ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಗವಿಮಠದಲ್ಲಿ ಪಿ ಜಿ ಹಿರೇಮಠ ಹಾಗೂ ರೇವಣಸಿದ್ಧಯ್ಯ ಮಠಪತಿ ಉಭಯರಿಗೆ ” ಅಭಿನವ ರೇಣುಕ ಶ್ರೀ ” ಪ್ರಶಸ್ತಿ ಪ್ರದಾನ

ಬೀದರ /ಬಸವಕಲ್ಯಾಣ : ಇಂದು ಸಂಪತ್ತಿನ ಶ್ರೀಮಂತಿಕೆ ಸಾಕಷ್ಟು ಇದ್ದರೂ ಜ್ಞಾನದ ಬಡತನ ಸಾಕಷ್ಟು ಇರುವುದು ಕಳವಳ ಕಾರಿ ಸಂಗತಿ ಎಂದು ನಗರದ ಸಂಸ್ಥಾನ ಗವಿಮಠದ ಪೂಜ್ಯಶ್ರೀ ಷ. ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.
ಜಗದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಅಂಗವಾಗಿ ನಿನ್ನೆ ಸಾಯಂಕಾಲ ನಗರದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಆಯೋಜಿಸಿದ್ದ ” ಅಭಿನವ ರೇಣುಕ ಶ್ರೀ ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಗೋರ್ಟಾದ ಗುರುಪಾದ ಶಿವಾಚಾರ್ಯ ಪ್ರೌಢಶಾಲೆಯ ನಿವೃತ್ತ ಮುಖೋಪಾಧ್ಯಾಯ ಪಿ ಜಿ ಹಿರೇಮಠ ಹಾಗೂ ಬೇಲೂರಿನ ಸರ್ಕಾರಿ ಶಾಲೆಯ ನಿವೃತ್ತ ಪ್ರಥಮ ದರ್ಜೆ ಸಹಾಯಕ ರೇವಣಸಿದ್ಧಯ್ಯ ಮಠಪತಿ ಅವರಿಗೆ ” ಅಭಿನವ ರೇಣುಕ ಶ್ರೀ ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿ ಆಶೀರ್ವದಿಸಿ ಆಶೀರ್ವಚನ ದಯಪಾಲಿಸುತ್ತಾ ಮನುಷ್ಯನಿಗೆ ಅನ್ನ, ನೀರು ಎಷ್ಟು ಮುಖ್ಯವೋ ಜ್ಞಾನವೂ ಅಷ್ಟೇ ಮುಖ್ಯ, ಆ ಜ್ಞಾನ ದಿಂದ ಮಾತ್ರ ಸತ್ಯ ಯಾವುದು, ಅಸತ್ಯ ಯಾವುದು ಎಂದು ತಿಳಿಯಲು ಸಾಧ್ಯ. ಹಾಗೆಯೇ ಪ್ರಶಸ್ತಿಗೆ ಭಾಜನರಾದ ಪಿ ಜಿ ಹಿರೇಮಠ ಹಾಗೂ ರೇವಣಸಿದ್ಧಯ್ಯ ಮಠಪತಿ ಅವರು ತಮ್ಮ ವೃತ್ತಿಯ ಜೊತೆಗೆ ಸದಾ ವೀರಶೈವ ಧರ್ಮ ಮಾರ್ಗದಲ್ಲಿ ನಡೆದು ಧರ್ಮಕ್ಕೆ ಸಾರ್ಥಕ ಸೇವೆ ಸಲ್ಲಿಸಿದ ಸಾಧನೆಗಾಗಿ ಉಭಯರಿಗೂ 2025 ರ ” ಅಭಿನವ ರೇಣುಕ ಶ್ರೀ ” ಪ್ರದಾನ ಮಾಡಿ ಗೌರವಿಸಲಾಗಿದೆ ಎಂದು ನುಡಿದರು.
ನೇತೃತ್ವ ವಹಿಸಿದ್ದ ಮಂಠಾಳ ಚೌಕಿ ಮಠದ ಪೂಜ್ಯಶ್ರೀ ಮ. ನಿ. ಪ್ರ. ಅಭಿನವ ಚನ್ನಬಸವ ಮಹಾಸ್ವಾಮಿಗಳು ಆಶೀರ್ವಚನ ದಯಪಾಲಿಸುತ್ತಾ ಈ ಭಾಗದಲ್ಲಿ ಬಸವಕಲ್ಯಾಣ ಗವಿಮಠದ ಪೂಜ್ಯಶ್ರೀ ಡಾ. ಅಭಿನವ ಗುರುಗಳ ಧಾರ್ಮಿಕ, ಸಾಮಾಜಿಕ ಕಾರ್ಯಗಳು ಮಹತ್ವದ್ದಾಗಿವೆ. ಹಾನಗಲ್ಲ ಶ್ರೀ ಗುರು ಕುಮಾರ ಶಿವಯೋಗಿಗಳ ವಾಣಿಯಂತೆ ಡಾ. ಅಭಿವನ ಘನಲಿಂಗ ಗುರುಗಳು ಗವಿಮಠವನ್ನು ಘಟದಿಂದ ಮಠ ಮಾಡಿದ ಸ್ವಾಮಿಜೀಯವರು ಎಂದು ಸಂತಸ ವ್ಯಕ್ತಪಡಿಸಿದರು.
ಗೌರವ ಉಪಸ್ಥಿತಿ ಹೊಂದಿದ್ದ ಬೀದರನ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಮಹೇಶ ಪಾಟೀಲ ಅವರು ಮಾತನಾಡುತ್ತಾ ಗವಿಮಠದ ಪೂಜ್ಯ ಶ್ರೀ ಡಾ. ಅಭಿನವ ಘನಲಿಂಗ ಗುರುಗಳು ಕ್ರಿಯಾಶೀಲರಾಗಿದ್ದು ನಿರಂತರವಾಗಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಭಕ್ತರಿಗೆ ಸದಾ ಧರ್ಮ ಸಂಸ್ಕಾರ ಕೊಡುತ್ತಧರ್ಮ ಜಾಗೃತಿ ಕೈಗೊಂಡು ಸಮಾಜ ಸುಧಾರಿಸುವ ಮಹಾ ಮಾಡುತ್ತಿರುವುದು ನಮ್ಮೆಲ್ಲರ ಭಾಗ್ಯ. ಹಾಗೆಯೇ ಇಂದು ನಮ್ಮೆಲ್ಲರಲ್ಲಿ ಧರ್ಮ ಜಾಗೃತಿ ಅವಶ್ಯವಾಗಿದ್ದು, ಸ್ವಧರ್ಮದ ಅಭಿಮಾನ ಹೊಂದಿ ನಾವೆಲ್ಲರೂ ಒಂದು ಎಂಬ ಭಾವನೆ ತಾಳಿ ಧರ್ಮ ರಕ್ಷಣೆ ಮುಂದಾದಾಗ ಮಾತ್ರ ನಮ್ಮ ಅಸ್ತಿತ್ವ ಉಳಿಯಲು ಸಾಧ್ಯ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಪಿ ಜಿ ಹಿರೇಮಠ ಅವರು ಮಾತನಾಡುತ್ತ ಪ್ರಶಸ್ತಿ ಪಡೆಯುವುದರಿಂದ ಜವಾಬ್ದಾರಿ ಹೆಚ್ಚುತ್ತದೆ. ಶ್ರದ್ಧೆಯಿಂದ ವೃತ್ತಿ ಮಾಡಿ ಅಂದಿನ ರಾಷ್ಟ್ರಪತಿ ಡಾ. ಶಂಕರ ದಯಾಳ ಶರ್ಮಾ ಅವರಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವೆ, ಅದೇ ರೀತಿ ಇಂದು ಗವಿಮಠದ ಪೂಜ್ಯಶ್ರೀ ಡಾ. ಅಭಿನವ ಗುರುಗಳು ನನಗೆ ಅಭಿನವ ರೇಣುಕ ಶ್ರೀ ಪ್ರಶಸ್ತಿ ನೀಡಿ ಗೌರವಿಸಿ ಆಶೀರ್ವದಿಸಿದ್ದು ನನ್ನ ಸುದೈವ ಎಂದು ಕೃತಜ್ಞತೆ ಸಲ್ಲಿಸಿದರು.
ರೇವಣಸಿದ್ಧಯ್ಯ ಮಠಪತಿ, ಮುಖ್ಯ ಅತಿಥಿ ಬಿಡಿಪಿಸಿ ನಿರ್ದೇಶಕ ಮಲ್ಲಯ್ಯ ಹಿರೇಮಠ, ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಡಾ. ಬಸವರಾಜ ಸ್ವಾಮಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಅಭಿನವ ರೇಣುಕ ಶ್ರೀ ಪ್ರಶಸ್ತಿ ಪ್ರದಾನ :
ಗೋರ್ಟಾದ ಗುರುಪಾದ ಶಿವಾಚಾರ್ಯ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಪಿ. ಜಿ. ಹಿರೇಮಠ ಹಾಗೂ ಬೇಲೂರಿನ ಸರ್ಕಾರಿ ಶಾಲೆಯ ನಿವೃತ್ತ ಪ್ರಥಮ ದರ್ಜೆ ಸಹಾಯಕ ರೇವಣಸಿದ್ಧಯ್ಯ ಮಠಪತಿ ಈರ್ವರಿಗೆ 2025 ರ ” ಅಭಿನವ ರೇಣುಕ ಶ್ರೀ ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಶರಣಬಸಪ್ಪ ಅಲಗುಡೆ ವೇದಘೋಷ ಮಾಡಿದರು. ಯುವ ಕಲಾವಿದ ವಿನಯ ಹಿರೇಮಠ ಪ್ರಾರ್ಥನಾ ಗೀತೆ ಹಾಡಿದರು. ಪ್ರೊ. ರುದ್ರೇಶ್ವರ ಗೋರ್ಟಾ ಸ್ವಾಗತಿಸಿದರು. ಪ್ರೊ. ಸೂರ್ಯಕಾoತ ಶೀಲವಂತ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಗುರು ರಮೇಶ ರಾಜೋಳೆ ಸಂಚಾಲನೆ ಮಾಡಿದರು.
ಈ ಸಮಾರಂಭದಲ್ಲಿ ಬಸವಂತಪ್ಪ ಲವಾರೆ, ಮಲ್ಲಿಕಾರ್ಜುನ ನಂದಿ, ವಿಶ್ವನಾಥಪ್ಪ ಬಿರಾದಾರ, ಗುರುನಾಥ ಕೋಶೆಟ್ಟಿ, ಬಾಬುರಾವ ಉಳ್ಳೆ, ಡಾ. ವಿ. ಬಿ. ಮಂಡಿ, ಬಸತೀರ್ಥಯ್ಯ ಕಾಡಾದಿ, ಶ್ರೀಶೈಲ ವಾತಡೆ, ಬಾಬುಸ್ವಾಮಿ ಚನ್ನಳ್ಳಿ, ರಾಕೇಶ ಪುರವಂತ, ಶಾಂತವೀರ ಸ್ವಾಮಿ ಪೂಜಾರಿ, ಸದಾನಂದ ಕಣಜೆ, ಲೋಕೇಶ ಮಠಪತಿ, ಮಲ್ಲಿಕಾರ್ಜುನ ಅಲಗುಡೆ, ಸಂಜಯ ಜಾಧವ, ಬಸವರಾಜ ಬಂದಗೆ, ಕಸಾಪ ಅಧ್ಯಕ್ಷ ಶಾಂತಲಿಂಗ ಮಠಪತಿ, ಪ್ರೊ. ಬಸವರಾಜ ಸಿರಿ, ಪ್ರಾಚಾರ್ಯರಾದ ಶರಣು ದಂಡೆ, ಶಾಂತಯ್ಯ ಮಠಪತಿ, ಶಶಿಧರ ಪಾಟೀಲ, ಸಾಹಿತಿ ವೀರಶೆಟ್ಟಿ ಪಾಟೀಲ, ಶರಣಯ್ಯ ಮಠಪತಿ, ಗೋವಿಂದರೆಡ್ಡಿ ಕೋತಾಪಲ್ಲೇ, ವಿಮಲಾಬಾಯಿ ಬಿರಾದಾರ, ಸವಿತಾ ಸ್ವಾಮಿ, ಸುಮಂಗಲಾ ನಂದಿ, ಸರಸ್ವತಿ ಬೆಂಬಳಿ, ಸರೋಜನಿ ಹಿರೇಮಠ, ರೇಣುಕಾ ಮಠಪತಿ, ಶೀಲಾದೇವಿ ಲವಾರೆ, ಸತ್ಯವತಿ ಸ್ವಾಮಿ, ರೇಖಾ ಚಿಟ್ಟೆ, ಮಹಾನಂದಾ ಪುರವಂತ ಮೊದಲಾದವರು ಪಾಲ್ಗೊಂಡಿದ್ದರು.

ವರದಿ :ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ