರಭಾವ ಬಳಸಿಕೊಂಡು ಕಳೆದ ಹಲವು ವರ್ಷಗಳಿಂದ ಸತತವಾಗಿ ಇದೇ ಬೈಲಹೊಂಗಲ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಾರಣ ತಾವುಗಳು ಸರ್ಕಾರಿ ನೌಕರರ ಸೇವಾ ಅವಧಿ ನಿಯಮ ಪಾಲನೆ ಮಾಡುವುದಾದರೆ ತಕ್ಷಣ ಪಿ.ಎಂ. ಪೋಷಣ್ ಸಹಾಯಕ ನಿರ್ದೇಶಕ ಪ್ರಕಾಶ ಮೆಳವಂಕಿ ಇವರನ್ನು ತಕ್ಷಣ ನಿಯಮಾನುಸಾರ ಬೇರೆಡೆ ವರ್ಗಾವಣೆ ಮಾಡಬೇಕು, ಏಕೆಂದರೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಪಿ.ಎಂ. ಪೋಷಣ್ ಶಾಲಾ ಮಕ್ಕಳ ಬಿಸಿ ಊಟದ ಯೋಜನೆಯಲ್ಲಿ ನಡೆದ ಹಲವು ಅಕ್ರಮಗಳ ಕುರಿತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಕಿತ್ತೂರು ಹಾಗೂ ಬೈಲಹೊಂಗಲ ತಾಲೂಕಿನ ಹಲವು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಬಿಸಿ ಊಟದಲ್ಲಿ ನಡೆದ ಹಲವು ನ್ಯೂನತೆಗಳು ಹಾಗೂ ನಿಯಮ ಉಲ್ಲಂಘಿಸಿದ ಕುರಿತು ವಿಡಿಯೋ, ಆಡಿಯೋ, ಸಾಕ್ಷಿಗಳ ಸಮೇತ ಪಿ.ಎಂ ಪೋಷಣ ಸಹಾಯಕ ನಿರ್ದೇಶಕರಾದ ಪ್ರಕಾಶ ಮೆಳವಂಕಿ ರವರಿಗೆ ಒದಗಿಸಿದರೂ ಸಹ ಸಂಬಂಧಪಟ್ಟವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪವೆಸಗುತ್ತಿದ್ದಾರೆ.
ಇದರಿಂದ ಸರ್ಕಾರದ ಹಣ ದುರ್ಬಳಕೆಯಾಗುತ್ತಿದ್ದು ಈ ಅಕ್ರಮದಲ್ಲಿ ಸಹಾಯಕ ನಿರ್ದೇಶಕರಾದ ಪ್ರಕಾಶ ಮೆಳವಂಕಿ ರವರು ಸಹ ಭಾಗಿಯಾಗಿದ್ದಾರೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಹಾಗೂ ಈ ಅಧಿಕಾರಿಗಳು ತಮ್ಮದೇ ಮತಕ್ಷೇತ್ರದ ವ್ಯಾಪ್ತಿಯಲ್ಲಿಯೇ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ರಾಜಕೀಯ ಹಾಗೂ ಆಡಳಿತ ಪ್ರಭಾವ ಬಳಸಿ ಬೈಲಹೊಂಗಲ ಹಾಗೂ ಕಿತ್ತೂರು ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರ ಮೇಲೆ ಹಿಡಿತ ಸಾಧಿಸಿದ್ದು ತಮ್ಮ ಪ್ರಭಾವ ಬಳಸಿ ಪಿ.ಎಂ ಪೋಷಣ ಯೋಜನೆಯ ಕುರಿತು ಶಾಲಾ ಮುಖ್ಯೋಪಾಧ್ಯಾಯರು ಸಾರ್ವಜನಿಕರಿಗೆ ಮಾಹಿತಿ ನೀಡಬಾರದು ಎಂದು ಮೌಖಿಕ ಆದೇಶ ನೀಡಿದ್ದು, ಮುಖ್ಯೋಪಾಧ್ಯಾಯರು ಸಾರ್ವಜನಿಕರಿಗೆ ಈ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ.
ಇದರಿಂದಾಗಿ ಸಾರ್ವಜನಿಕರ ದಿಕ್ಕು ತಪ್ಪಿಸುವ ಕೆಲಸಕ್ಕೆ ಸಹಾಯಕ ನಿರ್ದೇಶಕರು ಮುಂದಾಗಿದ್ದು ಸರ್ಕಾರದ ಬಿಸಿ ಊಟದ ಯೋಜನೆ ಶಾಲಾ ಮಕ್ಕಳಿಗೆ ಸರಿಯಾಗಿ ತಲುಪುತ್ತಿಲ್ಲ. ಹೀಗಾಗಿ ಇವರನ್ನು ತಕ್ಷಣ ಬೇರೆಡೆ ವರ್ಗಾವಣೆ ಮಾಡಿ ಸರ್ಕಾರದ ಯೋಜನೆ ಸದ್ಬಳಕೆ ಆಗುವಂತೆ ನೋಡಿಕೊಳ್ಳಬೇಕು ಹಾಗೂ ಬಿಸಿ ಊಟದ ಅಕ್ರಮದಲ್ಲಿ ಭಾಗಿಯಾಗಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ತಾಲೂಕಾ ಕಾರ್ಯ ನಿರ್ವಾಹಕ ಅಧಿಕಾರಿಗಳು ಬೈಲಹೊಂಗಲ ರವರಿಗೆ ಮನವಿ ಸಲ್ಲಿಸಿದರು.
- ಕರುನಾಡ ಕಂದ