ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕಂಪ್ಲಿಯಲ್ಲಿ ನಡೆದ ಅಯ-ವ್ಯಯ ಬಜೆಟ್ : ಸುಮಾರು 6,59,7459 ರೂ.ಗಳ ಉಳಿತಾಯ ಬಜೆಟ್ ಮಂಡನೆ

ಬಳ್ಳಾರಿ/ ಕಂಪ್ಲಿ : ಪಟ್ಟಣದ ಕೊಟ್ಟಾಲ್ ರಸ್ತೆಯ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ಪುರಸಭೆಯ 2025-26ನೇ ಸಾಲಿನ ಆಯ-ವ್ಯಯ ಮಂಡನೆ ಸಭೆ ಬುಧವಾರ ನಡೆಯಿತು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್ ಇವರು ಪ್ರಸಕ್ತ ಸಾಲಿನಲ್ಲಿ ಪುರಸಭೆಗೆ 6,59,7459 ರೂ. ಉಳಿತಾಯ ಬಜೆಟ್ ಮಂಡಿಸಿದರು.
ನಂತರ ಅಧ್ಯಕ್ಷ ಭಟ್ಟ ಪ್ರಸಾದ್ ಬಜೆಟ್ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಇಲ್ಲಿನ ಎಲ್ಲಾ ವಾರ್ಡ್ ಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು. ಎಲ್ಲಾ ಸದಸ್ಯರ ಸಹಕಾರದಿಂದ ಬಜೆಟ್‌ನಲ್ಲಿ ಉಲ್ಲೇಖಿಸಿರುವ ಎಲ್ಲಾ ಕೆಲಸಗಳನ್ನು ಈಡೇರಿಸಲಾಗುವುದು ಎಂದರು. ತದನಂತರ ಬಜೆಟ್ ವಿಷಯವನ್ನು ಓದಿದರು.

ನಿರೀಕ್ಷಿಸಲಾದ ಆದಾಯ:
2 ಕೋಟಿ, 70 ಲಕ್ಷ ರೂ ಮನೆ ತೆರಿಗೆ, 75 ಲಕ್ಷ ರೂ. ನೀರಿನ ಶುಲ್ಕ, 35 ಲಕ್ಷ ರೂ. ಮಳಿಗೆ ಬಾಡಿಗೆ, 10 ಲಕ್ಷ ರೂ ಮಾರುಕಟ್ಟೆ ಇತರೆ ಶುಲ್ಕ, 47 ಲಕ್ಷ ರೂ. ಕಟ್ಟಡ ಕಾಯಿದೆ ಯೋಜನೆಗೆ ಸಂಬಂಧಿಸಿದಂತೆ ಶುಲ್ಕ, 2 ಕೋಟಿ ಅಭಿವೃದ್ಧಿ ಶುಲ್ಕ, 10 ಲಕ್ಷ ರೂ. ವ್ಯಾಪಾರ ಪರವಾನಿಗೆ ಶುಲ್ಕ ನಿರೀಕ್ಷಿಸಲಾದ ಸಾಮಾನ್ಯ ಆದಾಯಗಳಾಗಿವೆ.

ಸರಕಾರಿ ಆದಾಯ:
2 ಕೋಟಿ ರೂ 15ನೇ ಹಣಕಾಸು ಅನುದಾನ, 80 ಲಕ್ಷ ಸಂಸತ್ ಮತ್ತು ವಿಧಾನಸಭೆ ಸದಸ್ಯರ ಪ್ರದೇಶಾಭಿವೃದ್ಧಿ ಅನುದಾನ, 30 ಲಕ್ಷ ಪ್ರಕೃತಿ ವಿಕೋಪ ಪರಿಹಾರ ನಿಧಿ, 50 ಲಕ್ಷ ಕೆಕೆಆರ್ ಡಿ ಬಿ ಮತ್ತು ಇತರೆ ಅನುದಾನ, 10 ಕೋಟಿ ರೂ ನಗರೋತ್ಥಾನ ಯೋಜನೆ ಅನುದಾನ, 5 ಕೋಟಿ ರೂ ನೀರು ಸರಬರಾಜು ಯೋಜನೆ (ಕೆಯುಐಡಿಎಫ್‌ಸಿ) ಅನುದಾನ, 2 ಕೋಟಿ ರೂ ಸಿಎಂ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಅನುದಾನ, 50 ಲಕ್ಷ ರೂ. ಸ್ವಚ್ಛ ಭಾರತ್ ಯೋಜನೆ ಅನುದಾನ, 3 ಕೋಟಿ 70 ಲಕ್ಷ ರೂ ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನ, 5 ಕೋಟಿ ರೂ ಗಣಿ ಬಾಧಿತ (ಖನಿಜ ಸಂಪತ್ತು) ಪ್ರದೇಶಾಭಿವೃದ್ಧಿ ಅನುದಾನಗಳು ನಿರೀಕ್ಷಿಸಲಾದ ಸರಕಾರಿ ಆದಾಯಗಳಾಗಿವೆ.

ಸರಕಾರಿ ಖರ್ಚು:
2 ಕೊಟಿ ರೂ ವೆಚ್ಚದಲ್ಲಿ ನಡುವಲ ಮಸೀದಿಯಿಂದ ಜೋಗಿ ಕಾಲುವೆ ವರೆಗೆ ರಸ್ತೆ ಅಭಿವೃದ್ಧಿ, 4 ಕೋಟಿ 80 ಲಕ್ಷ ವೆಚ್ಚದ ರಸ್ತೆ ಬದಿಯ ಚರಂಡಿ ನಿರ್ಮಾಣ, 7 ಕೋಟಿ 80 ಲಕ್ಷದಲ್ಲಿ ಪಟ್ಟಣದ ರಸ್ತೆಗಳ ಅಭಿವೃದ್ಧಿಗಾಗಿ, 3 ಕೋಟಿ 40 ಲಕ್ಷ ವೆಚ್ಚದಲ್ಲಿ ಒಳ ಚರಂಡಿ ಮತ್ತು ನೀರು ಸರಬರಾಜು ಯೋಜನೆ ಖರ್ಚು, 50 ಲಕ್ಷ ರೂ ಪಟ್ಟಣದ ವೃತ್ತಗಳ ನಿರ್ಮಾಣ, 5 ಕೋಟಿ ರೂ ಸೋಮಪ್ಪ ಕೆರೆ ಅಭಿವೃದ್ಧಿ, 5 ಕೋಟಿ ರೂ ನೀರು ಸರಬರಾಜು ಯೋಜನೆ (ಕೆಯುಐಡಿಎಫ್‌ಸಿ) ಖರ್ಚು ಸೇರಿ ನಿರೀಕ್ಷಿಸಲಾದ ಸರಕಾರಿ ಖರ್ಚುಗಳಾಗಿವೆ.

ನಿರೀಕ್ಷಿಸಲಾದ ಖರ್ಚು:
3 ಕೋಟಿ, 41 ಲಕ್ಷ ರೂ ಸಾರ್ವಜನಿಕ ವಿದ್ಯುತ್ ಮತ್ತು ಬೀದಿ ದೀಪಗಳ ನಿರ್ವಹಣೆ ಖರ್ಚು, 1 ಕೋಟಿ, 11 ಲಕ್ಷ 20 ಸಾವಿರ ರೂ. ಸಾರ್ವಜನಿಕ ಆರೋಗ್ಯದ ಖರ್ಚು, 2 ಕೋಟಿ, 80 ಲಕ್ಷ ರೂ. ನೀರು ಸರಬರಾಜು ನಿರ್ವಹಣೆ ಖರ್ಚು, 1 ಕೋಟಿ, 33 ಲಕ್ಷ ರೂ ನೈರ್ಮಲ್ಯ ಮತ್ತು ಘಜನತ್ಯಾಜ್ಯ ವಸ್ತು ನಿರ್ವಹಣೆ ಖರ್ಚು, 2 ಕೋಟಿ 46 ಲಕ್ಷ , 50 ಸಾವಿರ ರೂ ಶೇ.24.10 ಎಸ್ಸಿ, ಎಸ್ಟಿ ಖರ್ಚು, 75 ಲಕ್ಷ , 68 ಸಾವಿರ ರೂ ಶೇಕಡ 7.25 ಇತರೆ ಬಡ ಜನರ ಕಲ್ಯಾಣ ಅಭಿವೃದ್ಧಿ ಖರ್ಚು, 51 ಲಕ್ಷ 80 ಸಾವಿರ ರೂ ಶೇಕಡ 5 ಅಂಗವಿಕಲರ ಕಲ್ಯಾಣ ಅಭಿವೃದ್ಧಿ ಖರ್ಚು, 25 ಲಕ್ಷ ರೂ ಸಾರ್ವಜನಿಕ ಉದ್ಯಾನಗಳ ನಿರ್ಮಾಣ ಖರ್ಚು ಸೇರಿ ನಿರೀಕ್ಷಿಸಲಾದ ಸಾಮಾನ್ಯ ಖರ್ಚುಗಳಾಗಿವೆ ಎಂದು ಲೆಕ್ಕಿಗ ರಮೇಶ ಓದಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಕೆ.ದುರುಗಣ್ಣ, ಉಪಾಧ್ಯಕ್ಷೆ ಸುಶೀಲಮ್ಮ, ಸದಸ್ಯರಾದ ಡಾ.ವಿ.ಎಲ್.ಬಾಬು, ಸಿ.ಅರ್.ಹನುಮಂತ, ಎನ್.ರಾಮಾಂಜನೇಯ, ಎಸ್.ಎಂ.ನಾಗರಾಜ, ವೀರಾಂಜನೇಯ, ಟಿ.ವಿ.ಸುದರ್ಶನರೆಡ್ಡಿ, ಆರ್.ಆಂಜನೇಯ, ಹೂಗಾರ ರಮೇಶ, ಮೌಲಾ, ಲೊಡ್ಡು ಹೊನ್ನೂರವಲಿ, ನಾಗಮ್ಮ, ಜಿ.ಸುಮಾ, ತಿಮ್ಮಕ್ಕ, ಮೌಲಾ, ಗುಡದಮ್ಮ, ಶಾಂತಲಾ ವಿದ್ಯಾಧರ, ಹೇಮಾವತಿ ಪೂರ್ಣಚಂದ್ರ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

ವರದಿ : ಜಿಲಾನ್ ಸಾಬ್ ಬಡಿಗೇರ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ