ಚಾಮರಾಜನಗರ/ ಹನೂರು : ರೈತರ ಸಮಸ್ಯೆಗಳನ್ನು ಸಕಾಲದಲ್ಲಿ ಸ್ಪಂದಿಸಿ ನಮ್ಮ ಇಲಾಖೆಯ ವತಿಯಿಂದ ರೈತರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ ನಿಮ್ಮ ಸಮಸ್ಯೆಗಳಿಗೆ ನಮ್ಮ ಇಲಾಖೆಯು ಸದಾ ಸಿದ್ಧರಿದ್ದೇವೆ ಎಂದು ತಬಸ್ಸುo ಅಪ್ಸಾ ಬಾನು ತಿಳಿಸಿದರು. ಕಾರ್ಯನಿರ್ವಾಹಕ ಅಭಿಯಂತರರಾದ
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಉಪ ವಿಭಾಗ ಹನೂರು ಇವರ ವತಿಯಿಂದ ಹನೂರು ಪಟ್ಟಣದಲ್ಲಿ ಜನ ಸಂಪರ್ಕ ಸಭೆಯನ್ನು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ
ಕರ್ನಾಟಕ ರಾಜ್ಯ ರೈತ ಸಂಘ ಹನೂರು ಘಟಕದ ಅಧ್ಯಕ್ಷರಾದ ಅಮ್ಮದ್ ಖಾನ್ ಮಾತನಾಡಿ ನಿಮ್ಮ ಇಲಾಖೆಯಲ್ಲಿ ಮಾತನಾಡಲು ಬರುವ ಸಾಮಾನ್ಯ ಜನರಿಗೆ ಕಛೇರಿಯಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಮಾಡಿಲ್ಲ ಹಾಗೂ ಗಡಿ ಗ್ರಾಮಗಳಾದ ಗೋಪೀನಾಥo ಸೇರಿದಂತೆ ಹಲವಾರು ಗಡಿ ಪ್ರದೇಶದಲ್ಲಿ ಗ್ರಾಮಗಳ ಜನರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ವಿದ್ಯುತ್ ನೀಡುವುದಿಲ್ಲವೆಂದು ಹೇಳಿ ಸಾಮನ್ಯ ಜನರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಾರೆ ಅಂತಹ ಕಡೆ ಗುರುತಿಸಿ ನೀವು ವಿದ್ಯುತ್ ಒದಗಿಸಿ
ಕಾರ್ಯೋನ್ಮುಖರಾಗಬೇಕು ಎಂದರು.
ರೈತ ಸಂಘದ ಮುಖಂಡರು ಮಾತನಾಡಿ ರಾಮಪುರ ಭಾಗದಲ್ಲಿ ಒಂಟಿ ಮನೆ ಮಹಿಳೆಯರು ಇರುವ ಸ್ಥಳ ಗಳಲ್ಲಿ ಇಲಾಖೆಯ ಅಧಿಕಾರಿಗಳು ದರ್ಪ ತೋರುತ್ತಾರೆ ಅಂತಹವರ ವಿರುದ್ಧ ನೀವು ಯಾವ ಕ್ರಮ ಕೈಗೊಂಡಿದ್ದೀರಾ ಎಂದು ಪಳನಿಸ್ವಾಮಿ ಪ್ರಶ್ನಿಸಿದರು. ಇದೇ ಸಮಯದಲ್ಲಿ ಸುಮಾರು ಹದಿನೇಳು ದೂರುಗಳು ಸ್ವೀಕಾರವಾದವು.
ಇದೇ ಸಂದರ್ಭದಲ್ಲಿ ಎ ಇ ಇ ರಂಗಸ್ವಾಮಿ. ಇಲಾಖೆಯ ಅಧಿಕಾರಿಗಳಾದ ರಘುನಂದನ್ ವೆಂಕಟೇಶ್ ಮೂರ್ತಿ, ಮಾದೇಶ್, ಆನಂದ್ ನವಿನ್ ಹಾಗೂ ಗುತ್ತಿಗೆದಾರರಾದ ರವಿ ಪ್ರಕಾಶ್ ಮಾರಿಮುತ್ತು, ರೈತ ಮುಖಂಡರುಗಳಾದ ಅಮ್ಮಾದ್ ಖಾನ್ ಮಣೆಗಾರ್ ಪ್ರಸಾದ್ ಬೋಸ್ಕೊ ಹರೀಶ್ ರಾಜಣ್ಣ ದಂಟಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಶಿವು,
ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ :ಉಸ್ಮಾನ್ ಖಾನ್